1970ರ ಜನಿಸಿರುವ ನಟಿ ರಮ್ಯಾ ಕೃಷ್ಣ ಸುಮಾರು 260ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅವರ ಕಾಲ್ ಶೀಟ್ ಫುಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ಹೊಸ ಹೇರ್ ಕಟ್ ಮತ್ತು ಹೇರ್ ಕಲರ್ ಮಾಡಿಸಿಕೊಂಡಿದ್ದಾರೆ. ಫೋಟೋ ವಿಡಿಯೋ ವೈರಲ್ ಅಗುತ್ತಿದೆ.
ಅನ್ಲಾನ್ ಹೆಸರಿನಲ್ಲಿರುವ ಸಲೂನ್ ಈ ವಿಡಿಯೋ ಶೇರ್ ಮಾಡಿಕೊಂಡಿದ್ದರು ರಮ್ಯಾ ಕೃಷ್ಣ ಕೂಲಿಗೆ ಬ್ರೌನ್ ಬಣ್ಣದ ಶೇಡ್ ಹಾಕಿಸಿದ್ದಾರೆ.
ಸಖತ್ ಶಾರ್ಟ್ ಹೇರ್ ಆದ್ರೂ ಕೂಲ್ ಆಗಿದ್ದೀರಿ ಅಲ್ಲದೆ ಈ ವಯಸ್ಸಿನಲ್ಲೂ ನಿಮ್ಮ ಮೇಲೆ ನಮಗೆ ಲವ್ ಅಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮದ್ರಾಸಿ ಕುಟುಂಬಕ್ಕೆ ಸೇರಿರುವ ರಮ್ಯಾ ಕೃಷ್ಣ ಕನ್ನಡ, ತೆಲುಗು,ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ಬಾಹುಬಲಿ ಸಿನಿಮಾ ನಂತರ ರಮ್ಯಾ ಕೃಷ್ಣ ಅವರ ಪಾಪ್ಯೂಲಾರಿಟಿ ಹೆಚ್ಚಾಗಿದೆ. ಯಾರೇ ನೋಡಿದರು ಬಾಹುಬಲಿ ನಟಿ ಎಂದು ಗುರುತಿಸುತ್ತಾರೆ.