ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಓಪನರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ. ಬ್ಯಾಟರ್ ಆಗಿ ಮಾತ್ರವಲ್ಲದೇ ನಾಯಕನಾಗಿಯೂ ರೋಹಿತ್ ಶರ್ಮಾ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿದ್ದಾರೆ.
ರೋಹಿತ್ ಕ್ರಿಕೆಟ್ ಬದುಕಿಗೆ ಸರ್ವಸ್ವವನ್ನು ತ್ಯಾಗ ಮಾಡಿದ ಕುಟುಂಬ:
ರೋಹಿತ್ ಶರ್ಮಾ, ಆರು ವರ್ಷದವರಾಗಿದ್ದಾಗಲೇ ಕ್ರಿಕೆಟ್ ಕೆರಿಯರ್ ಆರಂಭಿಸಿದರು. ರೋಹಿತ್ ಶರ್ಮಾ ಪೋಷಕರು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಹೊಂದಿರುವವರು. 1999ರಲ್ಲಿ ರೋಹಿತ್ ಶರ್ಮಾ ಅವರಿಗೆ ಕ್ರಿಕೆಟ್ ಅಕಾಡೆಮಿಗೆ ದಾಖಲು ಮಾಡಲು ಅವರ ಕುಟುಂಬದವರು ಸಾಕಷ್ಟು ಹಣ ಸಹಾಯ ಮಾಡಿದ್ದರು.
45 ಮೊಟ್ಟೆಗಳನ್ನು ಚಾಲೆಂಜ್ ಸ್ವೀಕರಿಸಿದ್ದ ಹಿಟ್‌ಮ್ಯಾನ್
ರೋಹಿತ್ ಶರ್ಮಾ ಸಿಡಿಸುವ ಸಿಕ್ಸರ್‌ಗಳು ಬೌಂಡರಿ ಗೆರೆ ಮಾತ್ರವಲ್ಲದೇ ಒಮ್ಮೊಮ್ಮೆ ಮೈದಾನದಾಚೆಗೂ ಚೆಂಡು ಹೋಗಿ ಬಿದ್ದಿದ್ದನ್ನು ನೋಡಿದ್ದೇವೆ. ಇಷ್ಟೊಂದು ಶಕ್ತಿ ರೋಹಿತ್ ಶರ್ಮಾಗೆ ಹೇಗೆ ಬಂದಿರಬಹುದು ಎಂದು ಹುಡುಕುತ್ತಾ ಹೊರಟರೆ ಸಿಗುವ ಉತ್ತರ, ಅವರೊಬ್ಬ ಅಪ್ಪಟ ಸಸ್ಯಾಹಾರಿ. ಒಮ್ಮೆ ಅವರ ಸ್ನೇಹಿತರೊಬ್ಬರ ಚಾಲೆಂಜ್ ಸ್ವೀಕರಿಸಿ ಸತತ 45 ಮೊಟ್ಟೆಗಳನ್ನು ಸುಲಭವಾಗಿ ಸೇವಿಸಿ ಗಮನ ಸೆಳೆದಿದ್ದರು.
ಫುಟ್ಬಾಲ್ ಮೇಲಿದೆ ರೋಹಿತ್ ಶರ್ಮಾಗೆ ವಿಶೇಷ ಪ್ರೀತಿ
ರೋಹಿತ್ ಶರ್ಮಾ ಆಧುನಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕ್ರಿಕೆಟಿಗ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಹಿಟ್‌ಮ್ಯಾನ್ ಕ್ರಿಕೆಟ್ ಹೊರತಾಗಿ, ಫುಟ್ಬಾಲ್ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ರೋಹಿತ್ ಶರ್ಮಾ ಅವರ ಫೇವರೇಟ್ ಫುಟ್ಬಾಲ್ ಕ್ಲಬ್ ಎಂದರೆ ಅದು ರಿಯಲ್ ಮ್ಯಾಡ್ರಿಡ್.
ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ
ರೋಹಿತ್ ಶರ್ಮಾ, ಐದು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ ಅತಿಹೆಚ್ಚು ಟ್ರೋಫಿ(6 ಬಾರಿ) ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ.(2009ರ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆಗ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆಗಿತ್ತು)