ಬೆಂಗಳೂರು(ಜು. 20) ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ ಆಗಿದೆ. ರಾಕಿಂಗ್ ಸ್ಟಾರ್ ಯಶ್ ತಂಗಿ ನಂದಿನಿ ತಾಯಿ ಆದ ಸಂಭ್ರಮ ಹಂಚಿಕೊಂಡಿದ್ದಾರೆ. ಚಿರಾಗ್ ಎಂಬ ಮಗನಿದ್ದು ಈಗ ಮತ್ತೊಂದು ಗಂಡು ಮಗುವಿಗೆ ನಂದಿನಿ ಜನ್ಮನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸಹ ಒಂದೇ ವರ್ಷದಲ್ಲಿ ಎರಡು ಸಾರಿ ತಂದೆಯಾಗಿದ್ದರು. ಶೋವೊಂದರಲ್ಲಿ ಅಣ್ಣನ ಕೊಂಡಾಡಿದ್ದ ನಂದಿನಿ ನನ್ನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದ ಎಂದು ಹೇಳಿದ್ದರು. ನಂದಿನಿ ಮದುವೆಯಾಗಿ 8 ವರ್ಷಗಳು ಸಂದಿವೆ. ಯಶ್ ಮತ್ತು ನಂದಿನಿ ರಕ್ಷಾ ಬಂಧನ ಆಚರಣೆ ಮಾಡುವುದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಯಶ್ ಕುಟುಂಬಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. Sandalwood Rocking Star Yash Sister Blessed with Baby Boy second time ಗಂಡು ಮಗುವಿಗೆ ಜನ್ಮ ನೀಡಿದ ಯರ್ಶ ಸಹೋದರಿ ನಂದಿನಿ