India vs England ಟೆಸ್ಟ್‌: ಲಂಡನ್‌ನಲ್ಲಿ ಎಂಜಾಯ್‌ ಮಾಡುತ್ತಿರುವ ಆಟಗಾರರ ಫೋಟೋ ವೈರಲ್‌

Published : Jul 05, 2022, 05:34 PM IST

ಭಾರತ ಕ್ರಿಕೆಟ್ ತಂಡವು (Indian cricket team) ಪ್ರಸ್ತುತ ಸಂಪೂರ್ಣ ಆಕ್ಷನ್‌ನಲ್ಲಿದೆ. ಒಂದೆಡೆ, ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ, ತಂಡವು ಇಂಗ್ಲೆಂಡ್‌ನೊಂದಿಗೆ ಟೆಸ್ಟ್ ಪಂದ್ಯವನ್ನು ಆಡಿ ಸೋತಿದೆ. ಇತ್ತೀಚೆಗಷ್ಟೇ ಐರ್ಲೆಂಡ್ ತಂಡವನ್ನು ಮಣಿಸಿರುವ ಯುವ ಭಾರತ ತಂಡದ ಆಟಗಾರರು ಈ ವೇಳೆ ಲಂಡನ್ ನಲ್ಲಿ ಚಿಲ್‌ ಮಾಡುತ್ತಿರುವುದು ಕಂಡು ಬರುತ್ತಿದೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ.

PREV
17
 India vs England ಟೆಸ್ಟ್‌: ಲಂಡನ್‌ನಲ್ಲಿ ಎಂಜಾಯ್‌ ಮಾಡುತ್ತಿರುವ ಆಟಗಾರರ ಫೋಟೋ ವೈರಲ್‌

ಭಾರತೀಯ ತಂಡದ ಆಟಗಾರರು ತಮ್ಮ ಆಟದ ಜೊತೆಗೆ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಕಾರಣದಿಂದ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಅವರ ಫೋಟೋಗಳು ಯಾವಾಗಲೂ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುತ್ತವೆ. 

27

ಈ ನಡುವೆ ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಭಾರತ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಐರ್ಲೆಂಡ್‌ನಿಂದ ನೇರವಾಗಿ ಲಂಡನ್ ತಲುಪಿದರು. ಅಲ್ಲಿಂದ ಅವರು ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಹಾರ್ದಿಕ್ ಕಪ್ಪು ಪ್ಯಾಂಟ್, ಕಪ್ಪು ಟಿ-ಶರ್ಟ್ ಮತ್ತು ಕಪ್ಪು ಓವರ್ಕೋಟ್‌ ಜೊತೆಗೆ ಕಪ್ಪು ಬಣ್ಣದ ಕನ್ನಡಕವನ್ನು ಧರಿಸಿ ತುಂಬಾ ಹ್ಯಾಂಡ್‌ಸಮ್‌ ಆಗಿ ಕಾಣುತ್ತಿದ್ದಾರೆ.
 


 

 

37

ಈ ಫೋಟೋದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು  ಯುಜ್ವೇಂದ್ರ ಚಾಹಲ್ ಪರಸ್ಪರ  ಒಬ್ಬರ ಮುಖ ಒಬ್ಬರು ನೋಡುತ್ತಾ ಫೋಟೋಗೆ ಪೋಸ್‌ ನೀಡಿದ್ದಾರೆ ಮತ್ತು ಒಬ್ಬರಿಗೊಬ್ಬರು ಲುಕ್ ನೀಡುತ್ತಿದ್ದಾರೆ.


 

47

ಯುಜ್ವೇಂದ್ರ ಚಾಹಲ್ ತಮ್ಮ ತಮಾಷೆಯ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಲಂಡನ್‌ನಲ್ಲಿ ತಮ್ಮ ಪ್ರಸಿದ್ಧ ಭಂಗಿಯನ್ನು ಮರುಸೃಷ್ಟಿಸುತ್ತಿದ್ದರು ಮತ್ತು ಕುರ್ಚಿಯ ಮೇಲೆ ಕುಳಿತು ಅವರ ಸಾಂಪ್ರದಾಯಿಕ ಪೋಸ್‌ ನೀಡಿದ್ದಾರೆ .

57

ಯುಜುವೇಂದ್ರ ಚಹಾಲ್ ಕ್ರಿಕೆಟ್‌ನ ಹೊರತಾಗಿ, ಅವರು ರಾಷ್ಟ್ರೀಯ ಚೆಸ್ ಆಟಗಾರರಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಜತೆ ಚಹಾಲ್‌ ಚೆಸ್ ಆಡುತ್ತಿರುವುದು ಕಂಡು ಬಂತು.  

67

ಈ ವೇಳೆ ಭಾರತ ತಂಡದ ಯುವ ಆಟಗಾರ ವೆಂಕಟೇಶ್ ಅಯ್ಯರ್ ಕೂಡ   ಕಾಣಿಸಿಕೊಂಡಿದ್ದು, ಲಂಡನ್‌ನ ಪ್ರಸಿದ್ಧ ಸ್ಥಳದಲ್ಲಿ ಕುಳಿತು ಪೋಸ್ ನೀಡಿದ್ದಾರೆ. ಆಟಗಾರರ ಹೊರತಾಗಿ ಆಟಗಾರರ ಕುಟುಂಬಸ್ಥರು ಲಂಡನ್‌ನಲ್ಲಿ ಮೋಜು ಮಸ್ತಿಯಲ್ಲಿದ್ದಾರೆ.

77

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಯುಜುವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಲಂಡನ್‌ನಿಂದ ಅವರ ಅನೇಕ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

Read more Photos on
click me!

Recommended Stories