ರಣಜಿ ಟ್ರೋಫಿಯಲ್ಲಿ ಆಡಿದ್ದ ಸುವೋಜಿತ್ ಬ್ಯಾನರ್ಜಿ
ಸುವೋಜಿತ್ ಬ್ಯಾನರ್ಜಿ2014 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ಬೆಂಗಾಲ್ ಪರ ಪಾದಾರ್ಪಣೆ ಮಾಡಿದ್ದರು. ಮೂರು ರಣಜಿ ಪಂದ್ಯಗಳನ್ನೂ ಆಡಿದ್ದರು. ಬೆಳಗ್ಗೆ ಉಪಾಹಾರ ಸೇವಿಸಿದ ನಂತರ ಮನೆಯಲ್ಲಿ ಮಲಗಿದ್ದ ಸುವೋಜಿತ್ ಕೆಲವು ಗಂಟೆಗಳ ನಂತರ ಎಚ್ಚರಗೊಳ್ಳಲಿಲ್ಲ. ಕೂಡಲೇ ವೈದ್ಯರನ್ನು ಕರೆಸಲಾಯಿತಾದರೂ ಆಗಲೇ ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಿಸಿದರು.