WWE ಇತಿಹಾಸದ ಟಾಪ್ 5 ಹಾಟ್‌ ಮಹಿಳಾ ಕುಸ್ತಿಪಟುಗಳಿವರು..!

First Published | Jul 22, 2023, 6:28 PM IST

ಬೆಂಗಳೂರು: WWE ನಲ್ಲಿ ಪುರುಷ ಕುಸ್ತಪಟುಗಳು ಸಂಪಾದಿಸಿರುವ ಅಭಿಮಾನಿಗಳಿಗಿಂತ ಮಹಿಳಾ ಕುಸ್ತಿಪಟುಗಳು ಸಂಪಾದಿಸಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಮಹಿಳಾ ಕುಸ್ತಿಪಟುಗಳಿಗಾಗಿಯೇ ದಿವಾ(Diva) ಚಾಂಪಿಯನ್‌ಶಿಪ್‌ ಎನ್ನುವ ಹೆಸರಿನಲ್ಲಿ ಪಂದ್ಯಾಟಗಳನ್ನು ಆಯೋಜಿಸಲಾಗುತ್ತಿದೆ. ರಿಂಗ್‌ನಲ್ಲಿ ಪುರುಷ ಕುಸ್ತಿಪಟುಗಳು ಕೂಡಾ ನಾಚುವಂತೆ ಕಾದಾಡುವುದನ್ನು ನಾವು ಕಂಡಿದ್ದೇವೆ.

ಕೇವಲ ಆಟದಲ್ಲಿ ಮಾತ್ರವಲ್ಲ ನೋಟದಲ್ಲೂ WWE ಅಭಿಮಾನಿಗಳ ಮನದಲ್ಲಿ ಕಿಚ್ಚು ಹಚ್ಚಿಸಿರುವ ಟಾಪ್ 5 ಮಹಿಳಾ ರೆಸ್ಲರ್ಸ್‌ಗಳ ಪರಿಚಯ ಇಲ್ಲಿದೆ ನೋಡಿ

5. ಪೈಗೆ:

ಪೈಗೆ NXT ಚಾಂಪಿಯನ್‌ಶಿಪ್‌ ಪಟ್ಟ ಅಲಂಕರಿಸಿದ ಮೊದಲ ಕುಸ್ತಿಪಟುವಾಗಿದ್ದಾರೆ. ಪೈಗೆ 2014ರಲ್ಲಿ ಪ್ರೊ ರೆಸ್ಲಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದರು. ಪೈಗೆ WWE ದಿವಾಸ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಹಾಗೂ ಜನಪ್ರಿಯ ಕುಸ್ತಿಪಟುವೆನಿಸಿದ್ದಾರೆ.
 

4. ನಿಕ್ಕಿ ಬೆಲ್ಲಾ

ನಿಕ್ಕಿ ಬೆಲ್ಲಾ ಎರಡು ಬಾರಿ WWE ದಿವಾಸ್ ಪ್ರಶಸ್ತಿ ಗೆದ್ದ ಮಹಿಳಾ ರೆಸ್ಲರ್ ಆಗಿದ್ದಾರೆ. ನಿಕ್ಕಿ ಬೆಲ್ಲಾ 331 ದಿನಗಳ ಕಾಲ ದಿವಾಸ್‌ ಚಾಂಪಿಯನ್‌ ಪಟ್ಟದಲ್ಲೇ ಮುಂದುವರೆದಿದ್ದರು. ಚಾರ್ಲೊಟ್ಟೆ ಈಕೆಯ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದರು. 

Tap to resize

3. ಬೆಕೆ ಲಿಂಚ್:

WWE ಕುಸ್ತಿ ಇತಿಹಾಸದಲ್ಲೇ ಅತ್ಯಂತ ಸುಂದರ ಕುಸ್ತಿಪಟು ಯಾರೆಂದು ಕೇಳಿದರೆ, ಥಟ್ಟನೆ ನೆನಪಾಗುವ ಹೆಸರು ಬೆಕೆ ಲಿಂಚ್. ಐರ್ಲೆಂಡ್ ಮೂಲದ ಮಾಡೆಲ್‌ ಕಂ ಕುಸ್ತಿಪಟು ಬೆಕೆ ಲಿಂಚ್‌, ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.
 

2. ಅಲೆಕ್ಸಾ ಬ್ಲಿಸ್‌:

ಅಲೆಕ್ಸಾ ಬ್ಲಿಸ್‌, 2013ರ ಮೇ ತಿಂಗಳಿನಲ್ಲಿ WWE ವೃತ್ತಿಜೀವನ ಆರಂಭಿಸಿದರು. ಲೆಕ್ಸಿ ಎನ್ನುವ ನಿಕ್‌ ನೇಮ್ ಹೊಂದಿರುವ ಅಲೆಕ್ಸಾ ಬ್ಲಿಸ್, ಎರಡು ಬಾರಿ ಸ್ಮಾಕ್‌ಡೌನ್‌ ಮಹಿಳಾ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಮೊದಲ ಮಹಿಳಾ ರೆಸ್ಲರ್ ಎನಿಸಿದ್ದಾರೆ. ಈಕೆ ಯಾವ ಸೆಕ್ಸಿ ಮಾಡೆಲ್‌ಗೂ ಕಮ್ಮಿಯಿಲ್ಲ.

1. ರೌಂಡ ರೌಸೆ:

ಸದ್ಯದ ಹಾಟೆಸ್ಟ್‌ ಮಹಿಳಾ WWE ರೆಸ್ಲರ್ ಎಂದರೆ ಅದು ಬೇರ್ಯಾರು ಅಲ್ಲ, ಅದುವೇ ರೌಂಡ ರೌಸೆ. ದ ಎಕ್ಸ್‌ಪಾಂಡೇಬಲ್ 3, ಪ್ಯೂರಿಸ್‌ 7 ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Latest Videos

click me!