ದರ್ಶನ್ ನಾಯಕಿ, ಡೆವಿಲ್ ಬ್ಯೂಟಿ ರಚನಾ ರೈ ಸಖತ್ ಸುಂದರಿ

Published : Feb 27, 2025, 11:05 AM ISTUpdated : Feb 27, 2025, 11:24 AM IST

ಡೆವಿಲ್ ಸಿನಿಮಾದಲ್ಲಿ ದರ್ಶನ್ ತೂಗುದೀಪ್ ಗೆ ನಾಯಕಿಯಾಗಿ ನಟಿಸಲಿರುವ ಮಂಗಳೂರು ಬೆಡಗಿ ರಚನಾ ರೈ ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದು, ಸಖತ್ ಮುದ್ದಾಗಿ ಕಾಣಿಸುತ್ತಿದ್ದಾರೆ.   

PREV
17
ದರ್ಶನ್ ನಾಯಕಿ, ಡೆವಿಲ್ ಬ್ಯೂಟಿ ರಚನಾ ರೈ ಸಖತ್ ಸುಂದರಿ

ಸ್ಯಾಂಡಲ್ ವುಡ್ ನಟ ದರ್ಶನ್ ತೂಗುದೀಪ (Darshan Thugudeepa ) ಅಭಿನಯಿಸಲಿರುವ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ದಿ ಹೀರೋ ಶುರುವಾಗಿ ವರ್ಷಗಳು ಕಳೆದಿದ್ದರೂ, ಅದರ ಮಧ್ಯೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದು, ಸಿನಿಮಾ ಶೂಟಿಂಗ್ ಶುರುವಾಗೋದೇ ತಡವಾಗಿತ್ತು. 
 

27

ಡೆವಿಲ್ ಸಿನಿಮಾಗೆ ನಾಯಕಿಯಾಗಿ ಮಂಗಳೂರು ಬ್ಯೂಟಿ ರಚನಾ ರೈ (Rachana Rai) ಆಯ್ಕೆಯಾಗಿದ್ದರು. ಇನ್ನೇನು ಸ್ಟಾರ್ ನಟನ ಸಿನಿಮಾದಲ್ಲಿ ನಾಯಕಿಯಾಗಿ ರಚನಾ ಮಿಂಚಲಿದ್ದಾರೆ ಎನ್ನುವಷ್ಟರಲ್ಲಿ ಆರಂಭದಲ್ಲಿ ದರ್ಶನ್ ಕೈಗೆ ಪೆಟ್ಟು ಮಾಡಿಕೊಂಡಿದ್ದರಿಂದ ಸಿನಿಮಾ ಮುಂದೆ ಹೋಗಿತ್ತು., ಬಳಿಕ ದರ್ಶನ್ ಕೊಲೆ ವಿಚಾರದಲ್ಲಿ ಜೈಲು ಸೇರಿ ಸಿನಿಮಾ ಮತ್ತಷ್ಟು ತಡವಾಯಿತು. 
 

37

ಹಾಗಾಗಿ ರಚನಾ ರೈ ಸಿನಿಮಾ ಕರಿಯರ್ ಸ್ವಲ್ಪ ಡೇಂಜರ್ ಝೋನ್ ನಲ್ಲೇ ಇತ್ತು ಎನ್ನುವಂತಿತ್ತು. ಒಂದು ಕಡೆ ಸಿನಿಮಾ ಆರಂಭವಾಗಿ ವರ್ಷಗಳು ಕಳೆದರೂ ಶೂಟಿಂಗ್ ನಡೆದಿಲ್ಲ, ಮತ್ತೊಂದು ಕಡೆ ಒಂದೊಂದು ತಡೆಯಿಂದಾಗಿ ರಚನಾ ನಟಿಸಲಿರುವ ಡೆವಿಲ್ ಸಿನಿಮಾ ಬಿಡುಗಡೆಯಾಗುವುದೇ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. 
 

47

ಇದೀಗ ಎಲ್ಲವೂ ಸರಿಯಾಗಿದ್ದು, ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಕೂಡ ಆರಂಭವಾಗಲಿದೆ. ಈ ನಡುವೆ ರಚನಾ ರೈ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳು ಸಖತ್ ಸೌಂಡ್ ಮಾಡುತ್ತಿವೆ. ಕೇಸರಿ ಬಣ್ಣದ ಸೀರೆಯಲ್ಲಿ ರಚನಾ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

57

ಕೇಸರಿ ಬಣ್ಣದ ಮೈಸೂರು ಸಿಲ್ಕ್ ಸೀರೆ, ಕೆಂಪು ಬಣ್ಣದ ಬ್ಲೌಸ್, ಕುತ್ತಿಗೆಯಲ್ಲಿ ಆಂಟಿಕ್ ಹೆವಿ ಜ್ಯುವೆಲರಿ, ಕಿವಿಯಲ್ಲಿ ಜುಮುಕಿ, ಮುಂದಾಲೆ, ಕೈಬಳೆ ಧರಿಸಿ ಅಪ್ಪಟ ದೇವತೆಯಂತೆ ಕಾಣಿಸುತ್ತಿದ್ದಾರೆ ರಚನಾ. ರಚನಾ ನೋಡಿ, ನಿಮಗೆ ಚಂದನವನದಲ್ಲಿ ಉಜ್ವಲ ಭವಿಷ್ಯ ಇದೆ ಎಂದಿದ್ದಾರೆ ಫ್ಯಾನ್ಸ್, ಜೊತೆಗೆ ಡೆವಿಲ್ ಬ್ಯೂಟಿ ಅಂತಾನೂ ಕಾಮೆಂಟ್ ಮಾಡಿದ್ದಾರೆ. 
 

67

ಇನ್ನು ಡೆವಿಲ್ ರಚನಾ ರೈ ಮೊದಲ ಸಿನಿಮಾದ ಅಂದ್ರೆ ಖಂಡಿತಾ ಅಲ್ಲ, ಈಗಾಗಲೇ ವಾಮನ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅದುವೇ ನಟಿಯ ಮೊದಲ ಕನ್ನಡ ಸಿನಿಮಾ. ಅಷ್ಟೇ ಅಲ್ಲ ಶ್ರೀರಂಗ ಹಾಗೂ ಭುವನಂ ಗಗನಂ ಸಿನಿಮಾದಲ್ಲೂ ರಚನಾ ನಟಿಸಿದ್ದಾರೆ. 
 

77

ಇವರು ಈಗಾಗಲೇ ತುಳು ಸಿನಿಮಾಗಳಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ, ನಟಿಸಿ, ನಿರ್ದೇಶಿಸಿರುವ ಸರ್ಕಸ್ ಸಿನಿಮಾದ ನಾಯಕಿ ಇವರೇ. ಅಷ್ಟೇ ಅಲ್ಲ ಬ್ಯಾಡ್ಮಿಂಟನ್ ಪ್ಲೇಯರ್‌ ಆಗಿರುವ ಕುಡ್ಲದ ಬೆಡಗಿ ರಚನಾ, ಮಾಡೆಲ್ ಕೂಡ ಹೌದು, ಡ್ಯಾನ್ಸರ್ ಕೂಡ ಹೌದು ಹಾಗೇ ಬರಹಗಾರ್ತನೂ ಹೌದು. ಓ‌ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಬಹುಮುಖಪ್ರತಿಭೆ ಅಂದ್ರೆ ಸುಳ್ಳಲ್ಲ. 
 

click me!

Recommended Stories