Published : Jun 07, 2020, 04:53 PM ISTUpdated : Jun 07, 2020, 10:12 PM IST
ಕನ್ನಡ ಚಿತ್ರರಂಗ 'ವಾಯುಪುತ್ರ' ಚಿರಂಜೀವಿ ಸರ್ಜಾ(39) ಭಾನುವಾರ ಹೃದಯಘಾತದಿಂದ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಚಿರು ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಯುವ ನಾಯಕರಾಗಿ ಗುರುತಿಸಿಕೊಂಡಿದ್ದ ಚಿರಂಜೀವಿ ಸರ್ಜಾ ಸರ್ಜಾ ಫ್ಯಾಮಿಲಿಯ ಕುಡಿ. ರೋಮ್ಯಾಂಟಿಕ್ ಮತ್ತು ಆಕ್ಷನ್ ಎರಡೂ ಬಗೆಯ ಚಿತ್ರಗಳಿಗೂ ಹೇಳಿ ಮಾಡಿಸಿದ್ದ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿಯೂ ಸದಾ ಕ್ರಿಯಾಶೀಲರಾಗಿದ್ದರು. ಸರ್ಜಾ ಅಗಲಿಕೆಗೆ ಇಡೀ ಸ್ಯಾಂಡಲ್ ವುಡ್ ಸಂತಾಪ ಸೂಚಿಸಿದೆ.