ಆ್ಯನಿವರ್ಸರಿ ಸಂಭ್ರಮದಲ್ಲಿ ಧನಶ್ರಿ ಜೊತೆಗಿನ ರೋಮ್ಯಾಟಿಂಕ್ ಫೋಟೋ ಹಂಚಿಕೊಂಡ ಚಹಾಲ್!

Published : Dec 22, 2023, 06:11 PM ISTUpdated : Dec 22, 2023, 06:13 PM IST

ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಈ ಸಂತಸದಲ್ಲಿ ಪತ್ನಿ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಬಾರಿ ವೈರಲ್ ಆಗಿದೆ.  

PREV
18
ಆ್ಯನಿವರ್ಸರಿ ಸಂಭ್ರಮದಲ್ಲಿ ಧನಶ್ರಿ ಜೊತೆಗಿನ ರೋಮ್ಯಾಟಿಂಕ್ ಫೋಟೋ ಹಂಚಿಕೊಂಡ ಚಹಾಲ್!

ಕ್ರಿಕೆಟಿಗ  ಯುಜ್ವೆಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ಇಂದು 3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. 2023ರಲ್ಲಿ ಹಲವು ಏರಿಳಿತ ಕಂಡ ಈ ಜೋಡಿ ಇದೀಗ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ.

28

ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಚಹಾಲ್, ಭಾವನಾತ್ಮ ಸಂದೇಶ ನೀಡಿದ್ದಾರೆ. ನಾಲ್ಕು ವರ್ಷಗಳ ಪಯಣ, ಮೊದಲ ಭೇಟಿ ಸೇರಿದಂತೆ ಸ್ಮರಣೀಯ ಘಟನೆಯನ್ನು ಚಹಾಲ್ ನೆನಪಿಸಿಕೊಂಡಿದ್ದಾರೆ.

38

ನಾವು ಭೇಟಿಯಾದ ಮೊದಲ ದಿನದಿಂದ ಇಲ್ಲೀವರೆಗೆ ನಮ್ಮ ಬದುಕಿನ ಪಯಣದ ಪ್ರತಿ ನಿಮಿಷ ನನ್ನ ಹೃದಯಕ್ಕೆ ತೀರಾ ಹತ್ತಿರವಾಗಿದೆ ಎಂದು ಯುಜ್ವೇಂದ್ರ ಚಹಾಲ್ ಹೇಳಿಕೊಂಡಿದ್ದಾರೆ.
 

48

ಮದುವೆ ಸ್ವರ್ಗದಲ್ಲಿ ನಿಶ್ಚಯ ಮಾಡಲ್ಪಟ್ಟಿರುತ್ತದೆ ಅನ್ನೋ ಮಾತಿದೆ. ನನ್ಮಿಬ್ಬರ ಬದುಕಿನ ಪಯಣದ ನಿಶ್ಚಯವನ್ನು ನನ್ನ ಪರವಾಗಿ ಬರೆದಿದ್ದಾರೆ ಅನ್ನೋದು ಖಾತ್ರಿ ಇದೆ ಎಂದು ಚಹಾಲ್ ಹೇಳಿಕೊಂಡಿದ್ದಾರೆ.

58

ನಿನ್ನ ಸಾಂಗತ್ಯ, ಪ್ರೀತಿಯಿಂದ ಪ್ರತಿ ದಿನ ನಾನು ಉತ್ತಮ ಮನುಷ್ಯನಾಗಿ ಹೊರಹೊಮ್ಮುತ್ತಿದ್ದೇನೆ. ನನ್ನ ಎಲ್ಲವೂ ನೀನೇ ಆಗಿದ್ದಿ. ನನ್ನ ಜೀವನದ ಪ್ರೀತಿಯ ಸಂಗಾತಿ ನಿನಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಎಂದು ಚಹಾಲ್ ಬರೆದುಕೊಂಡಿದ್ದಾರೆ.

68

ಕೆಲ ಕಾಲ ಪ್ರಣಯ ಹಕ್ಕಿಗಳಾಗಿ ತಿರುಗಾಡಿದ್ದ ಯುಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ 2020ರ ಡಿಸೆಂಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 

78

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಕ್ರಿಯವಾಗಿರುವ ಯುಜುವೇಂದ್ರ ಚಹಾಲ್ ಪತ್ನಿ ಧನಶ್ರಿ ವರ್ಮಾ, ಡ್ಯಾನ್ಸ್ ರೀಲ್ಸ್ ಮೂಲಕವೇ ಜನಪ್ರಿಯರಾಗಿದ್ದಾರೆ. ಟೀಂ ಇಂಂಡಿಯಾ ಕ್ರಿಕೆಟಿಗರ ಜೊತೆಗೆ ರೀಲ್ಸ್ ಮಾಡಿ ಜನಪ್ರಿಯರಾಗಿದ್ದಾರೆ.
 

88

ಇವರಿಬ್ಬರ ನಡುವೆ ಮನಸ್ತಾಪಾಗಿ ಆಗಿದೆ ಅನ್ನೋ ವರದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಇಬ್ಬರು ಜೊತೆಯಾಗಿ ಕಾಣಿಸಿಕೊಂಡು ಊಹಾಪೋಹಕ್ಕ ತೆರೆ ಎಳೆದಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories