ಚಿರ ಯೌವನಿಗ ನಟ ರಮೇಶ್ ಅರವಿಂದ್ ಇಂದು (ಸೆ.10) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡಪ್ರಭ-ಸುವರ್ಣ ನ್ಯೂಸ್ ಆಯೋಜಿಸಿರುವ 7 ವಂಡರ್ಸ್ ಆಫ್ ಕರ್ನಾಟಕ ಯೋಜನೆಯ ರಾಯಭಾರಿ ಆಗಿರುವ ಅವರು ನಟಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದ ‘ಶಿವಾಜಿ ಸುರತ್ಕಲ್ 2’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.
‘ಶಿವಾಜಿ ಸುರತ್ಕಲ್ 2’ ಸಿನಿಮಾ 2023ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಎಂಬ ಟ್ಯಾಗ್‌ಲೈನ್ ಇಡಲಾಗಿದೆ.
ರಮೇಶ್ ತಂದೆಯ ಪಾತ್ರದಲ್ಲಿ ಬಹುಭಾಷಾ ನಟ ನಾಸರ್ ಮತ್ತು ಪುತ್ರಿಯ ಪಾತ್ರದಲ್ಲಿ ಆರಾಧ್ಯ ನಟಿಸುತ್ತಿದ್ದಾರೆ. ಶಿವಾಜಿ ಸುರತ್ಕಲ್ ಭಾಗ 1ರಲ್ಲಿ ತಂದೆ, ಮಗಳು ಇರಲಿಲ್ಲ.
ಈ ಸಿನಿಮಾದಲ್ಲಿ ಅವರಿಬ್ಬರ ಕತೆ ಬರಲಿದೆ. ಅದರೊಂದಿಗೆ ಕೇಸ್ ಮುಂದುವರೆಯುತ್ತದೆ. ರಮೇಶ್ ಮೂರು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟೀಸರ್ ಕುರಿತಾಗಿ ಮಾತನಾಡಿರುವ ನಿರ್ದೇಶಕ ಆಕಾಶ್ ಶ್ರೀವತ್ಸ, ‘ಟ್ಯಾಗ್‌ಲೈನ್‌ನಲ್ಲಿ ಹೇಳಿರುವಂತೆ ಇದು ಮಾಯಾವಿಯನ್ನು ಕೊಲ್ಲುವ ಕತೆ. ಮಾಯಾವಿ ಅನ್ನುವುದು ನಮ್ಮೊಳಗೆ ಇರುವ ಕೆಟ್ಟತನವೂ ಆಗಿರಬಹುದು. ಈ ಥೀಮ್ ಅನ್ನು ಪ್ರಸ್ತುತಪಡಿಸುವ ಟೀಸರ್ ಬಿಡುಗಡೆಯಾಗುತ್ತಿದೆ.
ಶಿವಾಜಿ ಸುರತ್ಕಲ್ ಮೊದಲ ಭಾಗ ನೋಡಿದವರಿಗೆ ಈ ಸಿನಿಮಾ ತುಂಬಾ ಇಷ್ಟವಾಗಲಿದೆ. ಹೊಸತಾಗಿ ನೋಡುವವರಿಗೆ ಇದೊಂದು ಹೊಸ ಸಿನಿಮಾದಂತೆ ಅನುಭವವಾಗುತ್ತದೆ’ ಎನ್ನುತ್ತಾರೆ.
ರಮೇಶ್ ಅವರಿಗೆ ಶುಭಾಶಯ ತಿಳಿಸಿ: ಹುಟ್ಟುಹಬ್ಬದ ಸಲುವಾಗಿ ರಮೇಶ್ ಅವರು ಅಭಿಮಾನಿಗಳ ಜೊತೆ ಮಾತನಾಡುವ ನಿರ್ಧಾರ ಮಾಡಿದ್ದಾರೆ. ಇವತ್ತು ನೀವು ವಾಟ್ಸಪ್ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಲುಪಿಸಬಹುದು.
ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ಬರೆಯುವುದು ಮರೆಯಬೇಡಿ. ಪ್ರತಿಯೊಬ್ಬರಿಗೂ ರಮೇಶ್ ಪ್ರತಿಕ್ರಿಯಿಸಲಿದ್ದಾರೆ. ವಿಭಿನ್ನವಾಗಿ ಮೆಸೇಜ್ ಕಳುಹಿಸಿದವರಿಗೆ ರಮೇಶ್ ಕರೆಮಾಡಿ ಮಾತನಾಡಲಿದ್ದಾರೆ. ವಾಟ್ಸಪ್ ನಂ- 89515 99009, 89516 99009