ಸ್ಯಾಂಡಲ್ ವುಡ್ ನಟಿ ಯಜ್ಞಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತುಳು ಸಿನಿಮಾರಂಗದ ನಟನ ಕೈ ಹಿಡಿದಿದ್ದಾರೆ. ಶೆಟ್ಟರ ಮದುವೆಯಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ, ರಿಷಬ್ ಹಾಗೂ ಪ್ರಮೋದ್ ಶೆಟ್ಟಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಕ್ಟೋಬರ್ 30 ಸದ್ದಿಲ್ಲದೆ ನಡೆದ ಮದುವೆಯ ಪೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.