Arun Lal and Bulbul Saha after Wedding
ಇವರ ಮದುವೆಗೆ 28 ವರ್ಷಗಳ ಅಂತರವಿರುವ ಕಾರಣ, ಅರುಣ್ ಲಾಲ್ ಹಾಗೂ ಬುಲ್ ಬುಲ್ ಸಾಹಾ ಅವರ ಮದುವೆ ಭಾರತದಾದ್ಯಂತ (India) ಚರ್ಚೆಯ ವಿಚಾರವಾಗಿತ್ತು. ಸೋಮವಾರ ಕೋಲ್ಕತ್ತದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರಿಬ್ಬರೂ ಸಪ್ತಪದಿ ತುಳಿದಿದ್ದಾರೆ. ಬುಲ್ ಬುಲ್ ಸಾಹಾ ಮದುವೆಯ ಚಿತ್ರಗಳನ್ನು ಫೇಸ್ ಬುಕ್ (Facebook) ನಲ್ಲಿಯೂ ಹಂಚಿಕೊಂಡಿದ್ದಾರೆ.
Arun Lal marries Bulbul Saha
ಮದುವೆ ಮುಗಿದ ಬಳಿಕ ಪತ್ರಕರ್ತರಿಂದ ಇವರಿಬ್ಬರಿಗೆ ಮುಖ್ಯ ಪ್ರಶ್ನೆಯೊಂದು ಎದುರಾಯಿತು. ಬಂಗಾಳ ರಣಜಿ ತಂಡದ ಕೋಚ್ ಗೆ (Bengal ranaji Team Coach) ಮಾಧ್ಯಮದವರು ಹನಿಮೂನ್ ಗೆ ಎಲ್ಲಿಗೆ ಹೋಗ್ಬೇಕು ಅಂದ್ಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಅರುಣ್ ಲಾಲ್ ನೀಡಿದ ಉತ್ತರವೂ ಅದ್ಭುತವಾಗಿತ್ತು.
Arun Lal ties knot with Bulbul Saha
ರಣಜಿ ಟ್ರೋಫಿಯೇ ನಮಗೆ ಹನಿಮೂನ್ ಎಂದು ಅರುಣ್ ಲಾಲ್ ಉತ್ತರ ನೀಡಿದ್ದಾರೆ. ಜೂನ್ 4-8ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ನಲ್ಲಿ ಬಂಗಾಳ ತಂಡ ಜಾರ್ಖಂಡ್ ಸವಾಲನ್ನು ಎದುರಿಸಲಿದ್ದು, ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ.
Arun Lal and Bulbul Saha
ಬಂಗಾಳ ಕ್ರಿಕೆಟ್ ತಂಡದ ಮುಖ್ಯಕೋಚ್ ಆಗಿರುವ ಅರುಣ್ ಲಾಲ್ ಮದುವೆಯ ಬಗ್ಗೆ ಮಾತನಾಡಿದ್ದು, "ಮತ್ತೊಮ್ಮೆ ಜೀವನದಲ್ಲಿ ಪುನರಾರಂಭ ಮಾಡಲು ತುಂಬಾ ಖುಷಿಯಾಗುತ್ತಿದೆ. ಬುಲ್ ಬುಲ್ ಅವರನ್ನು ನಾನು ತುಂಬಾ ಪ್ರೀತಿಸುತ್ತೇನೆ. ಜೀವನದ ಮುಂದಿನ ದಿನಗಳಲ್ಲಿ ಉತ್ತಮ ದಂಪತಿಗಳಾಗಿ ಬದುಕುತ್ತೇವೆ' ಎಂದು ಹೇಳಿದರು.
Bulbul Saha Showing Mehendi
ಅನಾರೋಗ್ಯಕ್ಕೆ ತುತ್ತಾಗಿರುವ ಮೊದಲ ಪತ್ನಿ ರೀನಾ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ಅರುಣ್ ಲಾಲ್, ಅವರ ಸಮ್ಮತಿಯೊಂದಿಗೆ 2ನೇ ವಿವಾಹವಾಗಿದ್ದಾರೆ ಎನ್ನುವುದು ವಿಶೇಷ. ಮದುವೆಯ ಸಮಾರಂಭದಲ್ಲಿ ದಂಪತಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಲ್ಲದೆ, ಮದುವೆಯ ನೋಂದಣಿ ಪತ್ರಕ್ಕೂ ಸಹಿ ಹಾಕಿದರು.
Arun Lal Kisses BulBul Saha
ಸೋಮವಾರ ರಾತ್ರಿ ಖಾಸಗಿ ಹೋಟೆಲ್ ನಲ್ಲಿಯೇ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.