ಲಿಫ್ಟ್ ಒಳಗೆ ಕಾಲಿಟ್ಟ ತಕ್ಷಣ ಮೊಬೈಲ್ ಸಿಗ್ನಲ್ ಯಾಕೆ ಗಾಯಬ್ ಆಗುತ್ತೆ ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಲಿಫ್ಟ್ನ ಮೆಟಲ್ ಬಾಡಿ, ಕಾಂಕ್ರೀಟ್ ಗೋಡೆಗಳು ಮತ್ತು ಫ್ಯಾರಡೆ ಕೇಜ್ ಎಫೆಕ್ಟ್ನಿಂದಾಗಿ ಮೊಬೈಲ್ ಸಿಗ್ನಲ್ ಹೇಗೆ ಕಟ್ ಆಗುತ್ತೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಲಿಫ್ಟ್ನಲ್ಲಿ ಫೋನ್ ಸಿಗ್ನಲ್ ಕಟ್ ಆಗೋದು ಯಾಕೆ ಅಂತ ಗೊತ್ತಾ?
ಮನೆ, ಆಫೀಸ್, ಅಂಗಡಿ ಅಂತ ಎಲ್ಲೇ ಹೋದ್ರು ಚೆನ್ನಾಗಿ ಕೆಲಸ ಮಾಡೋ ನಿಮ್ಮ ಮೊಬೈಲ್, ಲಿಫ್ಟ್ ಒಳಗೆ ಹೋದ ತಕ್ಷಣ ಯಾಕೆ ಸಿಗ್ನಲ್ ಕಳೆದುಕೊಳ್ಳುತ್ತೆ? ಯಾರಿಗಾದ್ರೂ ಕಾಲ್ ಮಾಡಿದ್ರೆ ಕಟ್ ಆಗುತ್ತೆ. ಇಂಟರ್ನೆಟ್ ಬಳಸಿದ್ರೆ ಒಂದು ಪೇಜ್ ಕೂಡ ಓಪನ್ ಆಗದೆ ಹಾಗೇ ಸುತ್ತುತ್ತಿರುತ್ತೆ. ಕೆಲವೊಮ್ಮೆ ಅರ್ಜೆಂಟ್ ಆಗಿ ಮಾತಾಡಬೇಕಾದಾಗ ಈ ಸಮಸ್ಯೆ ಆಗುತ್ತೆ.
ಇದು ನಿಮ್ಮ ಫೋನ್ನ ಪ್ರಾಬ್ಲಮ್ ಅಥವಾ ಸಿಮ್ ಕಾರ್ಡ್ನಲ್ಲಿ ಇರೋ ಸಮಸ್ಯೆ ಆಗಿರಬೇಕು ಅಂತೇನಿಲ್ಲ. ನಿಜ ಹೇಳಬೇಕಂದ್ರೆ, ಲಿಫ್ಟ್ನ ರಚನೆ, ಅದರ ಸುತ್ತ ಇರೋ ಲೋಹದ ಭಾಗಗಳು, ಕಟ್ಟಡದ ಗೋಡೆಗಳು ಹೀಗೆ ಹಲವು ಕಾರಣಗಳು ಮೊಬೈಲ್ ಸಿಗ್ನಲ್ಗೆ ತೊಂದರೆ ಮಾಡುತ್ತವೆ. ಇದರ ಹಿಂದೆ ವಿಜ್ಞಾನದ ಒಂದು ಆಸಕ್ತಿದಾಯಕ ಕಾರಣನೂ ಇದೆ. ಅದೇನು ಅಂತ ಗೊತ್ತಾ? ಇದರ ಬಗ್ಗೆ ವಿವರವಾಗಿ ನೋಡೋಣ.
25
ಲಿಫ್ಟ್ ಒಳಗೆ ಫೋನ್ ಸಿಗ್ನಲ್ ಯಾಕೆ ಸಿಗಲ್ಲ?
ಇದಕ್ಕೆ ಮುಖ್ಯ ಕಾರಣ ಲಿಫ್ಟ್ನ ರಚನೆ. ಹೆಚ್ಚಿನ ಲಿಫ್ಟ್ಗಳನ್ನು ಲೋಹದ ಭಾಗಗಳಿಂದ ಮಾಡಲಾಗಿರುತ್ತೆ. ವಿಶೇಷವಾಗಿ, ಲಿಫ್ಟ್ನ ಗೋಡೆಗಳು, ಬಾಗಿಲುಗಳು ಮತ್ತು ಹೊರಗಿನ ರಚನೆಯಲ್ಲಿ ಲೋಹದ ವಸ್ತುಗಳನ್ನು ಬಳಸಿರುತ್ತಾರೆ. ಮೊಬೈಲ್ ಫೋನ್ಗಳು ಹತ್ತಿರದ ಮೊಬೈಲ್ ಟವರ್ಗಳಿಂದ ಬರೋ ರೇಡಿಯೋ ತರಂಗಗಳನ್ನು ಬಳಸಿಕೊಂಡು ಸಿಗ್ನಲ್ ಪಡೆದುಕೊಳ್ಳುತ್ತವೆ. ಆದ್ರೆ, ಈ ರೇಡಿಯೋ ತರಂಗಗಳು ಹೋಗೋ ದಾರಿಯಲ್ಲಿ ಲೋಹದ ವಸ್ತುಗಳು ಅಡ್ಡ ಬಂದಾಗ ಅವುಗಳ ಶಕ್ತಿ ಕಡಿಮೆಯಾಗಬಹುದು.
ಲಿಫ್ಟ್ ಒಳಗೆ ಹೋದ ತಕ್ಷಣ ಹೊರಗಿನಿಂದ ಬರೋ ಸಿಗ್ನಲ್ಗಳು ದುರ್ಬಲ ಆಗೋದಕ್ಕೆ ಇದೂ ಒಂದು ಮುಖ್ಯ ಕಾರಣ. ಲಿಫ್ಟ್ನ ಬಾಗಿಲು ಹಾಕಿದಾಗ ಹೊರಗಿನಿಂದ ಬರೋ ರೇಡಿಯೋ ತರಂಗಗಳು ಲಿಫ್ಟ್ ಒಳಗೆ ಬರೋ ದಾರಿ ಬಂದ್ ಆಗುತ್ತೆ. ಅದಕ್ಕೇ ಕೆಲವು ಲಿಫ್ಟ್ಗಳಲ್ಲಿ ಬಾಗಿಲು ತೆಗೆದಿದ್ದಾಗ ಸಿಗೋ ಸಿಗ್ನಲ್, ಹಾಕಿದ ತಕ್ಷಣ ಮಾಯ ಆಗುತ್ತೆ.
35
ಫ್ಯಾರಡೆ ಕೇಜ್ ಅಂದ್ರೆ ಏನು?
ಲಿಫ್ಟ್ ಒಳಗೆ ಮೊಬೈಲ್ ಸಿಗ್ನಲ್ ಕಡಿಮೆ ಆಗೋದರ ಹಿಂದೆ ಇರೋ ಮುಖ್ಯ ವೈಜ್ಞಾನಿಕ ಕಾರಣಗಳಲ್ಲಿ ಒಂದು ಫ್ಯಾರಡೆ ಕೇಜ್ (Faraday Cage). ಮೈಕೆಲ್ ಫ್ಯಾರಡೆ ಅನ್ನೋ ವಿಜ್ಞಾನಿಯ ಹೆಸರಲ್ಲಿ ಕರೆಯೋ ಈ ಪರಿಕಲ್ಪನೆ, ವಿದ್ಯುತ್ಕಾಂತೀಯ ಕ್ಷೇತ್ರಗಳನ್ನು ವಾಹಕ ವಸ್ತುವಿನ ಕವಚ ಹೇಗೆ ನಿಯಂತ್ರಿಸುತ್ತೆ ಅಂತ ವಿವರಿಸುತ್ತೆ. ಒಂದು ಲೋಹದ ಕವಚ ಅಥವಾ ಜಾಲರಿಯಂಥ ರಚನೆ, ಹೊರಗಿನ ವಿದ್ಯುತ್ಕಾಂತೀಯ ಕ್ಷೇತ್ರದ ಪ್ರಭಾವವನ್ನು ಒಳಗೆ ಕಡಿಮೆ ಮಾಡಬಹುದು. ಇದರಿಂದ ಆ ಕವಚದ ಒಳಗೆ ಇರೋ ಎಲೆಕ್ಟ್ರಾನಿಕ್ ಸಾಧನಗಳಿಗೆ ಹೊರಗಿನ ರೇಡಿಯೋ ಸಿಗ್ನಲ್ಗಳು ಸಿಗೋದು ಕಷ್ಟ ಆಗಬಹುದು.
ಲಿಫ್ಟ್ನ ಗೋಡೆಗಳನ್ನು ಹೆಚ್ಚಾಗಿ ಲೋಹದಿಂದ ಮಾಡಿರುತ್ತಾರೆ. ಈ ಲೋಹದ ಗೋಡೆಗಳು ತಡೆಗೋಡೆಯಂತೆ ಕೆಲಸ ಮಾಡಿ, ಹೊರಗಿನಿಂದ ಬರೋ ಮೊಬೈಲ್ ಸಿಗ್ನಲ್ಗಳು ಲಿಫ್ಟ್ ಒಳಗೆ ಬರೋದನ್ನು ಕಡಿಮೆ ಮಾಡಬಹುದು. ಸರಳವಾಗಿ ಹೇಳಬೇಕಂದ್ರೆ ಲಿಫ್ಟ್ ಸುತ್ತ ಇರೋ ಲೋಹದ ಗೋಡೆಗಳು ಭದ್ರತಾ ಪಂಜರದಂತೆ ಕೆಲಸ ಮಾಡಿ, ಹೊರಗಿನಿಂದ ಬರೋ ಮೊಬೈಲ್ ಸಿಗ್ನಲ್ಗಳನ್ನು ಒಳಗೆ ಬಿಡದೆ ತಡೆಯುತ್ತವೆ. ಇದೇ ಕಾರಣಕ್ಕೆ ಲಿಫ್ಟ್ ಒಳಗೆ ಫೋನ್ ಸಿಗ್ನಲ್ ಕಡಿಮೆ ಆಗೋ ಸಾಧ್ಯತೆ ಇರುತ್ತೆ.
ಲಿಫ್ಟ್ನ ಲೋಹದ ರಚನೆ ಮಾತ್ರ ಅಲ್ಲ, ಅದರ ಸುತ್ತ ಇರೋ ಕಟ್ಟಡದ ರಚನೆಯೂ ಮೊಬೈಲ್ ಸಿಗ್ನಲ್ಗೆ ತೊಂದರೆ ಮಾಡುತ್ತೆ. ಹೆಚ್ಚಿನ ಎತ್ತರದ ಕಟ್ಟಡಗಳಲ್ಲಿ ಲಿಫ್ಟ್ ಹೋಗೋ ದಾರಿ (Elevator Shaft) ಬಲವಾದ ಕಾಂಕ್ರೀಟ್ ಗೋಡೆಗಳಿಂದ ಮಾಡಿರುತ್ತಾರೆ. ಕೆಲವು ಕಟ್ಟಡಗಳಲ್ಲಿ ಕಬ್ಬಿಣದ ಸರಳುಗಳನ್ನ ಸೇರಿಸಿದ ಕಾಂಕ್ರೀಟ್ ಕೂಡ ಬಳಸಿರುತ್ತಾರೆ. ಇಂಥ ಗೋಡೆಗಳ ಮೂಲಕ ರೇಡಿಯೋ ತರಂಗಗಳು ಹೋದಾಗ ಅವುಗಳ ಶಕ್ತಿ ಕಡಿಮೆಯಾಗಬಹುದು.
ಜೊತೆಗೆ, ಲಿಫ್ಟ್ ಯಾವ ಫ್ಲೋರ್ನಲ್ಲಿದೆ, ಹತ್ತಿರದಲ್ಲಿ ಮೊಬೈಲ್ ಟವರ್ ಇದೆಯಾ, ಕಟ್ಟಡದ ವಿನ್ಯಾಸ ಹೇಗಿದೆ ಅನ್ನೋದು ಕೂಡ ಸಿಗ್ನಲ್ ಸಿಗೋದರ ಮೇಲೆ ಪರಿಣಾಮ ಬೀರುತ್ತೆ. ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ (NIST) ಮಾಡಿದ ಅಧ್ಯಯನಗಳಲ್ಲೂ ದೊಡ್ಡ ಕಟ್ಟಡಗಳ ನಿರ್ಮಾಣ ವಸ್ತುಗಳು ಮತ್ತು ರಚನೆಗಳು ರೇಡಿಯೋ ಸಿಗ್ನಲ್ಗಳ ಶಕ್ತಿಯನ್ನು ಕಡಿಮೆ ಮಾಡಬಹುದು ಅಂತ ವಿವರಿಸಲಾಗಿದೆ.
55
ಲಿಫ್ಟ್ ಚಲಿಸುವಾಗ ಸಿಗ್ನಲ್ ಯಾಕೆ ಬದಲಾಗುತ್ತೆ?
ಲಿಫ್ಟ್ ಒಂದು ಫ್ಲೋರ್ನಿಂದ ಇನ್ನೊಂದು ಫ್ಲೋರ್ಗೆ ಹೋಗುವಾಗ, ಮೊಬೈಲ್ ಮತ್ತು ಟವರ್ ನಡುವಿನ ಸಿಗ್ನಲ್ ಹೋಗೋ ದಾರಿ ಬದಲಾಗುತ್ತೆ.
ಗ್ರೌಂಡ್ ಫ್ಲೋರ್ನಲ್ಲಿ ಇದ್ದಾಗ ಹತ್ತಿರದ ಟವರ್ನಿಂದ ಸಿಗ್ನಲ್ ಸಿಗಬಹುದು.
ಲಿಫ್ಟ್ ಮೇಲೆ ಹೋಗುವಾಗ ಕಾಂಕ್ರೀಟ್ ನೆಲ, ಗೋಡೆಗಳು ಮತ್ತು ಲೋಹದ ರಚನೆಗಳು ಸಿಗ್ನಲ್ಗೆ ತೊಂದರೆ ಮಾಡಬಹುದು.
ಕೆಲವು ಫ್ಲೋರ್ಗಳಲ್ಲಿ ಸಿಗ್ನಲ್ ಸ್ವಲ್ಪ ಸಿಗಬಹುದು.
ಇನ್ನೊಂದು ಫ್ಲೋರ್ನಲ್ಲಿ ಸಿಗ್ನಲ್ ಪೂರ್ತಿಯಾಗಿ ಇಲ್ಲದೆಯೂ ಇರಬಹುದು.
ಇದಕ್ಕೆ ಕಾರಣ ರೇಡಿಯೋ ತರಂಗಗಳು ಕಟ್ಟಡಗಳ ಗೋಡೆಗಳಿಗೆ ತಾಗಿ ಹಿಂದಿರುಗುವುದು, ಹೀರಲ್ಪಡೋದು ಮತ್ತು ಬೇರೆ ಬೇರೆ ದಾರಿಗಳಲ್ಲಿ ಚಲಿಸುವಂಥ ಘಟನೆಗಳು. ಇದರಿಂದ ಒಂದೇ ಕಟ್ಟಡದ ಒಳಗೆ ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ಪ್ರಮಾಣದ ಸಿಗ್ನಲ್ ಸಿಗಬಹುದು.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.