ವೈವಾಹಿಕ ಜೀವನಕ್ಕೆ ಕಾಲಿಟ್ಟು 'ಜೈ ಭಜರಂಗ್‌ ಬಲಿ' ಎಂದ ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಟಾರ್‌ ವೇಗಿ!

First Published | Dec 22, 2023, 4:52 PM IST

2024ರ ಐಪಿಎಲ್‌ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ರಮುಖ ವೇಗದ ಬೌಲರ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಬಾಲ್ಯದ ಶಾಲಾ ದಿನಗಳ ಗೆಳತಿ ನಭಾ ಗಡಂವಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತುಷಾರ್‌ ದೇಶಪಾಂಡೆ ಹಾಗೂ ನಭಾ ಅವರ ವಿವಾಹ ಸಮಾರಂಭ ಡಿಸೆಂಬರ್‌ 21 ರಂದು ನಡೆದಿದೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ತುಷಾರ್‌ ಮಾಹಿತಿ ನೀಡಿದ್ದಾರೆ.

Latest Videos


ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ಕಳೆದ ಜೂನ್‌ನಲ್ಲಿ ನಡೆದಿತ್ತು. ಈ ಬಾರಿಯ ಐಪಿಎಲ್‌ ಟೂರ್ನಿಗೂ ಮುನ್ನವೇ ತುಷಾರ್‌ ದೇಶಪಾಂಡೆ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ.

ತುಷಾರ್‌ ದೇಶಪಾಂಡೆ ಹಾಗೂ ನಭಾ ಅವರ ವಿವಾಹ ಸಮಾರಂಭ ಡಿಸೆಂಬರ್‌ 21 ರಂದು ನಡೆದಿದೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ತುಷಾರ್‌ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರವಾಗಿ ಆಡಿದ್ದ ತುಷಾರ್‌ ದೇಶಪಾಂಡೆ ಅದ್ಭುತ ನಿರ್ವಹಣೆಯ ಮೂಲಕ ಗಮನಸೆಳೆದಿದ್ದರು.

ನಭಾ ಗಡಂವಾರ್ ಅವರು ತುಷಾರ ದೇಶಪಾಂಡೆಯವರ ಶಾಲಾ ದಿನಗಳ ಕ್ರಶ್‌ ಆಗಿದ್ದರು. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

ನಭಾ ಕುಂಚ ಕಲಾವಿದೆ. ಪೇಂಟೆಡ್ ಪ್ಯಾಲೆಟ್ (painted_palette)  ಎಂಬ ಹೆಸರಿನ ಇನ್ಸ್‌ಟಾಗ್ರಾಮ್‌ ಖಾತೆಯನ್ನು ಹೊಂದಿದ್ದು, ತಮ್ಮ ವರ್ಣಚಿತ್ರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
 

ಅದಲ್ಲದೆ, ನಭಾ ಫ್ಯಾಷನ್‌ ಡಿಸೈನರ್‌ ಕೂಡ ಹೌದು. ಬಹಳ ದೀರ್ಘ ಕಾಲದಿಂದ ತುಷಾರ್‌ ದೇಶಪಾಂಡೆ ಅವರೊಂದಿಗೆ ಈಕೆ ರಿಲೇಷನ್‌ಷಿಪ್‌ನಲ್ಲಿದ್ದರು.

2023ರ ಐಪಿಎಲ್‌ ವೇಳೆ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಸಾಕಷ್ಟು ಬಾರಿ ನಭಾ ಸ್ಟ್ಯಾಂಡ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ, ತುಷಾರ್‌ಗೆ ತಮ್ಮ ಬೆಂಬಲ ನೀಡಿದ್ದರು.

ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಈ ಮದುವೆ ನಡೆದಿದೆ. ಈ ಸಂದರ್ಭದಲ್ಲಿ, ಕುಟುಂಬ, ಸ್ನೇಹಿತರು, ಸಂಬಂಧಿಕರೊಂದಿಗೆ ತುಷಾರ್ ಅವರ ಕೆಲವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಆಟಗಾರರು ಸಹ ಕಾಣಿಸಿಕೊಂಡರು.

ತುಷಾರ್ ದೇಶಪಾಂಡೆ ತಮ್ಮ ಮದುವೆಯ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 'ಹೃದಯಗಳ ಸಭೆ, ಹೊಸ ಆರಂಭ, ಜೈ ಬಜರಂಗ್ ಬಲಿ' ಎಂದು ಅವರು ಬರೆದುಕೊಂಡಿದ್ದಾರೆ.

ಅದರೊಂದಿಗೆ ತಮ್ಮ ಮದುವೆಯ ಚಿತ್ರಗಳನ್ನು ತೆಗೆದ ಫೋಟೋಗ್ರಾಫರ್‌ಅನ್ನು ಟ್ಯಾಗ್ ಮಾಡಿ, 'ನಮ್ಮ ಜೀವನದ ಈ ವಿಶೇಷ ಕ್ಷಣಗಳನ್ನು ತುಂಬಾ ಸುಂದರವಾಗಿ ಸೆರೆಹಿಡಿದಿದ್ದಕ್ಕಾಗಿ ಧನ್ಯವಾದಗಳು' ಎಂದು ಬರೆದಿದ್ದಾರೆ.

ತುಷಾರ್‌ ದೇಶಪಾಂಡೆ ಅವರ ಪತ್ನಿ ನಾಗಪುರ ಮೂಲದವರಾಗಿದ್ದು, ಸದ್ಯ ಮುಂಬೈನಲ್ಲಿಯೇ ನೆಲೆಸಿದ್ದಾರೆ. ವೃತ್ತಿಯಲ್ಲಿ ಆಕೆ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದಾರೆ.

click me!