ಕಾಡಿನ ಸುತ್ತಾಟ, ವನ್ಯಜೀವಿ ಫೆäಟೋಗ್ರಫಿಯನ್ನು ಬಹಳ ಇಷ್ಟಪಡುವ ನಟ ದರ್ಶನ್ ನಿನ್ನೆ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಅವರು ಬಂದ ಸುದ್ದಿ ಕೇಳಿದ ಕೂಡಲೇ ಅಭಿಮಾನಿಗಳೂ ಧಾವಿಸಿ ಬಂದು ಸೆಲ್ಫಿಗೆ ಮುಗಿಬಿದ್ದರು.
‘ಇದು ಕಾಡು, ಅರ್ಥಮಾಡಿಕೊಳ್ಳಿ’ ಎನ್ನುತ್ತಲೇ ಅಭಿಮಾನಿಗಳನ್ನು ಆಚೆ ಕಳಿಸಿದ ದರ್ಶನ್, ಕಾಡಿನಲ್ಲಿ ಸಫಾರಿ ಮಾಡುತ್ತಾ ಪ್ರಾಣಿ, ಪಕ್ಷಿಗಳ ಛಾಯಾಗ್ರಹಣ ಮಾಡಿದರು.
ಆ ವೇಳೆ ಹುಲಿಯೊಂದು ದಾರಿ ಮಧ್ಯೆ ಕಾಣಿಸಿಕೊಂಡಿತು.
ದರ್ಶನ್ ಹುಲಿಯ ಫೋಟೋಗ್ರಫಿ ಮಾಡುತ್ತಿರುವ ಚಿತ್ರವನ್ನು ಅವರ ಟೀಮ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.
ಇಂದೂ ದರ್ಶನ್ ನಾಗರಹೊಳೆಯಲ್ಲಿದ್ದು ವನ್ಯಜಗತ್ತಿನ ದರ್ಶನ ಪಡೆಯಲಿದ್ದಾರೆ.