ಬೆಂಗಳೂರು(ಮಾ. 18) ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಒಳ್ಳೆ ಹುಡುಗ ಪ್ರಥಮ್ ಅವರ 'ಕರ್ನಾಟಕದ ಅಳಿಯ' ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಶೂಟಿಂಗ್ ಮಾತ್ರ ಅಲ್ಲ ಸಖತ್ತಾಗಿ ಕ್ರಿಕೆಟ್ ಆಡುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಶೂಟಿಂಗ್ ಜತೆಗೆ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುತ್ತಿರುವ ವಿಚಾರವನ್ನು ಪ್ರಥಮ್ ಹಂಚಿಕೊಂಡಿದ್ದಾರೆ. ಆರೋಗ್ಯದ ಕೊಂಚ ಸಮಸ್ಯೆ ಇದ್ದರೂ ಮೂರು ದಿನದಿಂದ ಸತತ ಕ್ರಿಕೆಟ್ ಆಡ್ತಿದ್ದಾರೆ ಎಂದು ಪ್ರಥಮ್ ತಿಳಿಸಿದ್ದಾರೆ. ರಾಘಣ್ಣನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡಿರುವ ಪವರ್ ಸ್ಟಾರ್ ಮೇಲಿಂದ ಮೇಲೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ದೊಡ್ಡ ಗ್ಯಾಪ್ ನಂತರ ಬಣ್ಣ ಹಚ್ಚಿದ್ದರು. ಒಳ್ಳೆ ಹುಡ್ಗ ಪ್ರಥಮ್ ಅಭಿನಯದ ಕರ್ನಾಟಕದ ಅಳಿಯ ಚಿತ್ರದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿಕೊಂಡಿದೆ. ಬಿಗ್ ಬಾಸ್ ಮೂಲಕ ವೇದಿಕೆ ಕಲ್ಪಿಸಿಕೊಂಡ ಪ್ರಥಮ್ ಹೊಸ ಸಾಹಸ ಮಾಡಿದ್ದಾರೆ. Bigg Boss Pratham Karnatakada aliya Shooting and raghavendra rajkumar plays cricket ಕರ್ನಾಟಕದ ಅಳಿಯ ಸೆಟ್ ನಲ್ಲಿ ಬ್ಯಾಟ್ ಬೀಸಿದ ರಾಘವೇಂದ್ರ ರಾಝ್ಕುಮಾರ್