ವಿಜ್ಞಾನಿಗಳಿಂದ ಜಗತ್ತು ಬೆಚ್ಚಿಬೀಳುವಂತಹ ಅವಿಷ್ಕಾರ: ಕೊನೆಗೂ ಪತ್ತೆಯಾಯ್ತು ಅತ್ಯಧಿಕ ಚಿನ್ನವಿರುವ ಪ್ರದೇಶ

Published : Jun 01, 2025, 02:11 PM IST

Discovery of precious metals: ವಿಜ್ಞಾನಿಗಳು ಭೂಮಿಯ ಮಧ್ಯಭಾಗದಲ್ಲಿ ಅಮೂಲ್ಯ ಲೋಹಗಳನ್ನು ಪತ್ತೆಹಚ್ಚಿದ್ದಾರೆ. ರುಥೇನಿಯಮ್-100 ಐಸೊಟೋಪ್‌ನ ಉಪಸ್ಥಿತಿಯು ಈ ಲೋಹಗಳು ಮ್ಯಾಂಟಲ್ ಪ್ಲೂಮ್‌ಗಳ ಮೂಲಕ ಮೇಲ್ಮೈಗೆ ಬರುತ್ತಿವೆ ಎಂದು ಸೂಚಿಸುತ್ತದೆ.

PREV
18

ಜರ್ಮನಿಯ ವಿಜ್ಞಾನಿಗಳು ಜಗತ್ತು ಅಚ್ಚರಿಪಡುವಂತಹ ಅವಿಷ್ಕಾರವನ್ನು ಪತ್ತೆ ಮಾಡಿದ್ದಾರೆ. ಅತ್ಯಧಿನ ಬೆಲೆಬಾಳುವ ಲೋಹಗಳಿರುವ ಪ್ರದೇಶವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಜರ್ಮನಿಯ ಗೊಟ್ಟಿಂಗನ್ ವಿಶ್ವವಿದ್ಯಾಲಯದ ಭೂರಸಾಯನಶಾಸ್ತ್ರಜ್ಞರ ತಂಡ ಈ ಅವಿಷ್ಕಾರವನ್ನು ಮಾಡಿದೆ.

28

ಜ್ವಾಲಾಮುಖಿ ಶಿಲೆಗಳಲ್ಲಿ ರುಥೇನಿಯಮ್ -100 ಎಂಬ ಲೋಹವನ್ನು ಜರ್ಮನಿಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅಮೂಲ್ಯ ಲೋಹಗಳಿರುವ ಭಾಗವನ್ನು ಪತ್ತೆ ಮಾಡಲಾಗಿದೆ. ಈ ಅಮೂಲ್ಯ ಲೋಹಗಳು ಮ್ಯಾಂಟಲ್ ಪ್ಲೂಮ್‌ಗಳ (Mantle Plumes) ಸಹಾಯದಿಂದ ಮೇಲ್ಮೈಗೆ ಬರುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

38

ಹವಾಯಿಯನ್ ದ್ವೀಪಗಳ ಜ್ವಾಲಾಮುಖಿ ಬಂಡೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ರುಥೇನಿಯಮ್-100 ಐಸೊಟೋಪ್ ಇರೋದನ್ನು ವಿಜ್ಞಾನಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ರುಥೇನಿಯಮ್-100 ಐಸೊಟೋಪ್ ಭೂಮಿಯ ಮಧ್ಯ ಭಾಗದಲ್ಲಿ ಕಂಡು ಬರುತ್ತದೆ.

48

ಭೂಮಿಯ ಮೇಲ್ಪದರಿನಲ್ಲಿ ರುಥೇನಿಯಮ್-100 ಐಸೊಟೋಪ್ ಕಂಡು ಬರಲ್ಲ. ಆದರೆ ಭೂ ಭಾಗದಲ್ಲಿ ಹೆಚ್ಚಿನ ಒತ್ತಡದಿಂದಾಗಿ ರುಥೇನಿಯಮ್-100 ಐಸೊಟೋಪ್ ಹೊರ ತೆಗೆದುಕೊಂಡು ಬರುವುದು ಕಠಿಣ ಕೆಲಸ. ಆದ್ರೆ ಈ ಕೆಲಸವನ್ನು ಮ್ಯಾಂಟಲ್ ಪ್ಲೂಮ್‌ (Mantle Plumes) ಮಾಡುತ್ತೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

58

ಭೂಮಿಯ ಮಧ್ಯಭಾಗ ಮತ್ತು ಮೆಟಲ್ ನಡುವಿನ ಭಾಗದಿಂದ ಉಂಟಾಗುವ ಅತಿಯಾದ ಬಿಸಿಯಾದ ಬಂಡೆಯ ಸ್ತಂಭಗಳನ್ನು ಮ್ಯಾಂಟಲ್‌ ಫ್ಲೋಮ್ ಎಂದು ಕರೆಯಲಾಗುತ್ತದೆ. ಈ ಜ್ವಾಲಾಮುಖಿಗಳು ದ್ವೀಪಗಳಂತೆ ನಿರ್ಮಾಣವಾಗಿರುತ್ತವೆ. ಇಲ್ಲಿಯ ತೀವ್ರವಾದ ಶಾಖ ಮತ್ತು ಒತ್ತಡವನ್ನು ಬಳಸಿಕೊಂಡು ಕೆಳ ಭಾಗದಲ್ಲಿರುವ ರುಥೇನಿಯಮ್-100 ಐಸೊಟೋಪ್ ಮೇಲ್ಭಾಗಕ್ಕೆ ತಳ್ಳಲಾಗುತ್ತದೆ ಎಂಬ ವಿಷಯ ವಿಜ್ಞಾನಿಗಳ ಸಂಶೋಧನೆಯಲ್ಲಿ ಕಂಡು ಬಂದಿದೆ.

68

ಈ ಮ್ಯಾಂಟಲ್‌ ಪ್ಲೂಮ್‌ಗಳು ಚಿನ್ನ, ಪ್ಲಾಟಿನಂ, ಇರಿಡಿಯಮ್ ಮತ್ತು ರುಥೇನಿಯಮ್‌ನಂತಹ ಮಧ್ಯಭಾಗದಲ್ಲಿ ಸಿಕ್ಕಿಹಾಕಿಕೊಂಡಿರುವ ಲೋಹಗಳನ್ನು ಹೊರಪದರಕ್ಕೆ ತರುತ್ತವೆ. ರುಥೇನಿಯಮ್-100 ರ ಉಪಸ್ಥಿತಿಯು ಭೂರಾಸಾಯನಿಕ ಲಕ್ಷಣವಾಗಿದ್ದು, ಇದು ಪ್ರಾಥಮಿಕವಾಗಿ ಭೂಮಿಯ ಮಧ್ಯಭಾಗದಲ್ಲಿ ಕಂಡುಬರುತ್ತದೆ.

78

ಈ ಸಂಶೋಧನೆಯ ಪ್ರಮುಖ ವಿಜ್ಞಾನಿಯಾಗಿರುವ ಡಾ. ನಿಲ್ಸ್‌ ಮೆಸ್ಲಿಂಗ್, ನಾವು ನಿಜವಾಗಿಯೂ ಚಿನ್ನವನ್ನುನ ಕಂಡು ಹಿಡಿದಿದ್ದೇವೆ. ನಮ್ಮ ಈ ಸಾಕ್ಷ್ಯಗಳು ಲೋಹಗಳನ್ನು ಮಧ್ಯಭಾಗದಿಂದ ಮೇಲ್ಮೈ ಕಡೆಗೆ ಮರುಬಳಕೆ ಮಾಡಲಾಗುತ್ತಿರೋದನ್ನು ದೃಢಪಡಿಸುತ್ತವೆ ಎಂದು ಹೇಳಿದ್ದಾರೆ.

88

ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮಧ್ಯಭಾಗ ರಚನೆಯಾಗಿದೆ. ಈ ಭಾಗದಲ್ಲಿಯೇ ಭೂಮಿಯ ಶೇ.99.999% ಚಿನ್ನ ಮತ್ತು ಸೈಡೆರೊಫೈಲ್ ಲೋಹವಿದೆ. ಭೂಮಿಯ ಮೇಲ್ಭಾಗದಿಂದ ಸುಮಾರು ನೂರಾರು ಕಿಲೋಮೀಟರ್ ದಪ್ಪವಾದ ಬಂಡೆಗಳಿಂದ ಆವೃತವಾಗಿದೆ. ಇಲ್ಲಿಯವರೆಗೆ ಈ ಪ್ರದೇಶವನ್ನು ತಲುಪಲು ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಆದ್ರೆ ರುಥೇನಿಯಮ್-100 ಆವಿಷ್ಕಾರವು ಹೊಸ ಮಾರ್ಗ ತೆರೆದಿಟ್ಟಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories