26ನೇ ವಸಂತಕ್ಕೆ ಕಾಲಿಟ್ಟ ಪವನ್ ಶೆರಾವತ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

Published : Jul 09, 2022, 04:59 PM ISTUpdated : Jul 09, 2022, 05:03 PM IST

ಬೆಂಗಳೂರು: ಪವನ್ ಕುಮಾರ್ ಶೆರಾವತ್ ಎನ್ನುವ ಹೆಸರು ಯಾವ ಕಬಡ್ಡಿ ಅಭಿಮಾನಿಗೆ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ರೈಡಿಂಗ್ ಎದುರಾಳಿ ಡಿಫೆನ್ಸ್ ಪಾಳಯದಲ್ಲಿ ನಡುಕ ಹುಟ್ಟಿಸುತ್ತಾ ಬಂದಿರುವ ಪವನ್ ಶೆರಾವತ್ ಇಂದು(ಜುಲೈ 09-2022) ತಮ್ಮ 26ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪವನ್ ಶೆರಾವತ್ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ. Huttu habbadha shubashayagalu! 🥳 Here's wishing the heart of Namma #BullSquad, Pawan Sehrawat a very Happy Birthday! 🍰🤩#HappyBirthday #FullChargeMaadi #BengaluruBulls pic.twitter.com/zbvrWfUfW9 — Bengaluru Bulls (@BengaluruBulls) July 9, 2022

PREV
17
26ನೇ ವಸಂತಕ್ಕೆ ಕಾಲಿಟ್ಟ ಪವನ್ ಶೆರಾವತ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!
Bengaluru bulls pawan Sherawat

ಪವನ್ ಕುಮಾರ್ ಶೆರಾವತ್ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ಅಮೋಘ ಪ್ರದರ್ಶನದ ಮೂಲಕ ಕಬಡ್ಡಿ ಅಭಿಮಾನಿಗಳ ಮನೆ ಮಾತಾಗಿದ್ದಾರೆ. ಪವನ್ ಶೆರಾವತ್‌ಗೆ ಹೈ ಪ್ಲೈಯರ್ ಎನ್ನುವ ನಿಕ್‌ ನೇಮ್‌ ಕೂಡಾ ಇದೆ.

27

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ಅದ್ಭುತ ಪ್ರದರ್ಶನ ತೋರುವ ಮೂಲಕ ಪವನ್ ಶೆರಾವತ್ ಭಾರತ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆದು ಮಿಂಚಿದ್ದಾರೆ. ಇನ್ನು ಭಾರತ ಹಾಗೂ ಬೆಂಗಳೂರು ಬುಲ್ಸ್ ಮಾತ್ರವಲ್ಲದೇ ಇಂಡಿಯನ್ ರೈಲ್ವೇಸ್‌ ತಂಡದ ಪರವೂ ಶೆರಾವತ್ ಕಬಡ್ಡಿಯಾಡಿ ತೊಡೆತಟ್ಟಿದ್ದಾರೆ.

37

2015ರಲ್ಲಿ ಬೆಂಗಳೂರು ಬುಲ್ಸ್ ಪರ ಪ್ರೊ ಕಬಡ್ಡಿ ಲೀಗ್‌ಗೆ ಪಾದಾರ್ಪಣೆ ಮಾಡಿದ್ದ ಪವನ್ ಶೆರಾವತ್, ಮೂರನೇ ಅವೃತ್ತಿಯ ಪಿಕೆಎಲ್‌ನಲ್ಲಿ 45 ರೈಡಿಂಗ್ ಅಂಕ ಗಳಿಸಿ, ಬುಲ್ಸ್ ಪರ ಯಶಸ್ವಿ ರೈಡರ್ ಎನಿಸಿದ್ದರು. ಮರು ವರ್ಷ ಪವನ್ ಹೆಚ್ಚು ಕಮಾಲ್ ಮಾಡಲು ಸಾಧ್ಯವಾಗಿರಲಿಲ್ಲ. 2016ರಲ್ಲಿ ಪವನ್‌ ಶೆರಾವತ್ 10 ಪಂದ್ಯಗಳಿಂದ 11 ಅಂಕಗಳನ್ನಷ್ಟೇ ಗಳಿಸಲು ಯಶಸ್ವಿಯಾಗಿದ್ದರು.

47

ಇನ್ನು 2017ರ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪವನ್ ಕುಮಾರ್ ಶೆರಾವತ್ ಅವರನ್ನು ಗುಜರಾತ್ ಫಾರ್ಚೂನ್‌ಜೈಂಟ್ಸ್‌ ತಂಡವು ಖರೀದಿಸಿತ್ತು. ಆದರೆ ಬಹುತೇಕ ಪಂದ್ಯಗಳಲ್ಲಿ ಪವನ್ ಬೆಂಚ್ ಕಾಯಿಸಿದ್ದರು.

57

2018ರಲ್ಲಿ ಮತ್ತೆ ಬೆಂಗಳೂರು ಬುಲ್ಸ್ ತಂಡಕ್ಕೆ ಮರಳಿದ ಪವನ್ ಕುಮಾರ್ ಶೆರಾವತ್‌ಗೆ ತಿರುಗಿ ನೋಡುವ ಪ್ರಮೆಯವೇ ಬರಲಿಲ್ಲ. ಪ್ರೊ ಕಬಡ್ಡಿ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರುವ ಮೂಲಕ ಬೆಂಗಳೂರು ಬುಲ್ಸ್ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. 2018ರಲ್ಲಿ ಪವನ್ ಶೆರಾವತ್ ಪಿಕೆಎಲ್ ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು. ಇದಷ್ಟೇ ಅಲ್ಲದೇ ಗುಜರಾತ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಬರೋಬ್ಬರಿ 22 ಅಂಕ ಗಳಿಸುವ ಮೂಲಕ, ಫೈನಲ್‌ ಪಂದ್ಯದಲ್ಲಿ ಅತಿಹೆಚ್ಚು ಅಂಕಗಳಿಸಿದ ಆಟಗಾರ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ.

67

ಭಾರತ ತಂಡದ ಸ್ಟಾರ್ ಕಬಡ್ಡಿ ಆಟಗಾರ ಆಗಿರುವ ಪವನ್ ಶೆರಾವತ್, 13ನೇ ಸೌಥ್-ಏಷ್ಯನ್‌ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ತಂಡವು ಚಿನ್ನದ ಪದಕ ಗೆಲ್ಲುವಲ್ಲಿ ಮಹತ್ತರ ಪಾತ್ರವಹಿಸಿದ್ದರು.

77
Bengaluru Bulls

ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕಬಡ್ಡಿ ಅಭಿಮಾನಿಗಳನ್ನು ರಂಜಿಸುತ್ತಿರುವ ಶೆರಾವತ್‌ಗೆ ಏಷ್ಯಾನೆಟ್ ಸುವರ್ಣನ್ಯೂಸ್‌. ಕಾಂ ಬಳಗದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪವನ್‌ ನಿಮ್ಮಿಂದ ಮತ್ತಷ್ಟು ಅತ್ಯುತ್ತಮ ಪ್ರದರ್ಶನ ಮೂಡಿ ಬರಲಿ ಎಂದು ಹಾರೈಸುತ್ತಿದ್ದೇವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories