ಶಿವರಾಜ್ ಕುಮಾರ್, ಶ್ರೀಮುರಳಿ ಜೊತೆ ಡುಯೆಟ್ ಹಾಡಿದ್ದ ಚೆಲುವೆ ಶ್ರೀದೇವಿ ಈವಾಗೆಲ್ಲಿದ್ದಾರೆ?

First Published | Dec 14, 2023, 4:25 PM IST

ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಜೊತೆ ಡುಯೆಟ್ ಹಾಡಿದ ಸುಂದರಿ ಶ್ರೀದೇವಿ ನೆನಪಿದ್ಯಾ ನಿಮಗೆ? ಆ ತಮಿಳಿನ ಚೆಲುವೆ ಈವಾಗ ಏನು ಮಾಡ್ತಿದ್ದಾರೆ? ಎಲ್ಲಿದ್ದಾರೆ… ಎಲ್ಲಾ ಡಿಟೇಲ್ಸ್ ಇಲ್ಲಿದೆ. 
 

ಸೂರ್ಯನ ಕಿರಣ ಚುಂಬಿಸಿ ತಾನೆ ತಾವರೆ ಅರಳಿತು… ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಕಾಂಚನ ಗಂಗಾ ಸಿನಿಮಾದಲ್ಲಿ ನಟಿಸಿದ್ದ ಸುಂದರಿ ನೆನಪಿದ್ಯಾ ನಿಮಗೆ? ಹೇಗೆ ಮರೆಯೋಕೆ ಸಾಧ್ಯ ಅಲ್ವಾ? 
 

ಅವರು ಶ್ರೀದೇವಿ ವಿಜಯ್ ಕುಮಾರ್ (Sridevi Vijaykumar), ತಮಿಳಿನ ಜನಪ್ರಿಯ ನಟಿ ಇವರು. ಕನ್ನಡದಲ್ಲಿ ನಟಿಸಿದ್ದು ಎರಡೇ ಚಿತ್ರವಾದರೂ, ತಮ್ಮ ಸೌಂದರ್ಯ ಮತ್ತು ಮುಗ್ಧ ಅಭಿನಯದಿಂದಾಗಿ ಅವರು ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. 
 

Tap to resize

ಶ್ರೀದೇವಿ ನಟಿಸಿರುವ ಕಾಂಚನಗಂಗಾ (kanchanaganga) ಚಿತ್ರದ ಸೂರ್ಯನ ಕಿರಣ ಹಾಡು, ಇಂದಿಗೂ ಸಹ ಹೆಚ್ಚಿನ ಜನರ ಫೇವರಿಟ್ ಹಾಡುಗಳಲ್ಲಿ ಒಂದಾಗಿದೆ. ಇದು ಮಾತ್ರವಲ್ಲ, ಶ್ರೀಮುರಳಿಜೊತೆ ಪ್ರೀತಿಗಾಗಿ ಚಿತ್ರದಲ್ಲಿ ಸಹ ಇವರು ನಟಿಸಿದ್ದು, ಚಿತ್ರಗಳು ಅಷ್ಟೊಂದು ಹಿಟ್ ಆಗದಿದ್ದರೂ ಈ ನಟಿ ಅಂದು ಕನ್ನಡಿಗರಿಗೆ ಇಷ್ಟವಾಗಿದ್ದರು. 
 

ಪ್ರೀತಿಗಾಗಿ ಸಿನಿಮಾದ ಕಣ್ಣಿನಲ್ಲಿ ಕನಸಿದೆ, ಮಿಡಿಯುತಿದೇ ಮಿಡಿಯುತಿದೇ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಸಿನಿಮಾದಲ್ಲಿ ಶ್ರೀದೇವಿಯವರ ಸ್ನಿಗ್ಧ ಸೌಂದರ್ಯ, ನಗು, ಕಣ್ಣುಗಳನ್ನು ನೋಡಿ ಅದೆಷ್ಟೋ ಹುಡುಗರು ಫಿದಾ ಆಗಿದ್ದರು. 
 

ಎರಡು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಬಳಿಕ ಕೊನೆಯದಾಗಿ 2016 ರಲ್ಲಿ ಲಕ್ಷ್ಮಣ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ ಶ್ರೀದೇವಿ ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 
 

ಬಾಲನಟಿಯಾಗಿ (Child artist) ಸಿನಿಮಾರಂಗಕ್ಕೆ ಕಾಲಿಟ್ಟ ಶ್ರೀದೇವಿ ನಂತರ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ಇಪ್ಪತ್ತು ಸಿನಿಮಾಗಳಲ್ಲಿ ನಟಿಸಿದ ನಟಿ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಂಡದ್ದೇ ಕಡಿಮೆ, ಸದ್ಯ ಮದುವೆಯಾಗಿ ಫ್ಯಾಮಿಲಿ ಜೊತೆ ಬ್ಯುಸಿಯಾಗಿದ್ದಾರೆ. 
 

ತಮಿಳಿನ ಖ್ಯಾತ ಹಿರಿಯ ನಟ ವಿಜಯ್ ಕುಮಾರ್ ಮಗಳಾದ ಇವರು ತೆಲುಗು ಚಿತ್ರರಂಗದಲ್ಲಿ ತುಂಬಾನೆ ಜನಪ್ರಿಯತೆ ಪಡೆದಿದ್ದರು. ನಂತರ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ರಾಹುಲ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ. 
 

ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ ಇವರು ತೆಲುಗು ಕಿರುತೆರೆಯಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಶ್ರೀದೇವಿ ತೆಲುಗಿನ ಕಾಮಿಡಿ ಸ್ಟಾರ್ಸ್, ಡ್ರಾಮಾ ಜ್ಯೂನಿಯರ್ಸ್ (Drama Juniors) ಸೇರಿ ಹಲವು ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಶ್ರೀದೇವಿ, ಹೆಚ್ಚಾಗಿ ಫೋಟೋ ಶೂಟ್ ಮಾಡಿಸುತ್ತಾ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇಂದಿಗೂ ಅದೇ ಚಾರ್ಮಿಂಗ್ ಸೌಂದರ್ಯ ಹೊಂದಿರುವ ನಟಿಯನ್ನ ನೋಡಿದ್ರೆ, ಭುಜದೆತ್ತರಕ್ಕೆ ಬೆಳೆದ ಮಗುವಿನ ತಾಯಿ ಎಂದು ಹೇಳಲು ಸಾಧ್ಯವೇ ಇಲ್ಲ. 
 

Latest Videos

click me!