ಅದೇನೋ ಗೊತ್ತಿಲ್ಲ ವಿಚ್ಛೇದಿತರಾಗಿರುವ ಹಾಗೂ ಮುಸ್ಲಿಂ ಧರ್ಮೀಯರಾಗಿರುವ ಸಾನಿಯಾ ಮಿರ್ಜಾ ಹಾಗೂ ಮೊಹಮದ್ ಶಮಿ ಮದುವೆಯಾಗುವವರೆಗೂ ಸೋಶಿಯಲ್ ಮೀಡಿಯಾ ಮಂದಿ ಸುಮ್ಮನಿರುವ ಹಾಗೆ ಕಾಣಣುತ್ತಿಲ್ಲ.
ಎಲ್ಲರಿಗೂ ಗೊತ್ತಿರುವ ಹಾಗೆ ಸಾನಿಯಾ ಮಿರ್ಜಾ ಹಾಗೂ ಮೊಹಮದ್ ಶಮಿ ದೇಶ ಕಂಡ ಅತ್ಯುತ್ತಮ ಕ್ರೀಡಾಪಟುಗಳು. ಇದರಲ್ಲಿ ಎರಡು ಮಾತಿಲ್ಲ. ಆದರೆ, ಇಬ್ಬರ ವೈಯಕ್ತಿಕ ಜೀವನ ಮಾತ್ರ ಒಂದೇ ರೀತಿಯಲ್ಲಿ ಸಾಗಿದೆ.
ಪ್ರಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲೀಕ್ ಮದುವೆಯಾಗಿ ಹಲವು ವರ್ಷ ಜೊತೆಯಾಗಿ ಬಾಳಿದ್ದರು. ಪ್ರೇಮದ ಸಾಕ್ಷಿಯಾಗಿ ಒಂದು ಮಗು ಕೂಡ ಇದೆ.
ಇನ್ನೊಂದೆಡೆ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಕೂಡ ವೈಯಕ್ತಿಕ ಜೀವನದಲ್ಲಿ ನೋವು ಕಂಡವರು. ಇವರ ಮೇಲೆ ಪತ್ನಿ ಹಸಿನ್ ಜಹಾನ್ ಮಾಡಿರುವ ಆರೋಪಕ್ಕೆ ಶಮಿ ಪೊಲೀಸ್ ವಿಚಾರಣೆಯನ್ನೂ ಎದುರಿಸಬೇಕಾದ ಸಂದರ್ಭ ಬಂದಿತ್ತು.
ಕಳೆದ ವರ್ಷ ಮೊಹಮದ್ ಶಮಿ ಹಾಗೂ ಹಸೀನ್ ಜಹಾನ್ ದೂರವಾಗಿದ್ದರೆ, ಈ ವರ್ಷ ಸಾನಿಯಾ ಮಿರ್ಜಾ ತನ್ನ ಪತಿ ಶೋಯೆಬ್ ಮಲೀಕ್ ಜೊತೆ ಖುಲಾ ಮಾಡಿಕೊಂಡಿದ್ದರು.
ವಿಚ್ಚೇದಿತರಾಗಿರುವ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಹಿಂದೊಮ್ಮೆ ಭಾರೀ ಸುದ್ದಿಯಾಗಿತ್ತು. ಕೊನೆಗೆ ಈ ಸುದ್ದಿಯನ್ನು ಮೊಹಮದ್ ಶಮಿ ಹಾಗೂ ಸಾನಿಯಾ ಮಿರ್ಜಾ ಇಬ್ಬರೂ ತಳ್ಳಿಹಾಕಿದ್ದಲ್ಲದೆ, ಹೀಗೆ ಆಗಲು ಸಾಧ್ಯವೇ ಇಲ್ಲ ಎಂದಿದ್ದರು.
ಇವರೇನೇ ಅಂದರೂ ಸೋಶಿಯಲ್ ಮೀಡಿಯಾ ಮಂದಿ ಸುಮ್ಮನಿರಬೇಕಲ್ಲ. ಸಾನಿಯಾ ಮಿರ್ಜಾ ಹಾಗೂ ಮೊಹಮದ್ ಶಮಿಗೆ ಸೋಶಿಯಲ್ ಮೀಡಿಯಾದಲ್ಲಿಯೇ ಮದುವೆ ಮಾಡಿಸಿ ಫೋಟೋಗಳನ್ನು ಹಂಚಿಬಿಟ್ಟಿದ್ದಾರೆ.
ಮಂಗಳವಾರದ ವೇಳೆ ಸಾನಿಯಾ ಮಿರ್ಜಾ ಹಾಗೂ ಮೊಹಮದ್ ಶಮಿ ಅವರ ಮದುವೆ ಫೋಟೋಗಳು ವೈರಲ್ ಆಗಿದ್ದರೆ, ಇನ್ನೂ ಕೆಲವು ನೆಟ್ ಪುಢಾರಿಗಳು ಇಬ್ಬರೂ ದುಬೈನಲ್ಲಿ ಕ್ರಿಸ್‌ಮಸ್ ಹಬ್ಬ ಆಚರಣೆ ಮಾಡುತ್ತಿರುವ ಪೋಟೋಗಳನ್ನು ಹಂಚಿಬಿಟ್ಟಿದ್ದಾರೆ.
ಕೊನೆಗೆ ಕೆಲವು ಮಾಧ್ಯಮಗಳು ಈ ಸುದ್ದಿಗಳ ಫ್ಯಾಕ್ಟ್‌ಚೆಕ್ ಮಾಡಿದ್ದು, ಇವೆಲ್ಲವೂ ಎಐ ಜನರೇಟೆಡ್ ಇಮೇಜಸ್‌ಗಳು ಎಂದು ಷರಾ ಬರೆದಿವೆ. ಇದು ಎಐ ಇಮೇಜ್ ಎಂದು ಗೊತ್ತಿದ್ದರೂ, ಇನ್ನೂ ಕೆಲವರು ಹೊಸ ಜೋಡಿಗೆ ಸಖತ್ ಆಗಿಯೇ ಶುಭಾಶಯ ಕೋರಿದ್ದಾರೆ.
ಇವೆಲ್ಲವೂ ಎಐ ಇಮೇಜ್ ಎಂದು ಗೊತ್ತಿದೆ. ಆದರೆ, ಇಂಥದ್ದೊಂದು ವಿಚಾರ ಆಗಲಿ ಎಂದು ನಾನು ಬಯಸುತ್ತೇನೆ. ಇಬ್ಬರ ಜೋಡಿ ಸಖತ್ ಆಗಿ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ದುಬೈನಲ್ಲಿ ಭೇಟಿಯಾದ ಸುದ್ದಿ ಕ್ರೀಡಾ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿದೆ. ಇವರಿಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಎಡಿಟ್ ಮಾಡಲಾಗಿದ್ದು, ಸಿಹಿ ಕ್ರಿಸ್ಮಸ್ ಸುದ್ದಿಯಾಗಿ ವೈರಲ್ ಆಗುತ್ತಿದೆ.