ಶನಿವಾರ ಆಗಸ ನೋಡಲು ಮರೆಯದಿರಿ ಮಾಯವಾಗಲಿದೆ ಶನಿಗ್ರಹದ ರಿಂಗ್, ಇದು ವಿಸ್ಮಯವೋ, ಆತಂಕವೋ?

Published : Nov 23, 2025, 03:09 PM IST

ಶನಿವಾರ ಆಗಸ ನೋಡಲು ಮರೆಯದಿರಿ ಮಾಯವಾಗಲಿದೆ ಶನಿಗ್ರಹದ ರಿಂಗ್, ಇದು ವಿಸ್ಮಯವೋ, ಆತಂಕವೋ? , ಈಗಾಗಲೇ ಶನಿಗ್ರಹದ ಹೊರಭಾಗದಲ್ಲಿ ಕಾಣುವ ರಿಂಗ್ ಮಾಯವಾಗುತ್ತಿದೆ. ಇದಕ್ಕೆ ಕಾರಣವೇನು? ಬರಿಗಣ್ಣಿನಿಂದ ನೋಡಲು ಸಾಧ್ಯವೇ?

PREV
16
ಮಾಯವಾಗುತ್ತಿದೆ ಶನಿಗ್ರಹದ ರಿಂಗ್

ಗ್ರಹಗಳ ಪೈಕಿ ಅತೀ ಹೆಚ್ಚು ಆಕರ್ಷಕವಾಗಿ ಕಾಣುವ ಗ್ರಹ ಶನಿಗ್ರಹ. ಇತರ ಎಲ್ಲಾ ಗ್ರಹಗಳು ಸ್ವರೂಪ ಒಂದೇ ರೀತಿ ಇದೆ. ಕೇವಲ ಬಣ್ಣ ಸೇರಿದಂತೆ ಇತರ ಮೇಲ್ಮೈ ವ್ಯತ್ಯಾಸವಾಗುತ್ತದೆ. ಆದರೆ ಶನಿಗ್ರಹ ಮಾತ್ರ ಎಲ್ಲಕ್ಕಿಂತ ಭಿನ್ನ. ಕಾರಣ ಇದರ ಹೊರಳಭಾಗದಲ್ಲಿ ಉಂಗುರ ರೀತಿಯ ರಚನೆಯಿಂದ ವಿಶೇಷವಾಗಿದೆ. ಆದರೆ ಮಿಲಿಯನ್ ವರ್ಷಗಳಿಂದ ವ್ಯತ್ಯಸ್ಥವಾಗಿ ಕಾಣುವ ಶನಿಗ್ರಹದ ಹೊರ ಭಾಗದ ರಿಂಗ್ ಮಾಯವಾಗುತ್ತಿದೆ.

26
ಕ್ಷೀಣಿಸುತ್ತಿದೆ ರಿಂಗ್, ಶನಿವಾರದ ವೇಳೆ ಮಾಯ

ಶನಿಗ್ರಹವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದುದು ಅದರ ಉಂಗುರ ರೀತಿಯ ಆಕಾರದಿಂದ. ಆದರೆ ದಿನದಿಂದ ದಿನಕ್ಕೆ ಈ ಉಂಗುರ ಕ್ಷೀಣಿಸುತ್ತಿದೆ. ಶನಿವಾರ ಅಂದರೆ ನವೆಂಬರ್ 29ರ ವೇಳೆಗೆ ಶನಿಗ್ರಹದ ಉಂಗುರ ಸಂಪೂರ್ಣ ಮಾಯವಾಗಲಿದೆ. ಟೆಲಿಸ್ಕೋಪ್ ಮೂಲಕ ನೋಡಿದರೆ ಶನಿಗ್ರಹದ ಉಂಗುರ ಮಾಯವಾಗಿರುವುದು ಸ್ಪಷ್ಟವಾಗಿ ಕಾಣಿಸಲಿದೆ.

36
ಆಗಸದ ವಿಸ್ಮಯವೋ, ವಿನಾಶದ ಸಂಕೇತವೋ?

ಶನಿಗ್ರಹ ಭಾರತೀಯ ಜ್ಯೋತಿಷ್ಯ ಹಾಗೂ ಭಾರತದಲ್ಲಿ ಭಾರಿ ಪ್ರಾಮುಖ್ಯತೆ ಪಡೆದಿರುವ ಗ್ರಹ. ಇದೀಗ ಇದರ ಮೂಲ ಸ್ವರೂಪವೇ ಬದಲಾಗುತ್ತಿದೆ ಎಂದರೆ ಅರ್ಥವೇನು? ಇದರ ಸಂಕೇತವೇನು ಅನ್ನೋ ಚರ್ಚೆಗಳು ಶುರುವಾಗಿದೆ. ಆದರೆ ಇದು ವಿನಾಶದ ಸಂಕೇತವಲ್ಲ, ಆಗಸದಲ್ಲಿ ಘಟಿಸುವ ಕೌತುಕ. ಶನಿವಾರ ಸಂಪೂರ್ಣವಾಗಿ ಶನಿಗ್ರಹದ ರಿಂಗ್ ಅಗೋಚರವಾಗಲಿದೆ. ಮತ್ತೆ ಇದೇ ರೀತಿ ಘಟಿಸುವುದು 2038ರಲ್ಲಿ.

46
ಶನಿಗ್ರಹದ ಉಂಗುರು ಅದೃಶ್ಯವಾಗಲು ಕಾರಣವೇನು

ಶನಿಗ್ರಹದ ಹೊರಭಾಗದಲ್ಲಿ ಕಾಣುವ ಉಂಗುರ ರೀತಿಯ ಆಕಾರ, ಸೌರಮಂಡಲದಲ್ಲಿನ ಶನಿಗ್ರಹ ತನ್ನ ಕಕ್ಷಯಲ್ಲಿ ಸುತ್ತುವಾಗ ಜೊತೆಗೆ ಬೀಳುವ ಬೆಳಕಿನ ಸೃಷ್ಟಿಯಾಗಿರುವ ಉಂಗುರವಾಗಿದೆ. ಇದು ಶನಿವಾರದ ವೇಳೆ ಮಾಯವಾಗಲಿದೆ. ಇದಕ್ಕೆ ಕಾರಣ ಭೂಮಿ ಹಾಗೂ ಶನಿಗ್ರಹ ಆರ್ಬಿಟಲ್ ಅಲೈನ್ಮೆಂಟ್ ಆಗುವ ಕಾರಣ ಈ ತೆಳ್ಳಗಿನ ಉಂಗುರ ಭೂಮಿಯಿಂದ ನೋಡಿದಾದ ಅದೃಶ್ಯವಾದಂತೆ ಕಾಣಲಿದೆ.

56
13 ರಿಂದ 16 ವರ್ಷಕ್ಕೊಮ್ಮೆ ಈ ಘಟನೆ

ಇಂಗ್ಲೀಷ್ ವಿಜ್ಞಾನಿ ಡ್ಯಾಮಿಯನ್ ಪೀಚ್ ಈಗಾಗಲೇ ಶನಿಗ್ರಹದ ಉಂಗುರಗಳು ಕ್ಷೀಣಿಸುತ್ತಿರುವ ಫೋಟೋಗಳನ್ನು ಸೆರೆಹಿಡಿದ್ದಾರೆ. ಭೂಮಿಯಿಂದ ಶನಿಗ್ರಹ ನೋಡುವ ದೃಷ್ಟಿಯ ಕೋನ ಬದಲಾಗಲಿದೆ. ಮತ್ತಷ್ಟು ಹತ್ತಿರವಾಗಲಿದೆ. ಇದರಿಂದ ಶನಿಗ್ರಹದ ಮೇಲಿನ ರಿಂಗ್ ಮಾಯವಾಗಲಿದೆ. ಭೂಮಿ ಹಾಗೂ ಶನಿಗ್ರಹ ತನ್ನ ಕಕ್ಷೆಯಲ್ಲಿ ಸಂಚರಿಸುವಾಗ ಇದು ಸಂಭವಿಸುತ್ತದ. ಪ್ರತಿ 13 ರಿಂದ 16 ವರ್ಷಕ್ಕೊಮ್ಮೆ ಈ ಘಟನೆ ಸಂಭವಿಸುತ್ತದೆ.

13 ರಿಂದ 16 ವರ್ಷಕ್ಕೊಮ್ಮೆ ಈ ಘಟನೆ

66
ಟೆಲಿಸ್ಕೋಪಿಕ್ ಉಪಕರಣ ಮೂಲಕ ವೀಕ್ಷಣೆ ಸಾಧ್ಯ

ಶನಿಗ್ರಹದ ತೆಳುವಾದ ಉಂಗುರ ಸಾಮಾನ್ಯ ದಿನಗಳಲ್ಲೂ ಬರಿಗಣ್ಣಿಗೆ ಕಾಣುವುದಿಲ್ಲ. ಅತ್ಯಾಧುನಿಕ ಟೆಲಿಸ್ಕೋಪ್ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನು ಈ ಉಂಗುರ ಮಾಯವಾಗುವ ವಿಶೇಷ ಘಟನೆಯನ್ನು ಟೆಲಿಸ್ಕೋಪ್ ಮೂಲಕ ವೀಕ್ಷಿಸಬುಹುದು. ಆದರೆ ಪ್ರತಿ ಶನಿಗ್ರಹದ ಉಂಗುರ ಮಾಯ ಘಟನೆ ವೀಕ್ಷಿಸಲು ಸಾಧ್ಯ ಎಂದು ಹೇಳುವುದು ಕಷ್ಟ. ಕಾರಣ 2009ರಲ್ಲಿ ಈ ಘಟನೆ ನಡೆದಿತ್ತು. ವಿಜ್ಞಾನಿಗಳು ಟೆಲಿಸ್ಕೋಪಿಕ್ ಮೂಲಕ ವೀಕ್ಷಣೆಗೆ ಕಾದು ಕುಳಿತಿದ್ದರು. ಆದರೆ ಭೂಮಿ ಹಾಗೂ ಶನಿಗ್ರಹದ ಕ್ರಾಸಿಂಗ್ ಸೂರ್ಯನಿಗೆ ಹತ್ತಿರ ದಿಕ್ಕಿನಲ್ಲಿ ಸಾಗಿತ್ತು. ಹೀಗಾಗಿ ವೀಕ್ಷಣೆ ಸಾಧ್ಯವಾಗಿರಲಿಲ್ಲ. ಸೂರ್ಯನ ಪ್ರಕರಣ ಬೆಳಕಿನಲ್ಲಿ ಯಾವುದು ಸ್ಪಷ್ಟವಾಗುದಿಲ್ಲ.

ಟೆಲಿಸ್ಕೋಪಿಕ್ ಉಪಕರಣ ಮೂಲಕ ವೀಕ್ಷಣೆ ಸಾಧ್ಯ

Read more Photos on
click me!

Recommended Stories