ಜೇನಿನ ಕಂಠದಿಂದ ಕನ್ನಡಿಗರ ಹೃದಯ ಕದ್ದ 'ಕೃಷ್ಣ'ನಿಗೆ ಹುಟ್ಟು ಹಬ್ಬದ ಶುಭಾಶಯಗಳು

First Published Jun 3, 2020, 4:54 PM IST

ಉಸಿರೇ, ಉಸಿರೇ ಈ ಉಸಿರಾ ಕೊಲ್ಲಬೇಡ ಎಂದು ಹಾಡುತ್ತಾ ಕನ್ನಡಿಗರ ಹೃದಯದಲ್ಲಿ ಸುಮಧುರ ನೆಲೆ ಕಂಡುಕೊಂಡು ತನ್ನ ಜೇನಿನ ಕಂಠದ ಮೂಲಕ ಕನ್ನಡ ಸೇರಿದಂತೆ ತೆಲುಗು,ತಮಿಳು ಭಾಷೆಯ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಕರುನಾಡಿನ ಹೆಮ್ಮೆಯ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಜನ್ಮ ದಿನದ ಶುಭಾಶಯಗಳು. 

ರಾಜೇಶ್ ಅವರು 1973 ರ ಜೂನ್ 3 ರಂದು ತಮಿಳುನಾಡಿನಲ್ಲಿ ಜನಿಸಿದರು .
undefined
ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್.
undefined
ಬಾಲ್ಯದಲ್ಲೇ ತಾಯಿಯ ಬಳಿ ಸಂಗೀತ ಅಭ್ಯಾಸ ಶುರುಮಾಡಿದರು.
undefined
ಗೌರಿ ಗಣೇಶ ಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು.
undefined
ರಾಜೇಶ್ ಅವರು ನಾದಬ್ರಹ್ಮ ಹಂಸಲೇಖ ಅವರ ನೆಚ್ಚಿನ ಶಿಷ್ಯರಲ್ಲಿ ಒಬ್ಬರು.
undefined
ಹಂಸಲೇಖ ಅವರ ಆದಿಯಾಗಿ ಕನ್ನಡದ ಎಲ್ಲಾ ಸಂಗೀತ ನಿರ್ದೇಶಕರಿಗೆ ಹಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
undefined
ಸಿದ್ಧಗಂಗಾ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿರುವ ಗಾಯಕ.
undefined
2008 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ಅವರ ನಿರ್ದೇಶನದ ಗಾಳಿಪಟ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿಅಭಿನಯಿಸಿದ್ದಾರೆ .
undefined
ಉಸಿರೇ ಉಸಿರೇ, ಹೊಂಬಾಳೆ ಹೊಂಬಾಳೆ, ಮನಸೇ ಮನಸೇ ಥಾಂಕ್ಯೂ ಹೀಗೆ ಹಲವಾರು ಹಿಟ್ ಹಾಡುಗಳು ಇವರ ಕಂಠದಿಂದ ಹೊರಹೊಮ್ಮಿದೆ.
undefined
ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಶೋ ತೀರ್ಪುಗಾರರಾಗಿದ್ದಾರೆ.
undefined
ಅದ್ಭುತ ಗಾಯನದೊಂದಿಗೆ, ಹ್ಯಾಂಡ್ಸಮ್ ಲುಕ್‌ನಿಂದಲು ಎಲ್ಲರ ಹೃದಯ ಕದ್ದ ಚೋರ.
undefined
click me!