ಬರೀ ಕೆಂಪಲ್ಲ, ಹಳದಿ, ಹಸಿರು ನೇರಳೆ: ವಿಭಿನ್ನ ಬಣ್ಣದ ರಕ್ತ ಹೊಂದಿರುವ 10 ಪ್ರಾಣಿಗಳಿವು

Published : May 04, 2025, 03:44 PM ISTUpdated : May 05, 2025, 08:30 AM IST

ರಕ್ತ ಎಂದರೆ ಕೆಂಪು ಎನ್ನುವುದು ಅನೇಕರ ಅಭಿಪ್ರಾಯ, ನಾವು ನೋಡಿದಂತೆ ನಾಯಿ, ಕೋಳಿ, ಹಸು, ಆನೆ ಮುಂತಾದ ಪ್ರಾಣಿಗಳೆಲ್ಲವುಗಳ ರಕ್ತ ನಮಗೆ ತಿಳಿದಿರುವಂತೆ ಕೆಂಪು. ಆದರೆ ವಿಭಿನ್ನ ರಕ್ತದ ಬಣ್ಣಗಳನ್ನು ಹೊಂದಿರುವ ಪ್ರಾಣಿಗಳು ಜೀವ ವೈವಿಧ್ಯದ ಭಾಗವಾಗಿದೆ ಎಂಬುದನ್ನು ನೀವು ನಂಬಲೇಬೇಕು. ಹೀಗಿರುವಾಗ ನಾವಿಂದು ಕೆಂಪಿನಿಂದ ಹಸಿರು ಹಳದಿ ಸೇರಿದಂತೆ ವಿಭಿನ್ನ ರಕ್ತದ ಬಣ್ಣವನ್ನು ಹೊಂದಿರುವ ಕೆಲವು ಪ್ರಾಣಿಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. 

PREV
110
ಬರೀ ಕೆಂಪಲ್ಲ, ಹಳದಿ, ಹಸಿರು ನೇರಳೆ: ವಿಭಿನ್ನ ಬಣ್ಣದ ರಕ್ತ ಹೊಂದಿರುವ 10 ಪ್ರಾಣಿಗಳಿವು

ಮೊದಲನೇಯದಾಗಿ ಆಕ್ಟೋಪಸ್‌(Octopus) ಮನುಷ್ಯರಂತೆ ಕೆಂಪು ರಕ್ತಕಣಗಳನ್ನು ಹೊಂದಿರುವುದಿಲ್ಲ ಇವುಗಳ ರಕ್ತದ ಬಣ್ಣ ನೀಲಿ.ಇವು ಆಮ್ಲಜನಕವನ್ನು ಸಾಗಿಸಲು ಉಪಯುಕ್ತವಾದ ಹಿಮೋಸಯಾನಿನ್ ಎಂಬ ತಾಮ್ರ ಆಧಾರಿತ ಪ್ರೋಟೀನ್ ಅನ್ನು ಹೊಂದಿರುತ್ತವೆ. ಈ ವರ್ಣದ್ರವ್ಯವು ಅವುಗಳ ರಕ್ತವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತದೆ.

210

ಹಾರ್ಸ್‌ಶೂ ಏಡಿ (Horseshoe Crab) ಪ್ರಾಚೀನ ಹಾರ್ಸ್‌ಶೂ ಏಡಿ ಭೂಮಿಯ ಅತ್ಯಂತ ಪ್ರಮುಖವಾದ ಆದರೆ ತುಂಬಾ ನಿರ್ಲಕ್ಷ್ಯಕ್ಕೊಳಗಾದ ಪ್ರಾಣಿ. ಇದರ ರಕ್ತದ ಬಣ್ನವೂ ಕೂಡ ನೀಲಿ. ಹಿಮೋಸಯಾನನ್‌ ಇದಕ್ಕೆ ಕಾರಣ. ಇದರ ನೀಲಿ ರಕ್ತವು ಜೈವಿಕವಾಗಿ ಆಕರ್ಷಕ ಮಾತ್ರವಲ್ಲ, ಜೀವರಕ್ಷಕವೂ ಆಗಿದೆ. ರಕ್ತವು ಲಿಮುಲಸ್ ಅಮೆಬೊಸೈಟ್ ಲೈಸೇಟ್ (LAL) ಎಂಬ ಸಂಯುಕ್ತವನ್ನು ಹೊಂದಿದ್ದು, IV ಡ್ರಿಪ್‌ಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಇಂಪ್ಲಾಂಟ್‌ಗಳ ಸುರಕ್ಷತೆಯನ್ನು ಪರೀಕ್ಷಿಸಲು ಹಾರ್ಸ್‌ಶೂ ಏಡಿಯ ರಕ್ತವನ್ನು ವೈದ್ಯಕೀಯ ಉದ್ಯಮದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. 

310

ಪೀನಟ್‌ ಹುಳು(Peanut Worm)ಅಥವಾ ಸಿಪುನ್‌ಕುಲಾ ಎಂದು ಕರೆಯಲ್ಪಡುವ ಈ ಜೀವಿ, ನೇರಳೆ ಬಣ್ಣದ ರಕ್ತವನ್ನು ಹೊಂದಿದೆ. ಇದು ಪ್ರಸಿದ್ಧಿಯಲ್ಲಿಲ್ಲದ ಆಳ ಸಮುದ್ರದ ಸಮುದ್ರ ಜೀವಿಯಾಗಿದೆ. ಇದರ ರಕ್ತವು ಅಪರೂಪದ ಕಬ್ಬಿಣ ಆಧಾರಿತ ಉಸಿರಾಟದ ವರ್ಣದ್ರವ್ಯವಾದ ಹೆಮೆರಿಥ್ರಿನ್ ಅನ್ನು ಹೊಂದಿರುತ್ತದೆ. ಹೆಮೆರಿಥ್ರಿನ್ ರಕ್ತಕ್ಕೆ ನೇರಳೆ ಅಥವಾ ವೈಲೇಟ್‌ ಬಣ್ಣವನ್ನು(purplish or violet) ನೀಡುತ್ತದೆ.

410

ಐಸ್ ಫಿಶ್(Icefish) ಹಿಮೋಗ್ಲೋಬಿನ್ ಇಲ್ಲದ ಏಕೈಕ ಕಶೇರುಕ ಈ ಅಂಟಾರ್ಕ್ಟಿಕ್ ಐಸ್ ಫಿಶ್‌. ಇವುಗಳ ದೇಹದಲ್ಲಿ ಕೆಂಪು ಬಣ್ಣದ ಬದಲು ರಕ್ತವು ಹಾಲಿನ ಬಿಳಿ ಬಣ್ಣದಲ್ಲಿರುತ್ತದೆ ಅಥವಾ ನೀರಿನಂತೆ ಪಾರದರ್ಶಕವಾಗಿ ಕಾಣುತ್ತದೆ. ದಕ್ಷಿಣ ಮಹಾಸಾಗರದ ಸಂಪೂರ್ಣ ಆಮ್ಲಜನಕದ ಸಮೃದ್ಧ ನೀರಿನಿಂದಾಗಿ ಅಲ್ಲಿ ಐಸ್ ಫಿಶ್ ಬದುಕುಳಿಯುತ್ತವೆ. 

510

ಸೀ ಕುಕುಂಬರ್‌ (Sea Cucumber) ಇದರ ರಕ್ತದ ಬಣ್ಣ ಹಳದಿ, ಸೀ ಕುಕುಂಬರ್‌ಗಳು ವಿಚಿತ್ರ ಮತ್ತು ಆಕರ್ಷಕ ಜೀವಿಗಳಾಗಿವೆ., ಅವುಗಳ ರಕ್ತವು ಹೆಚ್ಚಿನ ಮಟ್ಟದ ವೆನಾಡಿಯಮ್ ಅನ್ನು ಹೊಂದಿರುತ್ತದೆ. ಇದು ಹಳದಿ ಅಥವಾ ಹಸಿರು ಬಣ್ಣವನ್ನು ನೀಡುವ ಒಂದು ರೀತಿಯ ಲೋಹವಾಗಿದೆ.

610

ಹಸಿರು ಬಣ್ಣದ ಓತಿಕ್ಯಾತ(Green-Blooded Skink)ಓತಿಕ್ಯಾತ ಅಥವಾ ಊಸರವಳ್ಳಿ ಹೆಚ್ಚಾಗಿ ನ್ಯೂ ಗಿನಿಯಾ ದ್ವೀಪದಲ್ಲಿ ಕಾಣಸಿಗುತ್ತದೆ. ಇದು ಹೊಳೆಯುವಂತಹ ಹಸಿರು ರಕ್ತಕಣವನ್ನು ಹೊಂದಿದೆ. ನಿಂಬೆಯ ಹಸಿರು ಬಣ್ಣವನ್ನು ಇದು ಹೊಂದಿರುವುದಕ್ಕೆ ಕಾರಣ ಪಿತ್ತರಸ ವರ್ಣದ್ರವ್ಯವಾದ ಬಿಲಿವರ್ಡಿನ್‌.

710

ಜೇಡಗಳು (Spiders) ಆಕ್ಟೋಪಸ್‌ಗಳು ಮತ್ತು ಹಾರ್ಸ್‌ಶೂ ಏಡಿಗಳಂತೆಯೇ, ಅನೇಕ ಜೇಡಗಳು ತಮ್ಮ ದೇಹದಲ್ಲಿ ಆಮ್ಲಜನಕ ಸಾಗಣೆಗೆ ಹಿಮೋಸಯಾನಿನ್ ( hemocyanin)ಅನ್ನು ಬಳಸುತ್ತವೆ ಇದರಿಂದಾಗಿ ಅವುಗಳ ರಕ್ತ ನೀಲಿ ಬಣ್ಣದಲ್ಲಿ ಕಾಣುತ್ತದೆ. ಭೂಗತ ಬಿಲಗಳು ಮತ್ತು ಆಮ್ಲಜನಕದ ಮಟ್ಟಗಳು ಏರಿಳಿತಗೊಳ್ಳುವ ಒಣ ಪ್ರದೇಶಗಳು ಸೇರಿದಂತೆ ವಿವಿಧ ಪರಿಸರಗಳಲ್ಲಿ ಜೇಡಗಳು ಅಭಿವೃದ್ಧಿ ಹೊಂದಲು ಹಿಮೋಸಯಾನಿನ್ ಅನುವು ಮಾಡಿಕೊಡುತ್ತದೆ. 

810

ಜಿಗಣೆಗಳು(Leeches) ಕೆಲವು ಜಿಗಣೆಗಳು ಹಸಿರು ರಕ್ತವನ್ನು ಹೊಂದಿರುತ್ತವೆ. ಕ್ಲೋರೋಕ್ರೂರಿನ್ (chlorocruorin) ಎಂಬ ವರ್ಣದ್ರವ್ಯ ಇದಕ್ಕೆ ಕಾರಣ ಇದು. ಹಿಮೋಗ್ಲೋಬಿನ್‌ ಜೊತೆಗೆ ಇದರ ಹೋಲಿಕೆ ಇದ್ದರೂ  ದುರ್ಬಲಗೊಳಿಸಿದ ರೂಪದಲ್ಲಿ ಹಸಿರು ಬಣ್ಣದಲ್ಲಿ ಕಾಣುತ್ತದೆ. ಈ ರೂಪಾಂತರವು ಅನೇಕ ಜಿಗಣೆ ಜಾತಿಗಳು ನೀರಿನಲ್ಲಿ ವಾಸಿಸುವ ಜೀವನಶೈಲಿಗೆ ಸರಿಹೊಂದುತ್ತದೆ. ಕ್ಲೋರೋಕ್ರೂರಿನ್ ಕಡಿಮೆ ಆಮ್ಲಜನಕ ಹಾಗೂ ನಿಶ್ಚಲ ನೀರಿನಲ್ಲಿ ಆಮ್ಲಜನಕವನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ.

910

ಜೀರುಂಡೆಗಳು(Beetles)ಸಾಂಪ್ರದಾಯಿಕ ಅರ್ಥದಲ್ಲಿ ಕೀಟಗಳಿಗೆ ರಕ್ತವಿಲ್ಲದಿದ್ದರೂ, ಅನೇಕ ಜೀರುಂಡೆಗಳು ಪೋಷಕಾಂಶಗಳು ಮತ್ತು ಹಾರ್ಮೋನುಗಳನ್ನು ಸಾಗಿಸುವ ದ್ರವವಾದ ಹಿಮೋಲಿಂಫ್ (hemolymph) ಅನ್ನು ಪರಿಚಲನೆ ಮಾಡುತ್ತವೆ. ಇದರ ರಕ್ತದ ಬಣ್ಣ ಹಳದಿ. ಕೆಲವು ಜೀರುಂಡೆಗಳಲ್ಲಿ, ಕರಗಿದ ವರ್ಣದ್ರವ್ಯಗಳು ಮತ್ತು ರಕ್ಷಣಾ ರಾಸಾಯನಿಕಗಳಿಂದಾಗಿ ಈ ದ್ರವವು ಹಳದಿಯಾಗಿ ಕಾಣುತ್ತದೆ. 

1010

ಬ್ರಾಚಿಯೋಪಾಡ್‌ಗಳು(Brachiopods)ಪ್ರಾಚೀನ ಸಮುದ್ರ ಅಕಶೇರುಕಗಳಾದ ಬ್ರಾಚಿಯೋಪಾಡ್‌ಗಳು ಇಂದು ವಿರಳವಾಗಿ ಕಂಡುಬರುತ್ತವೆ ಆದರೆ ಒಂದು ಕಾಲದಲ್ಲಿ ಇವು ಸಾಗರಗಳಲ್ಲಿ ಹೇರಳವಾಗಿದ್ದವು. ಪೀನಟ್‌ ಹುಳುಗಳಲ್ಲಿ ಕಂಡುಬರುವ ಅದೇ ವರ್ಣದ್ರವ್ಯವಾದ ಹೆಮೆರಿಥ್ರಿನ್‌ನಿಂದಾಗಿ ಇವುಗಳ ರಕ್ತವು ನೇರಳೆ ಬಣ್ಣವನ್ನು ಹೊಂದಿದೆ. 

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories