ಮದುವೆ ಸಂಭ್ರಮದಲ್ಲಿ ರಮೇಶ್ ಅರವಿಂದ್‌; ಫ್ಯಾಮಿಲಿ ಪರಿಚಯ ಇಲ್ಲಿದೆ!

First Published | Dec 26, 2020, 3:09 PM IST

 ಕನ್ನಡ ಚಿತ್ರರಂಗದ ಪ್ರತಿಭಾನ್ವಿತ  ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಪುತ್ರಿ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಮೇಶ್‌ ಮುದ್ದಾದ ಕುಟುಂಬದ ಪರಿಚಯ ಇಲ್ಲಿದೆ...

ನಟ, ನಿರೂಪಕ, ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಮೇಶ್ ಅರವಿಂದ್.
ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗಿರುವ ರಮೇಶ್‌ಗೆ ಬಹು ಮುಖ್ಯ ಬೆನ್ನೆಲುಬಾಗಿ ನಿಂತದ್ದು ಸಂಗಾತಿ ಅರ್ಚನಾ ಹಾಗೂ ಪೋಷಕರು.
Tap to resize

ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ಅರ್ಚನಾರನ್ನು ಭೇಟಿ ಮಾಡಿದ ಕಾರಣ ಪ್ರೀತಿ ಮೇಲೆ ಸಿನಿಮಾ ಪ್ರಭಾವ ಇಲ್ಲ ಎಂದಿದ್ದಾರೆ.
ಈ ರೊಮ್ಯಾಂಟಿಕ್ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
ಪುತ್ರಿ ನಿಹಾರಿಕಾ, ಪುತ್ರ ಅರ್ಜುನ್.
ರಮೇಶ್‌ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ತಯಾರಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅರಿಶಿಣ ಶಾಸ್ತ್ರ ಕಾರ್ಯಕ್ರಮದಲ್ಲಿ ನಿಹಾರಿಕಾ ಹಳದಿ ಸೀರೆ ತೊಟ್ಟು ಕಂಗೊಳ್ಳಿಸುತ್ತಿದ್ದಾರೆ.
ಡಿಸೆಂಬರ್ 28ರ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಪುತ್ರಿ ನಿಹಾರಿಕಾ ಹಾಗೂ ಅಕ್ಷಯ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Latest Videos

click me!