ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ, ಲೆಕ್ಕಕ್ಕೆ ಸಿಕ್ಕಿದ್ದಿಷ್ಟು!

First Published | Jan 8, 2021, 10:15 AM IST

ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಿನಿಮಾ ವಿಚಾರವಾಗಿಯಲ್ಲದೇ, ಬೇರೆ ಯಾವ ಕಾರಣಕ್ಕೂ, ಎಲ್ಲಿಯೂ ಕಾಣಿಸಿಕೊಳ್ಳದ ರಾಧಿಕಾ ಕುಮಾರಸ್ವಾಮಿ ಎಲ್ಲಿ ವಾಸ ಮಾಡುತ್ತಾರೆ? ಅವರ ಆದಾಯ ಎಷ್ಟಿದೆ ಎಂದು ಸಾಮಾನ್ಯರ ಪ್ರಶ್ನೆಯಾಗಿತ್ತು. ಇದೀಗ ರಾಧಿಕಾ ಹೆಸರಿನಲ್ಲಿರುವ ಆಸ್ತಿಗಳ ವಿವರಗಳು ಒಂದಿಷ್ಟು ಸಿಕ್ಕಿವೆ. ಹೋದಲ್ಲಿ, ಬಂದಲ್ಲಿ ರಾಧಿಕಾ ಮನೆ ಮಾಡಿದ್ದಾರೆ ಎನಿಸುತ್ತದೆ. ಸಿಸಿಬಿ ವಿಚಾರಣೆಗೆ ಹಾಜರಾಗುತ್ತಿರುವ ರಾಧಿಕಾ ಆಸ್ತಿ ಚರ್ಚೆ ಮುನ್ನಲೆಗೆ ಬರುತ್ತಿದೆ. ಎಷ್ಟಿದೆ ಆಸ್ತಿ? 

ಮಂಗಳೂರಿನ ವಿಟ್ಲದ ಸಾಲೆತ್ತೂರು ಎಂಬಲ್ಲಿ ರಾಧಿಕಾಳ ಒಂದು ಎಕರೆ ವಿಸ್ತೀರ್ಣದಲ್ಲಿ ಮನೆ ಹಾಗೂ ತೋಟವಿದೆ.
ವಿಟ್ಲದ ಸಾಲೆತ್ತೂರು ರಾಧಿಕಾ ಹುಟ್ಟೂರು. ಇಲ್ಲಿ ಇವರ ಕುಟುಂಬ ಸುಮಾರು 3 ಕೋಟಿ ರೂ. ಬೆಲೆ ಬಾಳಾಗುವ ಆಸ್ತಿ ಹೊಂದಿದೆ.
Tap to resize

ರಾಧಿಕಾಗೆ ಮಂಗಳೂರಿನಲ್ಲಯೂ ಮನೆಯೊಂದಿದೆ. ಹೆಸರು 'ದೇವಸ್ಯ'.
ಯೆಯ್ಯಾಡಿಯಲ್ಲಿರುವ ಈ ಮನೆ ಸುಮಾರು 60-70 ಲಕ್ಷ ಬೆಲೆ ಬಾಳುತ್ತದೆ, ಗರ್ಭಿಣಿಯಾಗಿದ್ದಾಗ ಆಸ್ಪತ್ರೆ ಬಳಿಯೇ ಬೇಕೆಂದು ಈ ಮನೆ ಖರೀದಿಸಿದ್ದರು.
ಕಲ್ಲಡ್ಕದ ಅಮ್ಟೂರಿನಲ್ಲಿ ತೋಟದ ಮನೆ ಹೊಂದಿದ್ದಾರೆ.
ನಂದನವನ ಎಂಬ ಹೆಸರಿರುವ ಈ ತೋಟದ ಮನೆ ಸುಮಾರು 3 ಕೋಟಿ ಬೆಲೆ ಬಾಳುತ್ತದೆ.
ಬೆಂಗಳೂರಿನ ಸಂಜಯ್‌ ನಗರದಲ್ಲಿ ರಾಧಿಕಾ ವಾಸ ಮಾಡುವ ಬಹುಕೋಟಿ ವೆಚ್ಚದ ಮನೆ ಇದೆ. ಇದರ ಮೌಲ್ಯ ನಿಖರವಾಗಿ ತಿಳಿದಿಲ್ಲ.
ಶಮಿಕಾ ಎಂಟರ್‌ಪ್ರೈಸಸ್ ನಿರ್ಮಾಣ ಸಂಸ್ಥೆ ಹೊಂದಿರುವ ರಾಧಿಕಾ ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಲಕ್ಕಿ, ಸ್ವೀಟಿ ಹಾಗೂ ಭೈರಾದೇವಿ.
ಬೆಂಗಳೂರಿನಲ್ಲಿ ಕಾಂಪ್ಲೆಕ್ಸ್‌ ಹೊಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಂಪನಿಗಳಲ್ಲಿ ಶೇರುಗಳೂ ಇವೆ. ವಂಚಕ ಯುವರಾಜ ಸ್ವಾಮಿಯಿಂದ ಸಿನಿಮಾಕ್ಕೆಂದು 75 ಲಕ್ಷ ರೂ. ಸ್ವೀಕರಿಸಿದ್ದಾರೆ. ಇದಕ್ಕೆ ಯಾವ ಒಪ್ಪಂದವೂ ಆಗಿಲ್ಲ. 15 ಲಕ್ಷ ಯುವರಾಜ ಅವರ ಖಾತೆಯವಿಂದ ವರ್ಗಾವಣೆಯಾಗಿದೆ. ಮತ್ತೆ 60 ಲಕ್ಷ ಎಲ್ಲಿಂದ ಬಂತು ಎಂತಲೇ ಗೊತ್ತಿಲ್ಲವಂತೆ ಇವರಿಗೆ!

Latest Videos

click me!