ಥಾಯ್ಲೆಂಡ್‌ನಲ್ಲಿ ಸೈನಾ ನೆಹ್ವಾಲ್‌, ಬೀಚ್‌ಸೈಡ್‌ನಲ್ಲಿ 'ಹಾಟ್‌' ಆದ ಬ್ಯಾಡ್ಮಿಂಟನ್‌ ಸುಂದರಿ!

First Published | Dec 22, 2023, 7:41 PM IST

ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ತಮ್ಮ ಪತಿ ಹಾಗೂ ಬ್ಯಾಡ್ಮಿಂಟನ್‌ ಆ ಟಗಾರ ಪಾರುಪಲ್ಲಿ ಕಶ್ಯಪ್‌ ಜೊತೆ ಥಾಯ್ಲೆಂಡ್‌ ಪ್ರವಾಸದಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ಟ್ರಿಪ್‌ನ ಹಾಟ್‌ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಭಾರತ ತಂಡದ ಪ್ರಖ್ಯಾತ ಬ್ಯಾಡ್ಮಿಂಟನ್‌ ತಾರೆ ಹಾಗೂ ಒಲಿಂಪಿಕ್‌ ಪದಕ ವಿಜೇತೆ ಸೈನಾ ನೆಹ್ವಾಲ್‌ ಇತ್ತೀಚೆಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಅವರು ಫುಲ್‌ ಆಕ್ಟೀವ್‌ ಆಗಿದ್ದಾರೆ. ಹೊಸ ಡ್ರೆಸ್‌ಗಳು, ಟ್ರಿಪ್‌ಗಳ ಪೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

Tap to resize

ಈ ವರ್ಷ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಸೈನಾ ನೆಹ್ವಾಲ್ ತಮ್ಮ ಪತಿ ಹಾಗೂ ಬ್ಯಾಡ್ಮಿಂಟನ್‌ ಆಟಗಾರ ಪಾರುಪಲ್ಲಿ ಕಶ್ಯಪ್‌ ಜೊತೆ ವಿದೇಶ ಟ್ರಿಪ್‌ಗೆ ಹೋಗಿದ್ದಾರೆ.

ಹೌದು ಸೈನಾ ನೆಹ್ವಾಲ್‌ ಹಾಗೂ ಪಾರುಪಲ್ಲಿ ಕಶ್ಯಪ್‌ ಥಾಯ್ಲೆಂಡ್‌ ಟ್ರಿಪ್‌ಗೆ ಹೋಗಿದ್ದು, ಅಲ್ಲಿನ ಆಕರ್ಷಕ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಬಹುತೇಕ ಎಲ್ಲಾ ಚಿತ್ರಗಳಲ್ಲಿ ಟ್ರೆಂಡಿ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿರುವ ಸೈನಾ ನೆಹ್ವಾಲ್‌ ಸಖತ್‌ ಹಾಟ್‌ ಆಗಿ ಫೋಟೋಗೆ ಪೋಸ್‌ ನೀಡಿದ್ದಾರ.ೆ

ಬೀಚ್‌ಸೈಡ್‌ನಲ್ಲಿ ನಿಂತಿರುವ, ಬೋಟಿಂಗ್‌ಗೆ ಹೋಗಿರುವ ಚಿತ್ರಗಳನ್ನು ಸೈನಾ ನೆಹ್ವಾಲ್‌ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಬ್ಯಾಡ್ಮಿಂಟನ್‌ ಸುಂದರಿ  ಸೈನಾ ನೆಹ್ವಾಲ್‌ ಅವರ ಹಾಟ್‌ ಅವತಾರ ಕಂಡ ಅಭಿಮಾನಿಗಳು ಕೂಡ ಸಖತ್‌ ಶಾಕ್‌ ಆಗಿದ್ದಾರೆ. 

ಇನ್ನು ಥಾಯ್ಲೆಂಡ್‌ನಲ್ಲಿ ಸೈನಾ ಹಾಗೂ ಪಿ ಕಶ್ಯಪ್‌ ಮಾತ್ರವೇ ಅಲ್ಲ, ಇತರ ಆಪ್ತ ಬ್ಯಾಡ್ಮಿಂಟನ್‌ ತಾರೆಯರು ಕೂಡ ತಮ್ಮ ಪತಿ-ಪತ್ನಿಯ ಜೊತೆ ತೆರಳಿದ್ದಾರೆ.

ಬೀಚ್‌ಗಳಲ್ಲಿ ಸ್ಲೀವ್‌ಲೆಸ್‌ ಡ್ರೆಸ್‌ನಲ್ಲಿ ಸೈನಾ ಕಾಣಿಸಿಕೊಂಡಿದ್ದಾರೆ. ಇದರ ಚಿತ್ರಗಳನ್ನು ಟ್ವಿಟರ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಅವರು ಹಂಚಿಕಂಡಿದ್ದಾರೆ.

ಥಾಯ್ಲೆಂಡ್‌ನ ಫುಕೆಟ್‌ ಹಾಗೂ ಫೀ ಫೀ ಐಸ್ಲೆಂಡ್‌ಗಳಲ್ಲಿ ಸೈನಾ ನೆಹ್ವಾಲ್‌ ಹಾಗೂ ಪಿ.ಕಶ್ಯಪ್‌ ಸುತ್ತಾಡಿದ್ದಾರೆ. ಬೋಟಿಂಗ್‌ಅನ್ನು ಕೂಡ ಅವರು ಎಂಜಾಯ್‌ ಮಾಡಿದ್ದಾರೆ.

ಸೈನಾ ನೆಹ್ವಾಲ್‌ ಅವರಲ್ಲದೆ, ಪ್ರದ್ನ್ಯಾ ಗಾದ್ರೆ, ಪ್ರಣವ್‌ ಚೋಪ್ರಾ, ಗುರು ಸಾಯಿದತ್‌ ಕೂಡ ತಮ್ಮ ಪತ್ನಿಯ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. 

ತಮ್ಮ ಆಕರ್ಷಕ ಕ್ರೀಡಾ ಜೀವನದಲ್ಲಿ ಸಾಕಷ್ಟು ಪ್ರಶಸ್ತಿ ಗೆದ್ದಿರುವ ಸೈನಾ ನೆಹ್ವಾಲ್‌, 2023ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ತಮ್ಮ  ಇನ್ಸ್‌ಟಾಗ್ರಾಮ್‌ ಪುಟದಲ್ಲಿ 1.6 ಮಿಲಿಯನ್‌ ಫಾಲೋವರ್‌ಗಳನ್ನು ಸೈನಾ ನೆಹ್ವಾಲ್‌ ಹೊಂದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಶ್ರೀ, ಅರ್ಜುನ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

Latest Videos

click me!