ಲಾಕ್ ಡೌನ್ ನಡುವೆ ಸ್ಯಾಂಡಲ್ ವುಡ್ ನಟಿ ಮಯೂರಿ ಅಭಿಮಾನಿಗಳಿಗೊಂದು ಸುದ್ದಿ ಕೊಟ್ಟಿದ್ದಾರೆ. ಬಾಲ್ಯದ ಗೆಳೆಯನೊಂದಿಗೆ ಮಯೂರಿ ಜೂ. 12 ರಂದೇ ದಾಂಪತ್ಯಕ್ಕೆ ಕಾಲಿರಿಸುತ್ತಿದ್ದಾರೆ. ಸ್ಪೆಷಲ್ ಡೆ ಅಂತ ಸೀರೆಯುಟ್ಟು ಫೋಟೋ ಶೇರ್ ಮಾಡಿಕೊಂಡಾಗಲೆ ನಟಿ ಮದುವೆ ಸುದ್ದಿ ಹರಿದಾಡಿತ್ತು. ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮನೆ ಮಾತಾಗಿದ್ದವರು. ಕೃಷ್ಣಲೀಲಾ ಸಿನಿಮಾ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಇಷ್ಟಕಾಮ್ಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ನಟಿಸಿದ್ದರು. ಇತ್ತೀಚೆಗೆ ಪೊಗರು ಚಿತ್ರದಲ್ಲಿ ಪಾತ್ರ ಮಾಡಿದ್ದಾರೆ.