ಯಶ್ ಹೇಳಿದ ಜೀವನಾನುಭವವನ್ನು ಪಾಠದಲ್ಲಿ ಸೇರಿಸಿ: ಸೊರಬದ ಯುವಕ ಆತ್ಮ*ಹತ್ಯೆ

Published : Jan 08, 2026, 09:13 AM IST

ಶಿವಮೊಗ್ಗದ 25 ವರ್ಷದ ಯುವಕ ರಾಕೇಶ್, ಶಿಕ್ಷಣ ವ್ಯವಸ್ಥೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಡೆತ್ ನೋಟ್‌ನಲ್ಲಿ, ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಮತ್ತು ಹಣಕ್ಕಾಗಿ ಓದುವುದನ್ನು ನಿಲ್ಲಿಸುವಂತಹ ಮಹತ್ವದ ಬದಲಾವಣೆಗಳಿಗೆ ಆತ ಕರೆ ನೀಡಿದ್ದಾನೆ. 

PREV
14
25 ವರ್ಷದ ರಾಕೇಶ್

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೈಸೋಡಿ ಗ್ರಾಮದ 25 ವರ್ಷದ ರಾಕೇಶ್ ಎಂಬ ಯುವಕ ಶಿಕ್ಷಣ ವ್ಯವಸ್ಥೆಯಲ್ಲಿನ ವೈರುದ್ಯಗಳ ಬಗ್ಗೆ ಜಿಗುಪ್ಸೆಗೊಂಡ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

24
ಆತ್ಮ*ಹತ್ಯೆಗೂ ಮುನ್ನ ಡೆತ್ ನೋಟ್

ಕೈಸೋಡು ಗ್ರಾಮದ ಗೀತಾ ಮತ್ತು ಉಮೇಶ್ ಎಂಬ ದಂಪತಿಯ ಮೂರು ಜನ ಮಕ್ಕಳಲ್ಲಿ ಕೊನೆಯವರಾದ ರಾಕೇಶ್ ಪದವಿ ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ, ಈತ ಆತ್ಮ*ಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಅದರಲ್ಲಿ ಈತ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಬೇಕು ಮತ್ತು ಮಕ್ಕಳ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ಪ್ರೋತ್ಸಾಹಿಸಬೇಕು ಅಂಥ ಬರೆದಿದ್ದಾನೆ.

34
ಯಶ್ ಹೇಳಿದ ಜೀವನಾನುಭ

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಯಶ್ ಹೇಳಿದ ಜೀವನಾನುಭವವನ್ನು ಪಾಠದಲ್ಲಿ ಸೇರಿಸಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ತಿಳಿಸಿ ಎಂದು ಕೋರಿದ್ದಾನೆ.

ತಾನು ಆನ್‌ಲೈನ್, ಮೆಂಟಲ್ ಗೈಡ್‌ಲೈನ್ಸ್ ತಗೊಂಡಿದ್ದರಿಂದ ತನ್ನ ಸ್ಥೈರ್ಯ ಕುಸಿದಿದ್ದಾಗಿ ಹೇಳಿಕೊಂಡಿರುವ ಯುವಕ, ವಾಟ್ಸ್ಯಾಪ್‌ನಲ್ಲಿ ಯಾವುದೇ ಮೆಂಟಲ್ ಸಪೋರ್ಟ್ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾನೆ.

44
ಹಣಕ್ಕಾಗಿ ಓದುವುದನ್ನು ನಿಲ್ಲಿಸಿ

ಪೋಷಕರು ಮತ್ತು ಗುರುಗಳು ಮಕ್ಕಳ ಮೇಲೆ ದೊಡ್ಡ ಆಸೆಗಳನ್ನು ಹೇರಬಾರದು. ಪ್ರತಿಯೊಬ್ಬ ಮಗುವಿನಲ್ಲೂ ಒಂದೊಂದು ಕಲೆ ಇರುತ್ತದೆ. ಅದನ್ನು ದ್ರೋಣಾಚಾರ್ಯರು ಅರ್ಜುನನ ಸಾಮರ್ಥ್ಯ ಗುರುತಿಸಿದಂತೆ ಪತ್ತೆಹಚ್ಚಿ ಬೆಂಬಲ ನೀಡಬೇಕು ಎಂದು ರಾಕೇಶ್ ಆಶಿಸಿದ್ದಾರೆ. ಹಣಕ್ಕಾಗಿ ಓದುವುದನ್ನು ನಿಲ್ಲಿಸಿ, ಇಷ್ಟಪಟ್ಟ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಮಕ್ಕಳಿಗೆ ಕಲಿಸಬೇಕು ಎಂದು ಮನವಿ ಮಾಡಿದ್ದಾನೆ.

Read more Photos on
click me!

Recommended Stories