ಕಳೆದ 35 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಶ್ರುತಿ ಕೃಷ್ಣ (Shruthi Krishna). ನಾಯಕಿಯಾಗಿ ಎಂಟ್ರಿ ಕೊಟ್ಟು, ಇದೀಗ ಪೋಷಕ ಪಾತ್ರಗಳ ಮೂಲಕ ಪಾತ್ರಗಳಿಗೆ ಜೀವ ತುಂಬುವ ಇವರು ಕನ್ನಡಿಗರ ನೆಚ್ಚಿನ ನಟಿಯೂ ಹೌದು.
ಇದೀಗ ನಟಿ ಶ್ರುತಿ ಹೊಸ ಮನೆ ನಿರ್ಮಾಣ ಮಾಡಿದ್ದು, ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಸತ್ಯನಾರಾಯಣ ಸ್ವಾಮಿ ಪೂಜೆ ಕೂಡ ನಡೆದಿದೆ. ಗೃಹಪ್ರವೇಶ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಜನಪ್ರಿಯ ನಟ- ನಟಿಯರು ಆಗಮಿಸಿ ಶುಭ ಕೋರಿದ್ದಾರೆ.
ನಟಿ ಶ್ರುತಿ ಹಾಗೂ ಮಗಳು ಗೌರಿ ಶ್ರುತಿ ತಮಗಾಗಿ ಈ ಮನೆಯನ್ನು ನಿರ್ಮಾಣ ಮಾಡಿದ್ದು, ಸೆಲೆಬ್ರಿಟಿಗಳು ಅಮ್ಮ -ಮಗಳಿಗೆ ಗೃಹಪ್ರವೇಶದ ಶುಭ ಕೋರಿದ್ದಾರೆ. ಗೃಹಪ್ರವೇಶಕ್ಕೆ ನಟಿ ಶೃತಿಯ ಆತ್ಮೀಯ ಸ್ನೇಹಿತೆಯರಾದ ಸುಧಾರಾಣಿ, ಮಾಳವಿಕಾ ಹಾಗೂ ತಾರಾ ಅನುರಾಧ ಆಗಮಿಸಿದ್ದು, ಎಲ್ಲರೂ ಜೊತೆಯಾಗಿ ಫೋಟೊ ತೆಗೆಸಿಕೊಂಡಿದ್ದಾರೆ.
ನಟ ಪ್ರೇಮ್ ತಮ್ಮ ಕುಟುಂಬದ ಜೊತೆ ಆಗಮಿಸಿದ್ದು, ಪತ್ನಿ ಜ್ಯೋತಿ ಪ್ರೇಮ್ ಹಾಗೂ ಮಗಳು ಅಮೃತಾ ಪ್ರೇಮ್ ಗೃಹಪ್ರವೇಶಕ್ಕೆ ಆಗಮಿಸಿ ಶುಭ ಕೋರಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ನಟಿ ಚಂದ್ರಕಲಾ ಮೋಹನ್ ಕೂಡ ಆಗಮಿಸಿ, ನಟಿ ಶ್ರುತಿಗೆ ಅಭಿನಂದನೆ ಸಲ್ಲಿಸಿದ್ದು, ಸತ್ಯನಾರಾಯಣ ಸ್ವಾಮಿ ಮುಂದೆ ನಿಂತು ಶ್ರುತಿ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ ಹರಿಕೃಷ್ಣ, ವಾಣಿ ಹರಿಕೃಷ್ಣ, ಗಾಯಕಿ ಅರ್ಚನಾ ಉಡುಪ, ನಿರ್ದೇಶಕ ತರುಣ್ ಸುಧೀರ್, ಮಧು ದೈತೋಟ, ವಾಸುಕಿ ವೈಭವ್ ಕೂಡ ಆಗಮಿಸಿದ್ದರು.
ಇನ್ನು ಜನಪ್ರಿಯ ನಟಿಯರಾದ ಪ್ರಿಯಾಂಕ ಉಪೇಂದ್ರ, ಅಮೂಲ್ಯ ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಶ್ರುತಿ ಕುಟುಂಬಕ್ಕೆ ತುಂಬಾನೆ ಹತ್ತಿರದವರಾದ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶ ಪಾಂಡೆ ಹಾಗೂ ಪತ್ನಿ ಯಶಸ್ವಿನಿ ದೇಶಪಾಂಡೆ ಕೂಡ ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಇದಲ್ಲದೇ ನಟಿ ಮೇಘನಾ ರಾಜ್ ತಮ್ಮ ಮಗ ರಾಯನ್ ಸರ್ಜಾ ಹಾಗೂ ತಾಯಿ ಪ್ರಮೀಳಾ ಜೋಷಾಯಿ, ಕೂಡ ಆಗಮಿಸಿ ಶ್ರುತಿ ಕೃಷ್ಣ ಗೃಹಪ್ರವೇಶ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಇಷ್ಟೇ ಅಲ್ಲ ನಟಿ ಸೋನಲ್ ಮೊಂಥೆರೋ ಸಹ ತಮ್ಮ ಪತಿ ಜೊತೆ ಆಗಮಿಸಿ, ಮೇಘನಾ ರಾಜ್ ಹಾಗೂ ಇತರರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಅಲ್ಲದೇ ಗೌರಿ ಶ್ರುತಿ, ಅಮೃತಾ ಪ್ರೇಮ್ (Amrutha Prem), ಕೀರ್ತಿ ಕೃಷ್ಣ ಜೊತೆಯಾಗಿ ಫೋಟೊ ಕ್ಲಿಕ್ ಮಾಡಿದ್ದಾರೆ.
ನಟಿ ಮೇಘನಾ ರಾಜ್ ಕೂಡ ಆಗಮಿಸಿ ಶ್ರುತಿ ಕೃಷ್ಣ ಹಾಗೂ ಗೌರಿ ಜೊತೆ ಫೋಟೊ ತೆಗೆಸಿಕೊಂಡಿದ್ದು, ಕ್ಯಾಂಡಿಡ್ ಫೊಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ನಟಿ ಶ್ರುತಿಯವರ ಸಮಕಾಲೀನ ನಟಿಯಾದ ಮಾಲಾಶ್ರೀ ರಾಮು ಅವರು ಕೂಡ ಗೃಹಪ್ರವೇಶದ ಸಂಭ್ರಮದಲ್ಲಿ ಭಾಗಿಯಾಗಿದ್ದರು, ಜೊತೆಗೆ ಪುತ್ರಿ ಹಾಗೂ ಕಾಟೇರ ಬೆಡಗಿ ಆರಾಧನಾ ರಾಮ್ (Aradhana Ram) ಕೂಡ ಆಗಮಿಸಿ, ಕಂಗ್ರಾಜ್ಯುಲೇಶನ್ ತಿಳಿಸಿದ್ದಾರೆ.