ಯುದ್ದಕಾಂಡ ಚಿತ್ರದ ಯಶಸ್ಸಿನ ನಂತರ ನಟ ಅಜಯ್ ರಾವ್ ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಇದೀಗ ಮತ್ತೊಂದು ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಮೂಲಕ ಅವರು ಸಿನಿ ರಸಿಕರ ಮುಂದೆ ಬರುತ್ತಿದ್ದಾರೆ.
26
ಇದುವರೆಗೂ ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದ ಅಜಯ್ ರಾವ್, ಇದೀಗ ವಿಭಿನ್ನವಾದ ರಗಡ್ ಗೆಟಪ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದಾರೆ.
36
ಈ ಚಿತ್ರದಲ್ಲಿ ಬೋಳು ತಲೆಯ ವಿಭಿನ್ನ ಗೆಟಪ್‌ನಲ್ಲಿ ಅಜಯ್ ರಾವ್ ಕಾಣಿಸಿಕೊಳ್ಳಲಿದ್ದಾರೆ. ಸಾಫ್ಟ್ ಹೀರೋ ಹೀಗೆ ಬೋಲ್ಡ್ ಆಂಡ್ ಬಾಲ್ಡ್ ಆಗಿ ಕಾಣಿಸಿಕೊಂಡಿರುವ ಗೆಟಪ್‌ನ ರಹಸ್ಯ ಸದ್ಯ ಬಿಟ್ಟುಕೊಟ್ಟಿಲ್ಲ.
ಬೋಳು ತಲೆಯಲ್ಲಿ, ಅರ್ಧ ಕೂಲಿಂಗ್ ಗ್ಲಾಸ್ ಹಾಕಿ ವಿಲನ್‌ಗಳಿಗೆ ಸಿಂಹಸ್ವಪ್ನ ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ ನನ್ ಮಗಳೇ ಹೀರೋಯಿನ್ ಖ್ಯಾತಿಯ ನಿರ್ದೇಶಕ ಎಸ್.ಕೆ ಬಾಹುಬಲಿ.
56
ಪಿಕೆ ಪ್ರೊಡಕ್ಷನ್ಸ್ ಮೂಲಕ ಕಿರಣ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು, ಸುಜ್ಞಾನ್ ಅವರು ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.
66
ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಜೂನ್ 21ರಂದು ಶನಿವಾರ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರುತ್ತಿದೆ.