2006ರಲ್ಲಿ 'ಕಲ್ಲರಳಿ ಹೂವಾಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ನಿವೇದಿತಾ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಿವೇದಿತಾ ಗಾಂಜಾ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಗಾಂಜಾ ಎಂದು ಹೆಸರಿಡಲು ಕಾರಣವೇನು ಹಾಗೂ ಅದನ್ನು ನಮ್ಮ ಆಯುರ್ವೇದದಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
'ಗಾಂಜಾ ಸೇವಿಸಿ ಯಾರೂ ಸತ್ತಿಲ್ಲ, ಅದು ನಮ್ಮ ತುಳಸಿಯಷ್ಟೇ ಪವಿತ್ರ ಗಿಡ,' ಎಂದು ನಿವೇದಿತಾ ಹೇಳಿದ್ದಾರೆ.
'ರಾಣಿ ಎಲಿಜಿಬತ್ ಪೀರಿಯಡ್ಸ್ ನೋವು, ತಲೆ ನೋವು ಹಾಗೂ ಕೋಪ ಬಂದಾಗ ಅವರ ಡಾಕ್ಟರ್ ಅವರಿಗೆ ಕೊಡುತ್ತಿದ್ದ ಔಷಧಿಯೇ ಗಾಂಜಾ,' ಎಂಬ ಸತ್ಯವನ್ನು ಶೋಧಿಸಿದ್ದಾರೆ.
'ಭಾರತದಲ್ಲಿ ಎಲ್ಲೆಲ್ಲಿ ಜೋತಿರ್ಲಿಂಗಗಳು ಇವೆಯೋ ಅಲ್ಲೆಲ್ಲಾ ಗಾಂಜಾ ಗಿಡ ಬೆಳೆಯುವುದು ಲೀಗಲ್,' ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಮೊದಲು ಬಟ್ಟೆ ತಯಾರಿಸಲು ಗಾಂಜಾ ಗಿಡ ಬಳಸಲಾಗಿತ್ತಂತೆ. ಯುಎಸ್ ಫ್ಲಾಗ್ ತಯಾರಿಸಿದ್ದೂ ಈ ಗಾಂಜಾ ಗಿಡದಿಂದಲೇ,' ಎನ್ನುವುದು ಈ ಕನ್ನಡದ ನಟಿಯ ವಾದ.
'ಗಾಂಜಾದಲ್ಲಿರುವ ಒಂದು ಕಾಂಪೋನೆಂಟ್ ತಾಯಿಯ ಎದೆ ಹಾಲಿನಲ್ಲಿಯೂ ಇದೆ,' ಎಂದು ಹೇಳಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆದರೆ ತಮ್ಮ 15 ವರ್ಷ ಸಿನಿಮಾ ಜರ್ನಿಯಲ್ಲಿ ನಿವೇದಿತಾ ಎಂದೂ ನಟ-ನಟಿಯರು ಗಾಂಜಾ ಸೇವಿಸಿರುವುದನ್ನು ನೋಡಿಯೇ ಇಲ್ಲವಂತೆ.
ನನ್ನ ಮಾತುಗಳನ್ನು ನಂಬಬೇಡಿ, ಗೂಗಲ್ ಮಾಡಿದ ನಮ್ಮ ಋಷಿ ಮುನಿಗಳು ಈ ಗಾಂಜಾ ಮಹಾತ್ಮ ತಿಳಿಸಿದ್ದಾರೆ, ಎಂದೂ ಕನ್ನಡಿಗರಿಗೆ ಕಿವಿಮಾತು ಹೇಳುತ್ತಾರೆ ಸ್ಯಾಂಡಲ್‌ವುಡ್‌ನ ಈ ನಟಿ.