ರಿಷಬ್ ಶೆಟ್ಟಿ ಕಾಂತಾರಾ 1 ಪ್ಯಾನ್ ವರ್ಲ್ಡ್ ಸಿನಿಮಾ, 30ಕ್ಕೂ ಹೆಚ್ಚು ದೇಶ 7 ಭಾಷೆಯಲ್ಲಿ ರಿಲೀಸ್

Published : Sep 10, 2025, 05:19 PM IST

ರಿಷಬ್ ಶೆಟ್ಟಿಯ ಕಾಂತಾರಾ ಚಾಪ್ಟರ್ 1 ಸಿನಿಮಾಗಾಗಿ ದೇಶವೇ ಕಾಯುತ್ತಿದೆ.  ಇದರ ನಡುವೆ ಕನ್ನಡ ಸಿನಿಮಾ ಇದೀಗ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಬಿಡುಗಡೆಯಾಗುತ್ತಿರುವ ಮಾಹಿತಿ ಹೊರಬಿದ್ದಿದೆ. ಕಾಂತಾರಾ 1 ಸಿನಿಮಾ 30ಕ್ಕೂ ಹೆಚ್ಚು ದೇಶ 7 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

PREV
16

ಕನ್ನಡ ಸಿನಿಮಾ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿರುವ ನಡುವೆ ಕಾಂತಾರದ ಕುತೂಹಲ ಹೆಚ್ಚಾಗುತ್ತಿದೆ. ಕಾಂತಾರ ಸಿನಿಮಾಗೆ ದೇಶಾದ್ಯಂತ ಭರ್ಜರಿ ಸ್ಪಂದನೆ ಸಿಕ್ಕಿತ್ತು. ಕನ್ನಡದಲ್ಲಿ ಬಿಡುಗಡೆಯಾಗಿ ಬಳಿಕ ಹಲವು ಭಾಷೆಗಳಿಗೆ ಕಾಂತಾರ ಸಿನಿಮಾ ವಿತರಣೆಯಾಗಿತ್ತು. ಆದರೆ ಕಾಂತಾರ 1 ಸಿನಿಮಾ ಬರೋಬ್ಬರಿ 7 ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಬಿಗ್ ಬಜೆಟ್ ಸಿನಿಮಾ ಇದಾಗಿದೆ. ಇಷ್ಟೇ ಅಲ್ಲ ಬರೋಬ್ಬರಿ 30ಕ್ಕೂ ಹೆಚ್ಚು ದೇಶದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಚಿತ್ರ ತಂಡ ಹೇಳಿದೆ.

26

ಕಾಂತಾರಾ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸಿನಿಮಾ. ಭಾರತ, ದುಬೈ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದೆ. ಇಂಗ್ಲೀಷ್ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ದೇಶಗಳ ಸಂಖ್ಯೆ ಹೆಚ್ಚಾದರೂ ಅಚ್ಚರಿಯಿಲ್ಲ.

36

ಹೊಂಬಾಳೆ ನಿರ್ಮಾಣದ ಅತೀ ಬಿಗ್ ಬಜೆಟ್ ಸಿನಿಮಾ

ಹೊಂಬಾಳೆ ಸಿನಿಮಾ ನಿರ್ಮಾಣ ಸಂಸ್ಥೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಭಾರಿ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡಿದೆ. ಕೆಜಿಎಫ್ ಸೇರಿದಂತೆ ಅತೀ ದುಬಾರಿ ಬಜೆಟ್ ಸಿನಿಮಾ ನಿರ್ಮಾಣ ಮಾಡಿದೆ. ವಿಶೇಷ ಅಂದರೆ ಕಾಂತಾರಾ ಚಾಪ್ಟರ್ 1 ಸಿನಿಮಾ ಹೊಂಬಾಳೆ ನಿರ್ಮಾಣದ ಅತೀ ದೊಡ್ಡ ಬಜೆಟ್ ಸಿನಿಮಾ ಅನ್ನೋ ಮಾತುಗಳು ಕೇಳಿಬಂದಿದೆ.

46

ಬಿಗ್ ಬಜೆಟ್, ಬಿಗ್ ರಿಲೀಸ್

ಬಿಗ್ ಬಜೆಟ್ ಸಿನಿಮಾ ಆಗಿರುವ ಕಾರಣ ಅತೀ ದೊಡ್ಡ ಮಟ್ಟದಲ್ಲಿ ಸಿನಿಮಾ ರೀಲೀಸ್ ಮಾಡಲು ಹೊಂಬಾಳೆ ಮುಂದಾಗಿದೆ. ಹೀಗಾಗಿ 30ಕ್ಕೂ ಹೆಚ್ಚು ದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಮೂಲಕ ದೇಶ ವಿದೇಶಗಳಲ್ಲಿ ಕಾಂತಾರ 1 ಸಿನಿಮಾ ಧೂಳೆಬ್ಬಿಸಲಿದೆ.

56

7 ಭಾಷೆಗಳಲ್ಲಿ ಸಿನಿಮಾ

ಕನ್ನಡ, ಹಿಂದಿ, ತಮಿಳು, ಮಲೆಯಾಳಂ, ತೆಲುಗು, ಬೆಂಗಾಲಿ, ಇಂಗ್ಲೀಷ್ ಭಾಷೆಗಳಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿದೆ. ವಿಶೇಷ ಅಂದರೆ ಸ್ಪಾನಿಶ್ ಭಾಷೆಗೆ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಕುರಿತು ಹೊಂಬಾಳೆ ಫಿಲ್ಮ್ ಚಿಂತನೆ ನಡೆಸಿದೆ. ಹಲವು ಸಿನಿಮಾ ದಾಖಲೆ ಮುರಿಯಲು ಎಲ್ಲಾ ತಯಾರಿ ನಡೆಸಲಾಗಿದೆ. ಇತ್ತ ಅಭಿಮಾನಿಗಳ ನಿರೀಕ್ಷೆಗಳು ಹೆಚ್ಚಾಗಿದೆ.

66

ಅಕ್ಟೋಬರ್ 2ರಂದು ಕಾಂತಾರ 1 ಸಿನಿಮಾ ಬಿಡುಗಡೆ

ರಿಷಬ್ ಶೆಟ್ಟಿ ಕಾಂತಾರ ಸಿನಿಮಾ 1 ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಇನ್ನು ಕೆಲ ದಿನಗಳು ಮಾತ್ರ ಬಾಕಿ. ಈಗಾಗಲೇ ಹಲವು ಭಾಷೆಗಳ ವಿತರಕರು ಸಿನಿಮಾಗಾಗಿ ಕಾಯುತ್ತಿದ್ದಾರೆ. ಕಾಂತಾರ ಸಿನಿಮಾ ಬಿಡುಗಡೆ ಮುಂದೂಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಕಾಂತಾರ ಚಿತ್ರತಂಡ ಅಕ್ಟೋಬರ್ 2 ರಂದೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿತ್ತು.

Read more Photos on
click me!

Recommended Stories