ನೀವು ಸ್ಮಾರ್ಟ್ ವಾಚ್ ಕಟ್ಟಿಕೊಂಡು Heart Rate ಚೆಕ್ ಮಾಡ್ತೀರಾ? ಹಾಗಿದ್ದರೆ ತಪ್ಪದೇ ಈ ಮಾಹಿತಿ ತಿಳಿಯಿರಿ

Published : Sep 29, 2026, 12:34 PM IST

ಇಂದಿನ ಸ್ಮಾರ್ಟ್ ವಾಚ್‌ಗಳು ಹೃದಯ ಬಡಿತ ಮತ್ತು ಇಸಿಜಿ ದಾಖಲಿಸುವ ಸಾಮರ್ಥ್ಯ ಹೊಂದಿವೆ. ಆದರೆ ಇವು ಕೇವಲ ಮುನ್ಸೂಚನೆ ನೀಡುವ ಸಾಧನಗಳಾಗಿದ್ದು, ಸ್ವಯಂ-ರೋಗನಿರ್ಣಯಕ್ಕೆ ಸೂಕ್ತವಲ್ಲ. ಹೃದಯದ ನಿಖರ ಸಮಸ್ಯೆ ತಿಳಿಯಲು ವೈದ್ಯಕೀಯ ಪರೀಕ್ಷೆಗಳೇ ಕಡ್ಡಾಯ ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ.

PREV
15
ಸ್ಮಾರ್ಟ್ ವಾಚ್‌ಗಳಿಗೆ 'ಅಸಹಜ ಹೃದಯ ಬಡಿತ' ಪತ್ತೆಹಚ್ಚುವ ಸಾಮರ್ಥ್ಯವಿದೆಯೇ?

ಇಂದಿನ ದಿನಗಳಲ್ಲಿ ಸ್ಮಾರ್ಟ್ ವಾಚ್‌ಗಳು ಕೇವಲ ನಮ್ಮ ಹೆಜ್ಜೆಗಳನ್ನು ಎಣಿಸುವ ಅಥವಾ ಸಮಯ ನೋಡುವ ಸಾಧನವಾಗಿ ಉಳಿದಿಲ್ಲ. ಅವು ನಿದ್ರೆಯನ್ನು ಅಳೆಯುತ್ತವೆ, ನಾಡಿಮಿಡಿತವನ್ನು (Pulse) ಟ್ರ್ಯಾಕ್ ಮಾಡುತ್ತವೆ. ಇನ್ನು ಕೆಲವು ಸುಧಾರಿತ (Advanced) ಸ್ಮಾರ್ಟ್ ವಾಚ್‌ಗಳು ಸಿಂಗಲ್-ಲೀಡ್ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಅನ್ನು ಕೂಡ ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿವೆ.

ನಮ್ಮ ದೈನಂದಿನ ಜೀವನದಲ್ಲಿ ಹೃದಯವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಇವು ಮಾಹಿತಿಯನ್ನು ಒದಗಿಸುತ್ತವೆ. ಆದರೆ, ಈ ಸ್ಮಾರ್ಟ್ ವಾಚ್‌ಗಳಿಗೆ ನಿಜಕ್ಕೂ ಹೃದಯದ 'ಅಸಹಜ ಬಡಿತ' ಅಥವಾ 'ಲಯ'ವನ್ನು (Abnormal rhythm) ಪತ್ತೆಹಚ್ಚುವ ಸಾಮರ್ಥ್ಯವಿದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯ ಇಲ್ಲಿದೆ.

25
ಸ್ಮಾರ್ಟ್ ವಾಚ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಹೆಚ್ಚಿನ ಸ್ಮಾರ್ಟ್ ವಾಚ್‌ಗಳು ಮಣಿಕಟ್ಟಿನ ಬಳಿ ರಕ್ತಪರಿಚಲನೆಯಲ್ಲಿ ಆಗುವ ಬದಲಾವಣೆಗಳನ್ನು ಅಳೆಯಲು ಬೆಳಕು-ಆಧಾರಿತ ಸೆನ್ಸಾರ್‌ಗಳನ್ನು ಬಳಸುತ್ತವೆ. 'ಫೋಟೋಪ್ಲೆಥಿಸ್ಮೋಗ್ರಫಿ' (Photoplethysmography - PPG) ಎಂದು ಕರೆಯಲಾಗುವ ಈ ತಂತ್ರಜ್ಞಾನವು ಹೃದಯ ಬಡಿತದ ವೇಗವನ್ನು ಟ್ರ್ಯಾಕ್ ಮಾಡುತ್ತದೆ. ಹಾಗೆಯೇ ಬಡಿತದಲ್ಲಿನ ಏರುಪೇರುಗಳನ್ನು ಕೂಡ ಗಮನಿಸುತ್ತದೆ. ಕೆಲವು ವಾಚ್‌ಗಳಲ್ಲಿ ಸಾಧನವನ್ನು ಬೆರಳಿನಿಂದ ಸ್ಪರ್ಶಿಸುವ ಮೂಲಕ ಇಸಿಜಿ (ECG) ತೆಗೆದುಕೊಳ್ಳುವ ಆಯ್ಕೆಯೂ ಇರುತ್ತದೆ.

ಇದು ಹೃದಯದ ಚಟುವಟಿಕೆಯ ಒಂದು ಸಣ್ಣ ರೆಕಾರ್ಡಿಂಗ್ ಅನ್ನು ಮಾತ್ರ ಉತ್ಪಾದಿಸುತ್ತದೆ. ಅಂದರೆ, ಹೃದಯದ ಮೇಲಿನ ಕೋಣೆಗಳ ಅನಿಯಮಿತ ಬಡಿತದ ಸ್ಥಿತಿಯಾದ 'ಏಟ್ರಿಯಲ್ ಫಿಬ್ರಿಲೇಶನ್' (Atrial Fibrillation - AF) ಅನ್ನು ಪತ್ತೆಹಚ್ಚಬಲ್ಲದು. ಈ ಎಎಫ್ (AF) ನಿಂದಾಗಿ ಎದೆಬಡಿತ ಹೆಚ್ಚಾಗುವುದು, ಆಯಾಸ ಅಥವಾ ತಲೆತಿರುಗುವಿಕೆ ಸಂಭವಿಸಬಹುದು. ಆದರೆ, ಕೆಲವರಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುವುದೇ ಇಲ್ಲ.

35
ತಪ್ಪಾದ ಎಚ್ಚರಿಕೆಗಳ ಬಗ್ಗೆ ಇರಲಿ ಗಮನ

ಸ್ಮಾರ್ಟ್ ವಾಚ್ ಒಮ್ಮೊಮ್ಮೆ ಅಸಹಜ ರೀಡಿಂಗ್ ತೋರಿಸಿದ ಮಾತ್ರಕ್ಕೆ, ಅದನ್ನೇ ಹೃದಯ ದೋಷ ಎಂದು ನಿರ್ಧರಿಸಲಾಗುವುದಿಲ್ಲ. ಏಕೆಂದರೆ, ವಾಚ್ ಅನ್ನು ಮಣಿಕಟ್ಟಿಗೆ ಕಟ್ಟಿರುವ ರೀತಿ, ರಕ್ತದ ಹರಿವಿನಲ್ಲಿನ ಸಣ್ಣಪುಟ್ಟ ಬದಲಾವಣೆಗಳು ಅಥವಾ ಚಲನೆಯಿಂದಾಗಿ ಕೆಲವೊಮ್ಮೆ ವಾಚ್ ನಿಖರವಾದ ಮಾಹಿತಿಯನ್ನು ನೀಡಲು ವಿಫಲವಾಗಬಹುದು.

ಉದಾಹರಣೆಗೆ, ವ್ಯಕ್ತಿಯೊಬ್ಬನಿಗೆ ಬೆಳಗಿನ ಜಾವ 2 ಗಂಟೆಗೆ ಹೃದಯ ಬಡಿತದಲ್ಲಿ ಏರುಪೇರಾಗಿದೆ ಎಂದು ಸ್ಮಾರ್ಟ್ ವಾಚ್ ಎಚ್ಚರಿಕೆ ನೀಡಬಹುದು. ಆದರೆ ಅವರು ನಿದ್ದೆಯಿಂದ ಎದ್ದು ಆಸ್ಪತ್ರೆಗೆ ಹೋದಾಗ ಅವರ ಹೃದಯದ ಸ್ಥಿತಿ ಸಂಪೂರ್ಣ ಸಹಜವಾಗಿರಬಹುದು. ಆದರೂ, ಆ ವಾಚ್‌ನಲ್ಲಿ ದಾಖಲಾದ ಹಿಂದಿನ ಡೇಟಾವು, ಆ ಸಮಯದಲ್ಲಿ ಹೃದಯ ಹೇಗೆ ಬಡಿದುಕೊಂಡಿತ್ತು ಎಂಬುದನ್ನು ಕಾರ್ಡಿಯಾಲಜಿಸ್ಟ್‌ಗಳಿಗೆ (ಹೃದ್ರೋಗ ತಜ್ಞರಿಗೆ) ಅರ್ಥಮಾಡಿಕೊಳ್ಳಲು ಮತ್ತು ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

45
ವೈದ್ಯರು ಏನು ಹೇಳುತ್ತಾರೆ?

ಸ್ಮಾರ್ಟ್ ವಾಚ್ ಎಂಬುದು ಸಾಂಪ್ರದಾಯಿಕ ಕಾರ್ಡಿಯಾಲಜಿಗೆ (ಹೃದ್ರೋಗ ವಿಜ್ಞಾನ) ಒಂದು ಪೂರಕ ಸಾಧನವಷ್ಟೇ. ಹೃದಯದ ಬದಲಾವಣೆಗಳನ್ನು ಗಮನಿಸಿ, ರೋಗಿಗೆ ಹೆಚ್ಚಿನ ನಿಗಾ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. "ಸ್ಮಾರ್ಟ್ ವಾಚ್ ತಂತ್ರಜ್ಞಾನವು ಕೇವಲ ಮುನ್ಸೂಚನೆ ಪಡೆಯಲು ಹಾಗೂ ಎಚ್ಚರಿಕೆ ವಹಿಸಲು ಮಾತ್ರ ಉಪಯುಕ್ತವೇ ಹೊರತು, ಇದರಿಂದ ನೀವೇ ಸ್ವಯಂ-ರೋಗನಿರ್ಣಯ (Self-diagnosis) ಮಾಡಿಕೊಳ್ಳಬಾರದು" ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ.

ಈ ವೇರಬಲ್ ಸಾಧನಗಳು ನೀಡುವ ಡೇಟಾ ವೈದ್ಯಕೀಯ ಚಿಕಿತ್ಸೆಗೆ ಮಾರ್ಗದರ್ಶನ ನೀಡುತ್ತದೆ. ಆದರೆ, ಹೃದಯದ ಸಮಸ್ಯೆಯನ್ನು ಖಚಿತಪಡಿಸಿಕೊಳ್ಳಲು 'ಸಾಂಪ್ರದಾಯಿಕ ವೈದ್ಯಕೀಯ ಪರೀಕ್ಷೆಗಳು' ಕಡ್ಡಾಯ ಎಂದು ಕಾರ್ಡಿಯಾಲಜಿಸ್ಟ್‌ಗಳು ಒತ್ತಿ ಹೇಳುತ್ತಾರೆ.

55
ತೀರ್ಮಾನ:

ನಿಮ್ಮ ಸ್ಮಾರ್ಟ್ ವಾಚ್ ‘ನಿಮ್ಮ ಹೃದಯ ಬಡಿತ ತಪ್ಪುತ್ತಿದೆ, ಎಚ್ಚರವಹಿಸಿ’ ಎಂದು ಸಂದೇಶ ರವಾನಿಸುತ್ತದೆಯೇ ಹೊರತು, ಅದು ಕಚಿತವಾಗಿ 'ಹೃದ್ರೋಗ' ಎಂದು ನಿರ್ಧರಿಸುವುದಿಲ್ಲ. ಕೆಲವೊಮ್ಮೆ ಬೇರೆ ಕಾಯಿಲೆಗಳಿಂದ ಅಥವಾ ರಕ್ತ ಪರಿಚಲನೆಯ ಬದಲಾವಣೆಗಳಿಂದಲೂ ಹೀಗಾಗಬಹುದು.

ಆದ್ದರಿಂದ, ಈ ತಂತ್ರಜ್ಞಾನವನ್ನು ಕೇವಲ 'ಆರಂಭಿಕ ಎಚ್ಚರಿಕೆ'ಯಾಗಿ (Early warning system) ಮಾತ್ರ ನೋಡಬೇಕು. ಆ ಕ್ಷಣದಲ್ಲಿ ನಮ್ಮ ಹೃದಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಹಿಡಿಯಲು ಮತ್ತು ವೈದ್ಯರಿಗೆ ಯಾವ ರೀತಿಯ ಚಿಕಿತ್ಸೆ ಅಗತ್ಯವಿದೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲು ಮಾತ್ರ ಸ್ಮಾರ್ಟ್ ವಾಚ್‌ಗಳು ಸಹಕಾರಿಯಾಗಿವೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories