ಬಾಲಸುಬ್ರಹ್ಮಣ್ಯಂ ಅವರು 1946,ಜೂನ್ 4ರಂದು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು.
undefined
ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ.ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿ ಯವರೇ ಅವರಿಗೆ ಇವರಿಗೆ ಪ್ರೇರಣೆ. ಹಾಡುವುದನ್ನು,ಹಾರ್ಮೋನಿಯಂ,ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು.ಆನಂತರ ಶಾಸ್ತ್ರೀಯ ಸಂಗೀತ ಕಲಿತು ಅನೇಕರಿಗೆ ಮಾದರಿಯಾದರು.
undefined
ಆಗೊಂದು ಯುಗ, ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರಾಗಿದ್ದಾಗ ಬಂದ ಎಸ್ ಪಿಬಿ ಅವರು ಮಾಧುರ್ಯದ ಅಲೆಯಾಗಿ ಇಂದಿಗೂ ಹರಿಯುತ್ತಿದ್ದಾರೆ.
undefined
ಎಸ್‍ಪಿಬಿ ಗಾಯಕರಾಗಿ ಸರಿಸುಮಾರು ನಲವತ್ತು ಸಾವಿರ ಹಾಡುಗಳನ್ನ ಹಾಡಿದ್ದಾರೆ ದಾಖಲೆ ಬರೆದಿರುವ ಇವರು ಕನ್ನಡ ,ತಮಿಳು, ತೆಲುಗು, ಮಲಯಾಳಂ,ಹಿಂದಿ,ತುಳು,ಕೊಂಕಣಿ,ಒರಿಯಾ,ಬೆಂಗಾಲಿ,ಮರಾಠಿ,ಪಂಜಾಬಿ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಹಾಡಿದ್ದಾರೆ. ಎಸ್‍ಪಿಬಿ ಚಿತ್ರ ಗೀತೆಗಳನ್ನೂ ಮಾತ್ರವಲ್ಲ ಸಿನಿಮಾ ಹಾಡುಗಳ ಜೊತೆ ಜೊತೆಗೆ ದೇವರ ನಾಮ,ಆಲ್ಬಂ ಹಾಡುಗಳು ,ಭಾವ ಗೀತೆ,ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗೀತೆಗಳನ್ನ ಹಾಡಿದ್ದಾರೆ.
undefined
ಶಂಕರಾಭರಣಂ,ಪಂಚಾಕ್ಷರಿ ಗವಾಯಿ,ಸಾಗರ ಸಂಗಮಂ,ಸ್ವಾತಿ ಮುತ್ಯಂ,ರುದ್ರವೀಣ,ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲದೆ ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.
undefined
ಒಮ್ಮೆ ಬಾಲು ಅವರು ತಮಿಳು,ತೆಲುಗು ಭಾಷೆಯಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಹಾಡಿದ್ದರು,ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಹಾಡಿದ್ದರೆ,ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು.ಇದು ಎಸ್ ಪಿ ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆಗಿದ್ದ ಸಾಕ್ಷಿ.
undefined
ಬಹುತೇಕ ನಟರಿಗೆ ಧ್ವನಿಯಾಗಿದ್ದ ಎಸ್ಪಿಬಿ ಅವರಿಗೆ ಕರುನಾಡಿನ ಕಾಲಪರ್ವತ ಡಾ. ರಾಜ್ ಕುಮಾರ್ ಅವರು ಧ್ವನಿಯಾಗಿದ್ದರು ಎನ್ನುವುದು ಮತ್ತೊಂದು ವಿಶೇಷ.
undefined
ನಕ್ಕರೆ ಅದೇ ಸ್ವರ್ಗ ಎಂಬ ಹಾಸ್ಯಪ್ರಧಾನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಾಡುಗಾರನಾಗಿ ಪರಿಚಿತರಾದವರು ಬಾಲಸುಬ್ರಮಣ್ಯಂ ಅವರು.ವಿಶೇಷವೆಂದರೆ ಆಗ ಅವರಿಗೆ ಕನ್ನಡ ಬಗ್ಗೆ ಎಳ್ಳಷ್ಟೂ ಮಾಹಿತಿಯಿರಲಿಲ್ಲ.ಆ ಸಿನಿಮಾದ ಸಂಗೀತ ನಿರ್ದೇಶಕರಾದ ರಂಗರಾಯರು ನಾವು ಹೇಳಿಕೊಡ್ತೇವೆ ಅಂತ ಧೈರ್ಯ ತುಂಬಿದ್ದರಿಂದ ಈಗಲೂ ಎಸ್ಪಿಬಿ ಅವರ ದನಿಯಲ್ಲಿ ಹಾಡುಗಳನ್ನು ಕೇಳುವ ಸೌಭಾಗ್ಯ ಕನ್ನಡಿಗರದ್ದಾಗಿದೆ.
undefined
ಕನ್ನಡದ ಎಲ್ಲಾ ಗಾಯಕರಿಗೆ, ಸಂಗೀತ ನಿರ್ದೇಶಕರಿಗೆ ಹಂಸಲೇಖ ಮಾನಸ ಗುರುಗಳಾದ್ರೆ ನಾದಬ್ರಹ್ಮ ಹಂಸಲೇಖ ಅವರಿಗೆ ಮಾತ್ರ ಎಸ್ ಪಿ ಬಾಲಸುಬ್ರಮಣ್ಯಂ ಅವರು ಸತ್ಯಪೀಠ ದರ್ಶಿತರು ಇದನ್ನು ಖುದ್ದು ಹಂಸಲೇಖ ಅವರೇ ಅನೇಕ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ.
undefined
ಎಸ್ಪಿಬಿ ಅವರು ಗಾಯಕ, ನಟ , ಸಂಗೀತ ನಿರ್ದೇಶಕ ಅಷ್ಟೇ ಅಲ್ಲ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.ತೆಲುಗಿನಲ್ಲಿ ಸ್ವರಾಭಿಷೇಕಂ ಮತ್ತು ಕನ್ನಡದಲ್ಲಿ ಎದೆತುಂಬಿ ಹಾಡುವೆನು ಎಂಬ ಎರಡೂ ಅದ್ಭುತ ಕಾರ್ಯಕಮಗಳನ್ನು ಸಂಗೀತ ಪ್ರಿಯರಿಗೆ ನೀಡಿದವರು. ಇವರನ್ನು ಪಡೆದ ನಾವೇ ಧನ್ಯ ಎಂದು ಹೇಳುವ ಲಕ್ಷಾಂತರ ಕೇಳುಗರ ವತಿಯಿಂದ ಈ ಕಲಾಶಿಖರಕ್ಕೆ ಹುಟ್ಟು ಹಬ್ಬದ ಶುಭಾಶಯಗಳು. ಹೀಗೆ ಇನ್ನಷ್ಟು ಕಾಲ ತಮ್ಮ ಸುಮಧುರ ಕಂಠದಿಂದ ನಮ್ಮೆಲ್ಲರನ್ನು ರಂಜಿಸಲಿ ಎನ್ನುವುದೇ ಆಶಯ.
undefined