ನಿಖಿಲ್-ರೇವತಿ ಮದುವೆಗೆ 1 ವರ್ಷ..! ಪತ್ನಿಗೆ ಪತಿಯ ಪ್ರೀತಿಯ ಪತ್ರ

Published : Apr 17, 2021, 06:21 PM ISTUpdated : Apr 17, 2021, 06:26 PM IST

ನಿಖಿಲ್ - ರೇವತಿ ವಿವಾಹಕ್ಕೆ ಒಂದು ವರ್ಷ | ಪತ್ನಿಗೆ ಪ್ರೀತಿಯ ಪತ್ರ ಬರೆದ ಸ್ಯಾಂಡಲ್‌ವುಡ್ ಯುವರಾಜ

PREV
110
ನಿಖಿಲ್-ರೇವತಿ ಮದುವೆಗೆ 1 ವರ್ಷ..! ಪತ್ನಿಗೆ ಪತಿಯ ಪ್ರೀತಿಯ ಪತ್ರ

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಸತಿ ಪತಿಯಾಗಿ ಒಂದು ವರ್ಷವಾಯ್ತು. ಕಳೆದ ವರ್ಷ ಇದೇ ಸಮಯಕ್ಕೆ ಕೊರೋನಾ, ಲಾಕ್‌ಡೌನ್ ಮಧ್ಯೆ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಈ ಜೋಡಿ.

210

ಈ ವಿಶೇಷ ಸಂದರ್ಭದಲ್ಲಿ ನಿಖಿಲ್ ಪತ್ನಿಗಾಗಿ ಸುಂದರವಾದ ಪತ್ರವೊಂದನ್ನು ಬರೆದಿದ್ದಾರೆ. ವಿವಾಹದ ಫೋಟೋಗಳನ್ನು ಇನ್‌ಸ್ಟಗ್ರಾಂನಲ್ಲಿ ಶೇರ್ ಮಾಡಿ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.

310

ಸರಿಯಾಗಿ ಒಂದು ವರ್ಷದ ಹಿಂದೆ ಈ ದಿನ ನೀವು ನನ್ನ ಬದುಕಿಗೆ ಬಂದಿರಿ. ಅಲ್ಲಿಂದ ಇಲ್ಲಿಗೆ ನಮ್ಮ ಬದುಕಿನಲ್ಲಿ ಬಹಳಷ್ಟು ಮರೆಯಲಾಗದ ಸುಂದರ ಕ್ಷಣಗಳು ಬಂದು ಹೋಗಿವೆ. ನಾವಿಬ್ಬರೂ ನಮ್ಮಿಬ್ಬರನ್ನು ಕಂಡುಕೊಂಡಿದ್ದಕ್ಕೆ ಅದೃಷ್ಟಶಾಲಿಗಳು ಎಂದಿದ್ದಾರೆ.

410

ಬದುಕು ನೇರವಾದ ರಸ್ತೆ ಅಲ್ಲ ಎಂಬುದು ಅರಿವಾಗಿದೆ. ಅಲ್ಲಿ ಬಹಳಷ್ಟು ತಡೆಗಳಿವೆ. ನಾನು ಸರಾಗವಾಗಿ ಪ್ರಯಾಣಿಸುತ್ತಿರುವುದಕ್ಕೆ ನೀವೇ ಕಾರಣ ಎಂದಿದ್ದಾರೆ.

510

ಹೆಣ್ಣಾಗಿ ಹುಟ್ಟುವುದು ಸುಲಭವಲ್ಲ. ನಾವು ನಮ್ಮ ಗುರಿಗಳನ್ನು ತಲುಪುತ್ತೇವೆ, ಸಾಧಿಸುತ್ತೇವೆ ಮತ್ತು ಕುಟುಂಬವನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ನೀವು ಮಾಡುವ ತ್ಯಾಗದ ಪ್ರಮಾಣವು ಪ್ರಶಂಸನೀಯಕ್ಕಿಂತ ಹೆಚ್ಚಾಗಿದೆ ಎಂದಿದ್ದಾರೆ.

610

ನಾನು ಎಲ್ಲ ಮಹಿಳೆಯರಿಗೆ ದೊಡ್ಡ ಚಪ್ಪಾಳೆಯನ್ನು ನೀಡಲು ಬಯಸುತ್ತೇನೆ. ನಮ್ಮನ್ನು ಆಶೀರ್ವದಿಸಿದ ಮತ್ತು ನಮ್ಮನ್ನು ಇಷ್ಟಪಟ್ಟ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ ನಿಖಿಲ್

710

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ವರ್ಷ. ಎಂದಿಗೂ ಮರೆಯಲಾಗದ ದಿವಸ ಎಂದಿದ್ದಾರೆ ನಟ

810

ನಮ್ಮನ್ನು ಆಶೀರ್ವದಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಹಾರೈಕೆಗಳು ಸದಾ ಹೀಗೆ ಇರಲಿ ಎಂದಿದ್ದಾರೆ

910

ಒಟ್ಟಾಗಿ ಕುಳಿತು ಧ್ಯಾನ ಮಾಡುತ್ತಿರುವ ಜೋಡಿ

ಒಟ್ಟಾಗಿ ಕುಳಿತು ಧ್ಯಾನ ಮಾಡುತ್ತಿರುವ ಜೋಡಿ

1010

ಸಿಂಪಲ್ ಆಗಿರೋ ಸ್ಯಾಂಡಲ್‌ವುಡ್ ಕಪಲ್ ತೋರಿಕೆಗಿಂತ ಚಿಕ್ಕಪುಟ್ಟ ವಿಚಾರಗಳಲ್ಲೇ ಖುಷಿ ಕಾಣುತ್ತಾ ಖುಷಿಯಾಗಿದ್ದಾರೆ

click me!

Recommended Stories