ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ದೆವ್ವಗಳ ಸಂಚಾರವಿರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ವಿಜ್ಞಾನದ ಪ್ರಕಾರದ ಇದಕ್ಕೆ ಉತ್ತರವೊಂದು ಸಿಕ್ಕಿದೆ . ದೈಹಿಕ ಆಯಾಸ ಮತ್ತು ಮಾನಸಿಕ ಒತ್ತಡದಿಂದಲೂ ಇಂತಹ ದುಸ್ವಪ್ನಗಳು ಬೀಳುತ್ತವೆ.
ಇಂದಿಗೂ ರಾತ್ರಿ ಅದು ನಿರ್ಜನ ಪ್ರದೇಶದಲ್ಲಿ ಒಬ್ಬರೇ ತಿರುಗಾಡಲು ಅದೆಷ್ಟೋ ಜನರು ಭಯಪಡುತ್ತಾರೆ. ಅದರಲ್ಲಂತೂ ಸ್ಮಶಾನದ ರಸ್ತೆ ಅಥವಾ ಸಾವನ್ನಪ್ಪಿರುವ ಮನೆಗಳ ಮುಂದೆ ಹೋಗುವಾಗ ಈ ಭಯ ದುಪ್ಪಟ್ಟಾಗುತ್ತದೆ. ಎಲ್ಲರೂ ರಾತ್ರಿ ದೆವ್ವಗಳ ಸಂಚಾರ ಇರುತ್ತೆ ಎಂದು ಹೇಳುತ್ತಾರೆ. ರಾತ್ರಿಯೇ ದೆವ್ವಗಳು ಕಾಣಿಸಿಕೊಳ್ಳೋದ್ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
25
ದೆವ್ವದ ಕಲ್ಪನೆ
ನಮ್ಮ ಸಿನಿಮಾ, ಅಜ್ಜ-ಅಜ್ಜಿ ಹೇಳುವ ಕಥೆಗಳಲ್ಲಿ ದೆವ್ವಗಳಿರುತ್ತವೆ. ದೆವ್ವಗಳಿವೆಯಾ ಅಥವಾ ಇಲ್ಲವಾ ಅನ್ನೋದರ ಅಭಿಪ್ರಾಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತವೆ. ದೆವ್ವ ಅನ್ನೋದು ಕೇವಲ ಕಲ್ಪನೆ ಮತ್ತು ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳೇ ದೆವ್ವ ಎಂಬ ಬಲವಾದ ವಾದ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದೆ. ದೆವ್ವಗಳು ರಾತ್ರಿಯೇ ಏಕೆ ಕಾಣಿಸಿಕೊಳ್ಳುತ್ತೆ ಎಂಬುದರ ಬಗ್ಗೆ ವಿಜ್ಞಾನಿಗಳು ವಿವರಿಸಿದ್ದಾರೆ.
35
ರಾತ್ರಿ ಯಾಕೆ ಬರುತ್ತೆ ದೆವ್ವ?
ದೆವ್ವಗಳ ಬಗ್ಗೆ ವಿಜ್ಞಾನದಲ್ಲಿ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ದೆವ್ವ ಎಂಬ ಕಲ್ಪನೆಯನ್ನು ವಿಜ್ಞಾನ ನಂಬೋದಿಲ್ಲ. ಆದರೆ ರಾತ್ರಿ ಕಾಣುವ ಅಗೋಚರ ಶಕ್ತಿಗಳ ಬಗ್ಗೆ ವಿಜ್ಞಾನ ತನ್ನದೇ ವ್ಯಾಖ್ಯಾನ ನೀಡುತ್ತದೆ. ರಾತ್ರಿ ಮಂದ ಬೆಳಕು ಇರುತ್ತದೆ. ಈ ಬೆಳಕಿನಲ್ಲಿ ಸಾಮಾನ್ಯ ವಸ್ತು ಅಥವಾ ವಿಷಯಗಳು ವಿಚಿತ್ರದ ಜೊತೆ ಭಯಾನಕವಾಗಿ ಕಾಣಿಸಿಕೊಳ್ಳುತ್ತವೆ.
ದೇವರು ಮತ್ತು ದೆವ್ವದ ನಂಬಿಕೆಗಳೊಂದಿಗೆ ಬೆಳೆದವರು ಮಂದ ಬೆಳಕಿನಲ್ಲಿ ಕಾಣಿಸಿಕೊಳ್ಳುವ ವಿಚಿತ್ರ ದೃಶ್ಯಗಳಿಗೆ ಭೂತ ಎಂದು ವ್ಯಾಖ್ಯಾನ ನೀಡ್ತಾರೆ ಅನ್ನೋದು ವಿಜ್ಞಾನಿಗಳ ವಾದವಾಗಿದೆ. ಕೆಲವೊಮ್ಮೆ ರಾತ್ರಿ ಮಲಗಿದ್ದಾಗ ಜನರು ನಿದ್ದೆ ಮತ್ತು ಎಚ್ಚರದ ನಡುವಿನ ಸ್ಥಿತಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಕೇಳುವ ಸಣ್ಣ ಧ್ವನಿಯು ಭಯ ಹುಟ್ಟಿಸಬಹುದು.
55
ನೆರಳು ಮತ್ತು ಬೆಳಕಿನಾಟ
ಭಯಗೊಂಡಾದ ಮೆದಳು ಸಹ ಸಣ್ಣ ಧ್ವನಿ ಕೇಳಿಸಿದಾಗ ಅಪಾಯದ ಸಂಕೇತ ಎಂದು ಪರಿಗಣಿಸುತ್ತದೆ. ಕೇವಲ ಭಯವನ್ನು ಆಧರಿಸಿ ಕೇಳಿಸಿದ ಧ್ವನಿ ಅಥವಾ ಆಕಾರ ದೆವ್ವ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಜ್ಞಾನ ಹೇಳುತ್ತದೆ. ಇದು ಕೇವಲ ನೆರಳು ಮತ್ತು ಬೆಳಕಿನಾಟ ಅನ್ನೋದು ಸಹ ಒಂದು ಅಭಿಪ್ರಾಯವಾಗಿದೆ. ನಿಮಗೆ ಪದೇ ಪದೇ ದುಸ್ವಪ್ನಗಳು ಬೀಳುತ್ತಿದ್ರೆ ನೀವು ದೈಹಿಕವಾಗಿ ದಣಿದಿದ್ದು ಮತ್ತು ಮಾನಸಿಕವಾಗಿ ಒತ್ತಡದಲ್ಲಿದ್ದೀರಿ ಎಂದರ್ಥ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.