ಪ್ರತಿ ವಾರ ಗಾಂಧಿನಗರದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತೆ, ಅವುಗಳಲ್ಲಿ ಕೆಲವು ಮಾತ್ರ ಗಟ್ಟಿಯಾಗಿ ನಿಲ್ಲುತ್ತವೆ ಅಷ್ಟೇ. ಮತ್ತೆ ಒಂದೋ ಎರಡೋ ಸಿನಿಮಾದ ಹೆಸರು ಅಲ್ಲಿ ಇಲ್ಲಿ ಕೇಳಿ ಬಂದು ಹಾಗೆಯೇ ಮರೆ ಆಗೋದೇ ಹೆಚ್ಚು. ಇನ್ನೂ ಚಿತ್ರ ಮಂದಿರದಿಂದ ಮರೆಯಾದ ಬಳಿಕವೂ ಮತ್ತೆ ರಿಲೀಸ್ ಮಾಡಲು ಪ್ರೇಕ್ಷಕರಿಂದ ಬೇಡಿಕೆ ಬರೋದಂತೂ ವಿರಳ. ಆ ಸಾಲಿಗೆ 'ದಿಯಾ' ಮತ್ತು 'ಲವ್ ಮಾಕ್‌ಟೈಲ್' ಚಿತ್ರಗಳು ಸೇರಿವೆ. ಈ ಚಿತ್ರಗಳನ್ನು ಪುನಾ ಬಿಡುಗಡೆ ಮಾಡಿ ಚಿತ್ರಮಂದಿರಗಳಲ್ಲಿಯೇ ನೋಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ನೋಡದ ತಪ್ಪಿಗಾಗಿ ಜನರು ನಿರ್ಮಾಪಕರಿಗೆ ದುಡ್ಡು ಕೊಡಲು ಮುಂದಾಗಿದ್ದಾರೆ. ಇದಕ್ಕೆ ಎರಡು ತಂಡ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದೆ.