11 ವರ್ಷದ ಬಳಿಕ ಕೌತುಕ ನೋಡಲು ರೆಡಿಯಾಗಿ,ಕಾಣಿಸಲಿದೆ ಸ್ಟ್ರಾಬರಿ ಚಂದ್ರ

Published : Jun 07, 2025, 09:06 PM IST

ಬರೋಬ್ಬರಿ 11 ವರ್ಷಗಳ ಬಳಿಕ ಆಗಸದ ವಿಸ್ಮಯ ನೋಡಲು ಸಜ್ಜಾಗಿದೆ. ಸ್ಟ್ರಾಬರಿ ಚಂದ್ರ ಆಗಸದಲ್ಲಿ ಗೋಚರಿಸಲಿದ್ದಾರೆ. ಭೂಮಿಗೆ ಹತ್ತಿರದಲ್ಲಿ ಚಂದ್ರ ಕಾಣಿಸಿಕೊಳ್ಳವು ಕಾರಣ ಗಾತ್ರ ಹಾಗೂ ಬಣ್ಣದಲ್ಲೂ ಅತ್ಯಂತ ಆಕರ್ಷವಾಗಿರುತ್ತದೆ. ಈ ಸ್ಟ್ರಾಬರಿ ಚಂದ್ರ ಯಾವಾ ಗೋಚರಿಸಲಿದೆ.

PREV
16
ಮಹಾನ್ ಖಗೋಳ ಘಟನೆ

ಪ್ರತಿ ದಿನ ಆಗಸದಲ್ಲಿ ಹಲವು ಕೌತುಕಗಳು ಘಟಿಸುತ್ತದೆ. ಆದರೆ ಕೆಲ ಘಟನೆಗಳು ಅತ್ಯಂತ ಮುಖ್ಯವಾಗಿದೆ. ಇದೀಗ ಮತ್ತೊಂದು ವಿಸ್ಮಯಕ್ಕೆ ಈ ಜಗತ್ತು ಸಾಕ್ಷಿಯಾಗಲಿದೆ. ಬರೋಬ್ಬರಿ 11 ವರ್ಷಗಳ ಬಳಿಕ ಸ್ಟ್ರಾಬರಿ ಚಂದ್ರ ಆಗಸದಲ್ಲಿ ಗೋಚರಿಸಲಿದ್ದಾನೆ. ಈ ವಿಸ್ಮಯ ನೋಡಲು ಎಲ್ಲರು ಸಜ್ಜಾಗಿದೆ. ಕಾರಣ ಈ ಕೌತುಕ ನೋಡಲು ಯಾವುದೇ ಆಧುನಿಕ ಅಥವಾ ವೈಜ್ಞಾನಿಕ ಸಾಧನ ಬೇಕಿಲ್ಲ. ಬರಿಗಣ್ಣಿನಿಂದ ನೋಡಲು ಸಾಧ್ಯವಿದೆ.

26
ಜೂನ್ 10 ಹಾಗೂ 11ಕ್ಕೆ ಸ್ಟ್ರಾಬರಿ ಚಂದ್ರ

ಸ್ಟ್ರಾಬರಿ ಚಂದ್ರ ಜೂನ್ 10 ಮತ್ತು 11 ರಂದು ಗೋಚರಿಸಲಿದೆ. ಇದು ಖಗೋಳ ವಿಸ್ಮಯ. ಚಂದ್ರ ನಿಮ್ಮ ಮನೆ ಬಾಗಿಲಿಗೆ ಬರುತ್ತಾನೆ. ದಿಗಂತಕ್ಕೆ ತುಂಬಾ ಹತ್ತಿರದಲ್ಲಿ ಚಂದ್ರ ಇರುವುದರಿಂದ, ಚಂದ್ರನ ಗಾತ್ರ ದೊಡ್ಡದಾಗಿ ಕಾಣಲಿದೆ. ಭೂಮಿಯ ವಾತಾವರಣದ ಮೂಲಕ ಚಂದ್ರನ ಬೆಳಕು ಹಾದುಹೋಗುವುದರಿಂದ, ಚಂದ್ರ ದೊಡ್ಡದಾಗಿ ಕಾಣುತ್ತದೆ.

36
ಬರಿಗಣ್ಣಿನಿಂದ ನೋಡಿ

 ಚಂದ್ರನ ವೀಕ್ಷಿಸಲು ಬೈನಾಕುಲರ್ ಅಥವಾ ಇತರ ವೈಜ್ಞಾನಿಕ ಸಾಧನೆ ಬೇಡ. ಭೂಮಿಗೆ ಹತ್ತಿರದಲ್ಲಿ ಚಂದ್ರ ಹಾದು ಹೋಗುವ ಕಾರಣ ಸ್ಪಷ್ಟವಾಗಿ ಗೋಚರಿಸಲಿದೆ. ಬರಿಗಣ್ಣಿನಿಂದ ನೋಡಲು ಸಾಧ್ಯವಿದೆ. ಭೂಮಿಗೆ ಹತ್ತರಿದಲ್ಲಿ ಚಂದ್ರ ಗೋಚರವಾಗಲಿದ್ದಾನೆ. ಇದರಿಂದ ಸ್ಟಾಬರಿ ಬಣ್ಣದಲ್ಲಿ ಕಾಣುವ ಕಾರಣ ಸ್ಟ್ರಾಬರಿ ಚಂದ್ರ ಎಂದು ಕರೆಯಲಾಗುತ್ತದೆ. 

46
ನೋಡುವ ಸಮಯ

ಜೂನ್ 10 ಮತ್ತು 11 ರಂದು ರಾತ್ರಿ 12:20 ರಿಂದ 3:44 ರವರೆಗೆ ಚಂದ್ರ ದೊಡ್ಡದಾಗಿ ಕಾಣುತ್ತದೆ. ಸಾಮಾನ್ಯಕ್ಕಿಂತ ಶೇಕಜಾ  99.60% ರಷ್ಟು ದೊಡ್ಡದಾಗಿ ಕಾಣುತ್ತದೆ. ಸೂರ್ಯ ಮತ್ತು ಚಂದ್ರನ ಕೋನೀಯ ಸ್ಥಾನದಿಂದಾಗಿ ಈ ಖಗೋಳ ಘಟನೆ ಸಂಭವಿಸುತ್ತದೆ. ಇದನ್ನು ಸ್ಟ್ರಾಬೆರಿ ಚಂದ್ರ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಚಂದ್ರನ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.

56
ವೈಜ್ಞಾನಿಕ ಹೆಸರು

ವಿಜ್ಞಾನಿಗಳು ಇದನ್ನು 'ಸ್ಟ್ಯಾಂಡಿಂಗ್ ಸ್ಟಿಲ್ ಮೂನ್' ಎಂದು ಕರೆಯುತ್ತಾರೆ. ಬಹಳ ದಿನಗಳ ನಂತರ ಈ ಘಟನೆ ಸಂಭವಿಸುತ್ತಿದೆ. ಕೊನೆಯದಾಗಿ 2006 ರ ಜೂನ್‌ನಲ್ಲಿ ಸ್ಟ್ರಾಬೆರಿ ಚಂದ್ರ ಕಾಣಿಸಿಕೊಂಡಿತ್ತು. 11 ವರ್ಷಗಳ ನಂತರ ಮತ್ತೆ ಕಾಣಿಸಿಕೊಳ್ಳುತ್ತಿದೆ. ಮುಂದಿನ ಬಾರಿ 2043 ರಲ್ಲಿ ಕಾಣಿಸಿಕೊಳ್ಳಲಿದೆ.

66
ವೈಜ್ಞಾನಿಕ ಕಾರಣ

ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನಿಂದ 23.5 ಡಿಗ್ರಿಗಳಷ್ಟು ವಾಲಿದೆ. ಜೂನ್‌ನಲ್ಲಿ ಭೂಮಿಗೆ ನೇರ ಸೂರ್ಯನ ಬೆಳಕು ಬೀಳುತ್ತದೆ. ಚಂದ್ರ 4 ಲಕ್ಷ ಕಿ.ಮೀ ದೂರದಲ್ಲಿದೆ. ಭೂಮಿಯ ಕಕ್ಷೆ ವಾಲಿರುವುದರಿಂದ ಚಂದ್ರ ಸಾಮಾನ್ಯವಾಗಿ 5.5 ಡಿಗ್ರಿ ಕೋನದಲ್ಲಿರುತ್ತದೆ. ಸ್ಟ್ರಾಬೆರಿ ಚಂದ್ರನ ಸಮಯದಲ್ಲಿ, ಚಂದ್ರ 5.5 ಡಿಗ್ರಿ ಕೆಳಗೆ ಬರುತ್ತದೆ. ಸಾಮಾನ್ಯವಾಗಿ 18 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈಬಾರಿ 11 ವರ್ಷಕ್ಕೆ ಕಾಣಿಸಿಕೊಳ್ಳುತ್ತಿದೆ. ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ. 

Read more Photos on
click me!

Recommended Stories