'The Devil'​ ನಾಯಕಿ ರಚನಾ ರೈ ಕನಸಿನ ಹುಡುಗ ಹೀಗಿರ್ಬೇಕಂತೆ! ಇದ್ಯಾಕೋ ನಂಬಲು ಆಗ್ತಿಲ್ಲ ಎನ್ನೋದಾ ನೆಟ್ಟಿಗರು?

Published : Oct 31, 2025, 07:24 PM IST

'ಡೆವಿಲ್' ಚಿತ್ರದ ನಾಯಕಿ ರಚನಾ ರೈ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮಗೆ ರೂಪ, ಆಸ್ತಿಗಿಂತ ಹೃದಯದಿಂದ ಒಳ್ಳೆಯವನಾಗಿರುವ, ಪ್ರಕೃತಿ ಪ್ರೇಮಿ ಹುಡುಗ ಬೇಕು ಎಂದು ತಮ್ಮ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಪಯಣದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

PREV
16
ಡೆವಿಲ್​ ರಚನಾ

ನಟ ದರ್ಶನ್​ ಮತ್ತು ನಟಿ ರಚನಾ ರೈ ಅಭಿನಯದ ಡೆವಿಲ್ ಚಿತ್ರದ (Devil Movie) ಬಿಡುಗಡೆಯಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಾಗಲೇ ಇದರ ಪ್ರಚಾರ ಕೂಡ ಶುರುವಾಗಿದೆ. ಇದಾಗಲೇ ರಚನಾ ಅವರು ಈ ವಿಷಯದ ಬಗ್ಗೆ ಹಲವು ಅನುಭವಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಚಿತ್ರ ನೋಡಿದವರಿಗೆ ಸಿಕ್ಕಾಪಟ್ಟೆಅಚ್ಚರಿ ಇದೆ. ಇದೊಂದು ರೀತಿಯಲ್ಲಿ ಔಟ್ ಆಫ್‌ ದಿ ಬಾಕ್ಸ್ ಚಿತ್ರವಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

26
ಬಣ್ಣದ ಲೋಕದ ಹಿನ್ನೆಲೆ

ಇದರ ನಡುವೆಯೇ, ರಚನಾ ರೈ ಅವರು ತಮ್ಮ ವೈಯಕ್ತಿಕ ಜೀವನ ಬಗ್ಗೆಯೂ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅಂದಹಾಗೆ ರಚನಾ ಅವರು, ಮೂಲತಃ ಮಂಗಳೂರಿನ ಪುತ್ತೂರಿನವರು. ಇವರು ರೂಪೇಶ್ ಶೆಟ್ಟಿ ನಟನೆಯ ಸರ್ಕಸ್ ಎಂಬ ತುಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ನಂತರ ಧನ್ವೀರ್ ಗೌಡ ಅಭಿನಯದ 'ವಾಮನ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇದೀಗ ದರ್ಶನ್ ನಟನೆಯ 'ಡೆವಿಲ್' ಸಿನಿಮಾಗೆ ನಾಯಕಿಯಾಗಿದ್ದಾರೆ.

36
ಕನಸಿನ ಹುಡುಗ...

ಇದೀಗ ಬಾಸ್​ ಟಿವಿಗೆ ಕೊಟ್ಟಿರೋ ಸಂದರ್ಶನದಲ್ಲಿ ರಚನಾ ಅವರು, ತಮ್ಮ ಕನಸಿನ ಹುಡುಗ ಹೇಗಿರಬೇಕು ಎನ್ನುವ ಮಾತನಾಡಿದ್ದಾರೆ. ನನಗೆ ರೂಪ, ಫೇಮ್​, ಐಷಾರಾಮಿ ಬದುಕು, ಆಸ್ತಿ ಯಾವುದೂ ಬೇಡ. ಹೃದಯದಿಂದ ಒಳ್ಳೆಯ ಹುಡುಗನಾಗಿದ್ದರೆ ಸಾಕು ಎಂದಿದ್ದಾರೆ.

46
ಇಷ್ಟಿದ್ದರೆ ಸಾಕು

ನನಗೆ ಪ್ರಾಣಿ, ಪಕ್ಷಿ, ಗಿಡ ಮರ, ನೇಚರ್​, ಭಯ, ಭಕ್ತಿ ಇದರ ಮೇಲೆ ನಂಬಿಕೆ ಇದೆ. ಅವನಿಗೆ ಅಷ್ಟು ಇದ್ದರೆ ಸಾಕು ಎಂದಿದ್ದಾರೆ. ಅವನ ಫ್ಯಾಮಿಲಿ ಜೊತೆ ಚೆನ್ನಾಗಿ ಇದ್ದುಕೊಂಡು ಒಳ್ಳೆಯ ಮನೆಮಗ ಆಗಿರಬೇಕು ಅಷ್ಟೇ ಎಂದಿದ್ದಾರೆ. ಲವ್​ ಮ್ಯಾರೇಜ್​ ಅಥ್ವಾ ಅರೇಂಜ್ಡ್​​ ಯಾವುದಾದರೂ ಓಕೆ. ಆದರೆ ಇಂಥ ಕ್ವಾಲಿಟಿ ಇದ್ದರೆ ಸಾಕು ಎಂದಿದ್ದಾರೆ. ಆದರೆ, ನೆಟ್ಟಿಗರು ನಿಜಕ್ಕೂ ಇಷ್ಟೇ ಸಾಕಾ ಎಂದು ಪ್ರಶ್ನಿಸುತ್ತಿದ್ದಾರೆ.

56
ನಟಿಯ ಕುರಿತು..

ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರೋ ರಚನಾ ಮಾಡೆಲ್ ಹಾಗೂ ಭರತನಾಟ್ಯ ಕಲಾವಿದೆಯಾಗಿದ್ದಾರೆ. ನಟನೆ, ನಾಟ್ಯದ ಜೊತೆಗೆ ಚಿತ್ರಕಲೆಯಲ್ಲೂ ಇವರಿಗೆ ಸಾಕಷ್ಟು ಆಸಕ್ತಿಯಿದೆ. ಫುಟ್‌ಬಾಲ್, ಬ್ಯಾಡ್ಮಿಂಟನ್‌ನಲ್ಲೂ ಹೆಸರು ಗಳಿಸಿದ್ದಾರೆ. ಇದರ ಜೊತೆಗೆ ಬರಹಗಾರ್ತಿಯೂ ಆಗಿರುವ ರಚನಾ, ಓ‌ ಮೈ ಡಾಗ್ ಎಂಬ ಪುಸ್ತಕ ಬರೆದಿದ್ದಾರೆ.

66
ಡೆವಿಲ್​ ಚಿತ್ರಕ್ಕೆ ಆಯ್ಕೆ

ಚಿತ್ರರಂಗಕ್ಕೆ ಬರಬೇಕು ಎನ್ನುವ ಪ್ಲಾನ್‌ ಇರಲಿಲ್ಲ. ಮಾಡೆಲಿಂಗ್‌ ಮಾಡುವಾಗ ಸಿನಿಮಾಗಳಿಗೆ ಹಾಗೆ ಸುಮ್ಮನೆ ಟ್ರೈ ಮಾಡುತ್ತಿದ್ದೆ. ಒಮ್ಮೆ ‘ದಿ ಡೆವಿಲ್‌’ ಚಿತ್ರಕ್ಕೆ ಆಡಿಷನ್‌ ಮಾಡುತ್ತಿದ್ದಾರೆ ಅಂತ ಗೊತ್ತಾಗಿ ಆಡಿಷನ್‌ ಕೊಟ್ಟೆ. ನಿರ್ದೇಶಕ ಪ್ರಕಾಶ್‌ ಅವರಿಗೆ ನನ್ನ ನಟನೆ ಇಷ್ಟ ಆಗಿ ಆಯ್ಕೆ ಮಾಡಿಕೊಂಡರು ಎಂದು ಈ ಹಿಂದೆ ನಟಿ ಡೆವಿಲ್​ ಚಿತ್ರದ ಆಯ್ಕೆಯ ಕುರಿತು ಹೇಳಿದ್ದರು.

ರಚನಾ ರೈ ಮಾತನಾಡಿರುವ ವಿಡಿಯೋಗಾಗಿ ಇದರ  ಮೇಲೆ ಕ್ಲಿಕ್​  ಮಾಡಿ

Read more Photos on
click me!

Recommended Stories