ವಿದ್ಯಾಪತಿಗೆ ಜೋಡಿಯಾದ ಹಿಟ್ಲರ್ ಕಲ್ಯಾಣ ಸುಂದರಿ: ಮಲೈಕಾ ವಸುಪಾಲ್‌ ಪಾತ್ರದ ಫಸ್ಟ್‌ಲುಕ್‌ ರಿಲೀಸ್

Published : Feb 13, 2025, 04:36 PM ISTUpdated : Feb 13, 2025, 04:38 PM IST

‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿರುವ ಇವರು ‘ವಿದ್ಯಾಪತಿ’ ಸಿನಿಮಾದಲ್ಲಿ ವಿದ್ಯಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

PREV
16
ವಿದ್ಯಾಪತಿಗೆ ಜೋಡಿಯಾದ ಹಿಟ್ಲರ್ ಕಲ್ಯಾಣ ಸುಂದರಿ: ಮಲೈಕಾ ವಸುಪಾಲ್‌ ಪಾತ್ರದ ಫಸ್ಟ್‌ಲುಕ್‌ ರಿಲೀಸ್

‘ಉಪಾಧ್ಯಕ್ಷ’ ಖ್ಯಾತಿಯ ನಟಿ ಮಲೈಕಾ ವಸುಪಾಲ್‌ ‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ವಿದ್ಯಾ ಪಾತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಬರ್ತ್‌ ಡೇ ಪ್ರಯುಕ್ತ ಅವರ ಪಾತ್ರದ ಫಸ್ಟ್‌ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

26

‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿರುವ ಇವರು ‘ವಿದ್ಯಾಪತಿ’ ಸಿನಿಮಾದಲ್ಲಿ ವಿದ್ಯಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

36

ನಾಗಭೂಷಣ್ ನಾಯಕನಾಗಿರುವ ಈ ಆ್ಯಕ್ಷನ್, ಕಾಮಿಡಿ ಸಿನಿಮಾವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ ನಿರ್ಮಿಸಿರುವ ಈ ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.

46

ಕಲ್ಟ್‌ ಸಿನಿಮಾದಲ್ಲಿ ಮಲೈಕಾ ವಸುಪಾಲ್‌: ‘ಉಪಾಧ್ಯಕ್ಷ’ ಸಿನಿಮಾದ ನಾಯಕಿ ಮಲೈಕಾ ವಸುಪಾಲ್‌ ಇದೀಗ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಟೀಮ್‌ ಸೇರಿಕೊಂಡಿದ್ದಾರೆ. ಅನಿಲ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ಎರಡು ಶೇಡ್‌ ಇರುವ ಪಾತ್ರದಲ್ಲಿ ಮಲೈಕಾ ನಟಿಸಿದ್ದಾರೆ.

56

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲೈಕಾ, ‘ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್‌ ಇದೆ. ಅದರಲ್ಲಿ ಒಂದು ಸಾಂಪ್ರದಾಯಿಕ ಲುಕ್‌. ಅದಕ್ಕಾಗಿ ಭರತನಾಟ್ಯ, ಕಥಕ್‌ ನೃತ್ಯಗಳ ಎಕ್ಸ್‌ಪ್ರೆಶನ್‌ಗಳನ್ನು ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. 

66

ಉಳಿದಂತೆ ನನ್ನ ಫಿಟ್‌ನೆಸ್‌ ಚೆನ್ನಾಗಿಯೇ ಇರುವ ಕಾರಣ ತೂಕ ಕಡಿಮೆ ಅಥವಾ ಹೆಚ್ಚು ಮಾಡುವ ಅವಶ್ಯಕತೆ ಇಲ್ಲ ಎಂದು ನಿರ್ದೇಶಕರೇ ಹೇಳಿದ್ದಾರೆ. ಅನಿಲ್‌ ಸರ್‌ ನಿರ್ದೇಶನದ ಉಪಾಧ್ಯಕ್ಷ ಸಿನಿಮಾದಲ್ಲಿ ನಾನು ನಟಿಸಿರುವ ಕಾರಣ ಅವರಿಗೆ ನನ್ನ ನಟನೆಯ ಶಕ್ತಿಯ ಬಗ್ಗೆ ಗೊತ್ತಿತ್ತು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories