ಗಡಿಯಾರದಲ್ಲಿ 60 ನಿಮಿಷ, 60 ಸೆಕೆಂಡ್‌ಗಳೇ ಏಕೆ? 100 ಏಕಿಲ್ಲ? ಇದರ ಹಿಂದೆ ಅಡಗಿದೆ 4,000 ಹಿಂದಿನ ವರ್ಷಗಳ ರಹಸ್ಯ

Published : Nov 18, 2026, 09:30 PM IST

History of Clocks: ಸಮಯ ನೋಡುವಾಗ ನಿಮ್ಮ ಮನಸ್ಸಿನಲ್ಲೂ ಒಮ್ಮೆಯಾದರೂ ಈ ಪ್ರಶ್ನೆ ಬಂದಿರಬಹುದು. 1 ಗಂಟೆಯಲ್ಲಿ 60 ನಿಮಿಷ ಮತ್ತು 1 ನಿಮಿಷದಲ್ಲಿ 60 ಸೆಕೆಂಡ್‌ಗಳೇ ಏಕೆ? ಸಮಯವನ್ನು 100 ನಿಮಿಷ ಅಥವಾ 100 ಸೆಕೆಂಡ್‌ಗಳಾಗಿ ಏಕೆ ವಿಂಗಡಿಸಿಲ್ಲ? ಈ ಪದ್ಧತಿಯ ಹಿಂದಿರುವ ಆಸಕ್ತಿದಾಯಕ ಇತಿಹಾಸ ತಿಳಿಯಿರಿ.

PREV
16
ಗಡಿಯಾರದಲ್ಲಿ 60 ನಿಮಿಷ, 60 ಸೆಕೆಂಡ್‌ಗಳೇ ಏಕೆ? 100 ಏಕಿಲ್ಲ?

ನಾವು ಸಾಮಾನ್ಯವಾಗಿ ಬಹುತೇಕ ಎಲ್ಲ ಲೆಕ್ಕಾಚಾರಗಳಿಗೂ 10, 100 ಮತ್ತು 1000 ಸಂಖ್ಯೆಗಳನ್ನೇ ಬಳಸುತ್ತೇವೆ. ಆದರೆ ಗಡಿಯಾರದ ವಿಷಯ ಬಂದಾಗ ಮಾತ್ರ 60 ನಿಮಿಷ ಮತ್ತು 60 ಸೆಕೆಂಡ್‌ಗಳ ಲೆಕ್ಕಾಚಾರ ಅನುಸರಿಸಲಾಗುತ್ತದೆ. ಇದಕ್ಕೆ ಕಾರಣವೇನು? ಈ ಪದ್ಧತಿ ಎಲ್ಲಿಂದ ಬಂತು ಎಂಬುದು ಗೊತ್ತಾ? .

26
4,000 ವರ್ಷಗಳ ಹಿಂದಿನ ಇತಿಹಾಸ

ಇತಿಹಾಸಕಾರರ ಪ್ರಕಾರ, ಸಮಯವನ್ನು 60ರ ಆಧಾರದಲ್ಲಿ ಲೆಕ್ಕ ಹಾಕುವ ಪದ್ಧತಿ ಬ್ಯಾಬಿಲೋನಿಯನ್ ನಾಗರಿಕತೆಯಿಂದ ಬಂದಿದೆ. ದು ನಾವು 10 ಅಂಕಿಗಳ ಆಧಾರದಲ್ಲಿ ಲೆಕ್ಕ ಹಾಕುವ ದಶಮಾಂಶ (Decimal System) ಪದ್ಧತಿಯನ್ನು ಬಳಸುಂತೆ, ಸುಮಾರು 4,000 ವರ್ಷಗಳ ಹಿಂದೆ ಬ್ಯಾಬಿಲೋನಿಯನ್ನರು ಸೆಕ್ಸಾಜೆಸಿಮಲ್ (Sexagesimal) ಅಂದರೆ 60 ಆಧಾರಿತ ಸಂಖ್ಯಾ ಪದ್ಧತಿಯನ್ನು ಬಳಸುತ್ತಿದ್ದರು.

36
60 ಸಂಖ್ಯೆಯನ್ನೇ ಏಕೆ ಆಯ್ಕೆ ಮಾಡಲಾಯಿತು?

ಬ್ಯಾಬಿಲೋನಿಯನ್ನರು 60 ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೆಂದರೆ ಅದನ್ನು ಹಲವು ಸಂಖ್ಯೆಗಳ ಮೂಲಕ ಸುಲಭವಾಗಿ ಭಾಗಿಸಬಹುದು. ಉದಾಹರಣೆಗೆ, ಯಾವುದಾದರೂ ವಸ್ತುವನ್ನು ಅರ್ಧ, ಮೂರನೇ ಒಂದು ಭಾಗ, ಕಾಲು ಭಾಗ ಅಥವಾ ಐದನೇ ಒಂದು ಭಾಗವಾಗಿ ವಿಂಗಡಿಸಬೇಕಾದರೆ 60ರ ಲೆಕ್ಕಾಚಾರ ತುಂಬಾ ಅನುಕೂಲಕರವಾಗಿತ್ತು.

46
ಒಂದು ಗಂಟೆಯಲ್ಲಿ 60 ನಿಮಿಷಗಳ ಪದ್ಧತಿ ಹೇಗೆ ಬಂತು?

ಸಮಯವನ್ನು ಗಂಟೆ, ನಿಮಿಷ ಮತ್ತು ಸೆಕೆಂಡ್‌ಗಳಾಗಿ ವಿಂಗಡಿಸುವ ಪದ್ಧತಿ ಒಂದೇ ಸಮಯದಲ್ಲಿ ಆರಂಭವಾಗಲಿಲ್ಲ. ಪ್ರಾಚೀನ ಈಜಿಪ್ಟಿನಲ್ಲಿ ಹಗಲು ಮತ್ತು ರಾತ್ರಿಯನ್ನು ತಲಾ 12 ಭಾಗಗಳಾಗಿ ವಿಂಗಡಿಸುವ ಪದ್ಧತಿ ಇತ್ತು. ಇದರಿಂದ 24 ಗಂಟೆಗಳ ದಿನದ ಪರಿಕಲ್ಪನೆ ಹುಟ್ಟಿಕೊಂಡಿತು. ನಂತರ ಬ್ಯಾಬಿಲೋನಿಯನ್ನರ 60ರ ಸಂಖ್ಯಾ ಪದ್ಧತಿಯೂ ಇದಕ್ಕೆ ಸೇರಿಕೊಂಡು ಸಮಯದ ಲೆಕ್ಕಾಚಾರ ರೂಪುಗೊಂಡಿತು.

56
ಹಾಗಾದರೆ ಒಂದು ಗಂಟೆಯನ್ನು 100 ನಿಮಿಷಗಳಾಗಿ ಏಕೆ ಮಾಡಲಿಲ್ಲ?

ಇಂದು ಬಹುತೇಕ ಲೆಕ್ಕಾಚಾರಗಳಿಗೆ 10ರ ಆಧಾರ ಬಳಸುತ್ತಿದ್ದರೂ, ಒಂದು ಗಂಟೆಯನ್ನು 100 ನಿಮಿಷಗಳಾಗಿ ವಿಂಗಡಿಸುವುದು ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ಆದರೆ 60ನ್ನು ನಿಮಿಷಗಳಾಗಿ ವಿಭಾಗಿಸೋದು ಸುಲಭವಾಗಿತ್ತು. ಉದಾಹರಣೆಗೆ, ಒಂದು ಗಂಟೆಯನ್ನು ಅರ್ಧ ಮಾಡಿದರೆ 30 ನಿಮಿಷ, ಮೂರು ಭಾಗ ಮಾಡಿದರೆ 20 ನಿಮಿಷ ಮತ್ತು ನಾಲ್ಕು ಭಾಗ ಮಾಡಿದರೆ 15 ನಿಮಿಷ ಸಿಗುತ್ತದೆ. ಆದರೆ 100 ನಿಮಿಷಗಳ ಪದ್ಧತಿಯಲ್ಲಿ ಇಂತಹ ಸರಳ ಭಾಗಗಳ ಲೆಕ್ಕಾಚಾರ ಅಷ್ಟು ಸುಲಭವಲ್ಲ.

66
ಹಿಂದಿನ ಗಡಿಯಾರಗಳಲ್ಲೂ ನಿಮಿಷ ಮತ್ತು ಸೆಕೆಂಡ್‌ಗಳು ಕಾಣಿಸುತ್ತಿದ್ದವೇ?

ಇಂದಿನ ಗಡಿಯಾರಗಳಲ್ಲಿ ಗಂಟೆ, ನಿಮಿಷ ಮತ್ತು ಸೆಕೆಂಡ್‌ಗಳನ್ನು ಸುಲಭವಾಗಿ ನೋಡಬಹುದು. ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ. ಆರಂಭಿಕ ಯಾಂತ್ರಿಕ ಗಡಿಯಾರಗಳಲ್ಲಿ ಸಾಮಾನ್ಯವಾಗಿ ಗಂಟೆಯನ್ನು ತೋರಿಸುವ ಒಂದು ಮುಳ್ಳು ಮಾತ್ರ ಇರುತ್ತಿತ್ತು. ಸುಮಾರು 14ನೇ ಶತಮಾನದಲ್ಲಿ ಯುರೋಪ್‌ನಲ್ಲಿ ಯಾಂತ್ರಿಕ ಗಡಿಯಾರಗಳ ಬಳಕೆ ಆರಂಭವಾಯಿತು. ನಂತರ 16ನೇ ಶತಮಾನದ ವೇಳೆಗೆ ನಿಮಿಷಗಳನ್ನು ತೋರಿಸುವ ಮುಳ್ಳಿನ ಬಳಕೆಯೂ ಹೆಚ್ಚಾಗತೊಡಗಿತು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories