RCB playoffs scenarios: 5 ಪಂದ್ಯ ಸೋತರೇನಂತೆ ಈಗಲೂ ಇದೆ RCBಗೆ ಪ್ಲೇ ಆಫ್‌ಗೇರಲು ಅವಕಾಶ..!

First Published | May 2, 2022, 1:36 PM IST

ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಭರ್ಜರಿ ಆರಂಭವನ್ನು ಪಡೆದಿತ್ತು. ಆದರೆ ಇದೀಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಹೀಗಿರುವಾಗಲೇ ಆರ್‌ಸಿಬಿ ಪ್ಲೇ ಆಫ್‌ಗೇರುವ ಸಾಧ್ಯತೆಗಳ ಕುರಿತಂತೆ ಲೆಕ್ಕಾಚಾರಗಳು ಆರಂಭವಾಗಿವೆ. ಈ ಸಂದರ್ಭದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಹಾದಿ ಹೇಗಿದೆ ಎನ್ನುವುದರ ಕಂಪ್ಲೀಟ್ ಇಲ್ಲಿದೆ ನೋಡಿ

RCB Jersey

ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿತಾದರೂ, ಆ ಬಳಿಕ ಭರ್ಜರಿ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿತ್ತು. ಸದ್ಯ ಆರ್‌ಸಿಬಿ ತಂಡವು 10 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 5 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

Virat Kohli

ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದು ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿದೆ. ಆದರೆ ಕಳೆದ ಪಂದ್ಯದಲ್ಲಿ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದು, ಆರ್‌ಸಿಬಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. 

Tap to resize

ಇದರ ಜತೆಗೆ ಆರ್‌ಸಿಬಿ ತಂಡವು ಬೌಲಿಂಗ್‌ನಲ್ಲಿ ಕೊಂಚ ಎಡುವುತ್ತಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮಾರಕ ದಾಳಿ ಸಂಘಟಿಸಿದ್ದ ಮೊಹಮ್ಮದ್ ಸಿರಾಜ್, ಈ ಬಾರಿ ಕೊಂಚ ದುಬಾಯಿಯಾಗುತ್ತಿದ್ದು, ವಿಕೆಟ್ ಕಬಳಿಸಲು ಸಹ ವಿಫಲರಾಗುತ್ತಿರುವುದು ಆರ್‌ಸಿಬಿ ಸೋಲಿಗೆ ಕಾರಣವಾಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಒಟ್ಟು 10 ಪಂದ್ಯಗಳನ್ನಾಡಿದ್ದು, ಲೀಗ್‌ ಹಂತದಲ್ಲಿ ಇನ್ನೂ 4 ನಾಲ್ಕು ಪಂದ್ಯಗಳನ್ನು ಆಡಲಿದೆ. ಈ 4 ಪಂದ್ಯಗಳಲ್ಲಿ ಆರ್‌ಸಿಬಿ ಎಷ್ಟು ಪಂದ್ಯಗಳನ್ನು ಜಯಿಸಿದರೆ, ಪ್ಲೇ ಆಫ್ ಸ್ಥಾನಕ್ಕೇರಲಿದೆ ಎನ್ನುವ ಲೆಕ್ಕಾಚಾರವನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಇನ್ನುಳಿದ 4 ಪಂದ್ಯಗಳನ್ನು ಚೆನ್ನೈ ಸೂಪರ್ ಕಿಂಗ್ಸ್‌, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ದ ಆಡಲಿದೆ. ಸದ್ಯ 5 ಗೆಲುವುಗಳೊಂದಿಗೆ 10 ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ ಲೀಗ್ ಹಂತದ ಇನ್ನುಳಿದ 4 ಪಂದ್ಯಗಳನ್ನು ಜಯಿಸಿದರೆ 18 ಅಂಕಗಳು ಪಡೆಯಲಿದೆ.

ಆರ್‌ಸಿಬಿ ತಂಡವು ಲೀಗ್ ಹಂತದ 4 ಪಂದ್ಯಗಳನ್ನು ಭಾರೀ ಅಂತರದಲ್ಲಿ ಜಯಿಸಿದರೆ, ಕೇವಲ ಪ್ಲೇ ಆಫ್‌ಗೆ ಕ್ವಾಲಿಫೈಯರ್ ಆಗುವುದು ಮಾತ್ರವಲ್ಲ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶವೂ ಇದೆ. ಆದರೆ ಆರ್‌ಸಿಬಿ ಕೊನೆಯ 4 ಪಂದ್ಯಗಳನ್ನು ಭಾರೀ ಅಂತರದಲ್ಲಿ ಜಯಿಸಿಬೇಕಿದೆಯಷ್ಟೇ.

ಇನ್ನು ಎರಡನೇ ಸಾಧ್ಯತೆ:

ಎರಡನೇ ಸಾಧ್ಯತೆಯನ್ನು ಗಮನಿಸುವುದಾದರೇ, ಆರ್‌ಸಿಬಿ ತಂಡವು ಕೊನೆಯ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಜಯಿಸಿದರೂ ಕೂಡಾ ಪ್ಲೇ ಆಫ್‌ಗೇರಲು ಅವಕಾಶವಿದೆ. ಆದರೆ ಅದೃಷ್ಟ ಕೈಹಿಡಿಯಬೇಕಷ್ಟೇ. ಆರ್‌ಸಿಬಿ 3 ಪಂದ್ಯಗಳನ್ನು ಜಯಿಸಿದರೆ ಒಟ್ಟು 16 ಅಂಕಗಳನ್ನು ಸಂಪಾದಿಸಿದಂತಾಗುತ್ತಿದೆ. ಈ ಮೊದಲು 8 ತಂಡಗಳಿದ್ದಾಗ 16 ಅಂಕ ಪ್ಲೇ ಆಫ್‌ಗೇರಲು ಸಾಕಾಗುತ್ತಿತ್ತು.
 

ಆದರೆ ಇದೀಗ 10 ತಂಡಗಳು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವುದರಿಂದ, ಉಳಿದ ತಂಡಗಳು 16 ಅಂಕಗಳನ್ನು ಮಾತ್ರ ಗಳಿಸಿದರೆ, ಇದೇ ವೇಳೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 3 ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆದ್ದು ನೆಟ್‌ ರನ್‌ರೇಟ್‌ ಸುಧಾರಿಸಿಕೊಂಡರೆ ಕನಿಷ್ಠ ಪಕ್ಷ 4ನೇ ತಂಡವಾಗಿಯಾದರೂ ಪ್ಲೇ ಆಫ್‌ಗೆ ಲಗ್ಗೆಯಿಡುವ ಸಾಧ್ಯತೆಯಿದೆ.
 

ಸನ್‌ರೈಸರ್ಸ್‌ ಹೈದರಾಬಾದ್ ಎದುರು ಆರ್‌ಸಿಬಿ ಭಾರೀ ಅಂತರದ ಸೋಲು ಕಂಡಿದ್ದು, ಫಾಫ್ ಪಡೆಯ ನೆಟ್‌ ರನ್‌ರೇಟ್‌ಗೆ ದೊಡ್ಡ ಹೊಡೆತ ಕೊಟ್ಟಿದೆ. ಸದ್ಯ ಆರ್‌ಸಿಬಿ ನೆಟ್‌ ರನ್‌ರೇಟ್ (-0.558)ನೆಗೆಟಿವ್ ಇದ್ದು, ಮೂರು ಪಂದ್ಯಗಳನ್ನು ಭಾರೀ ಅಂತರದಲ್ಲಿ ಜಯಿಸಬೇಕಿದೆ. ಒಂದು ವೇಳೆ ಆರ್‌ಸಿಬಿ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಸೋತರೆ, ಪ್ಲೇ ಆಫ್‌ ಪ್ರವೇಶದ ಕನಸು ಭಗ್ನವಾಗಲಿದೆ. 

Latest Videos

click me!