ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಶರಣ್ಯ ಶೆಟ್ಟಿ ಮದುವೆ ಬಗ್ಗೆ ಈ ಹಿಂದೆ ತುಂಬಾನೆ ದೊಡ್ಡ ಗಾಸಿಪ್ ಹರಡಿತ್ತು. ಈ ಬಗ್ಗೆ ಮೊದಲ ಬಾರಿಗೆ ನಟಿ ಶರಣ್ಯ ಶೆಟ್ಟಿ ಏನು ಹೇಳಿದ್ದಾರೆ
ಇತ್ತೀಚಿಗೆ ಸುದ್ದಿಯಲ್ಲಿರುವ ನಟಿ ಅಂದ್ರೆ ಶರಣ್ಯ ಶೆಟ್ಟಿ (Sharanya shetty). ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಹ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆ ಕಾರಣ ಇಬ್ಬರು ಜೊತೆಯಾಗಿ ತೆಗೆದ ಫೋಟೋ.
27
ದುಬೈನಲ್ಲಿ ನಡೆದ ಸೈಮಾ 2023 ಅವಾರ್ಡ್ ಫಂಕ್ಷನ್‌ನಲ್ಲಿ, ಪ್ರಶಸ್ತಿ ಪಡೆದಿದ್ದ ರಕ್ಷಿತ್ ಶೆಟ್ಟಿ, ಇದೇ ಸಮಾರಂಭದಲ್ಲಿ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿ ಶರಣ್ಯ ಶೆಟ್ಟಿ ಜೊತೆ ಫೋಟೋ ತೆಗೆಸಿಕೊಂಡಿದ್ದರು.
ಇದೀಗ ಮೊದಲ ಬಾರಿಗೆ ಟ್ರೋಲ್ ಗೆ ಉತ್ತರ ನೀಡಿರುವ ಶರಣ್ಯ ಶೆಟ್ಟಿ, ನಿಮ್ಮ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ, ಇದಕ್ಕೆ ಏನಂತೀರಿ ಎಂದು ಕೇಳಿರೋದಕ್ಕೆ ನಟಿ ಹೌದಾ, ನಮ್ಮ ಜೋಡಿ ಚೆನ್ನಾಗಿದ್ಯಾ ಎಂದು ಪ್ರಶ್ನಿಸಿದ್ದಾರೆ.
57
ಅಲ್ಲದೇ ಏನ್ ಹೇಳೋದು ಇದ್ರ ಬಗ್ಗೆ, ಪಾಪ ರಕ್ಷಿತ್ ಶೆಟ್ಟಿಯವ್ರು ಅವರು ಯಾರ ಜೊತೆ ಫೋಟೋ ಹಾಕಿದ್ರೂ ಜನರು ಮದುವೆ ಮಾಡಿಸಿ ಬಿಡ್ತಾರೆ. ಏನು ಮಾಡಕ್ಕಾಗಲ್ಲ. ಇದರ ಬಗ್ಗೆ ಅವರು ಮಾತನಾಡಿದ್ರು ಎಂದು ಹೇಳಿ ನಕ್ಕರು.
67
ಜೊತೆಗೆ ನಮ್ಮಿಬ್ಬರ ನಡುವೆ ಏನೂ ಇಲ್ಲ. ನನಗೆ ರಕ್ಷಿತ್ ಶೆಟ್ಟಿ ಅವರ ಮೇಲೆ ಮತ್ತು ಅವರ ಕೆಲಸದ ಮೇಲೆ ಅಪಾರ ಅಭಿಮಾನ ಇದೆ ಅಷ್ಟೇ ಬೇರೇನೂ ಹೇಳೋದು ಏನು ಇಲ್ಲ ಎಂದು ಹೇಳಿ ಮಂದಹಾಸ ಬೀರಿದ್ದಾರೆ ನಟಿ.
77
ನಟ ರಕ್ಷಿತ್ ಶೆಟ್ಟಿ ಸದ್ಯ ಸಪ್ತಸಾಗರದಾಚೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರವು ಯಶಸ್ಸು ಕಂಡಿದೆ. ಇದೀಗ ಸೈಡ್ ಬಿ ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು ಶರಣ್ಯ ಶೆಟ್ಟಿ ಸಹ ಹಲವಾರು ಸಿನಿಮಾ ಮತ್ತು ಆಲ್ಬಂ ಹಾಡುಗಳಲ್ಲಿ ಬ್ಯುಸಿಯಾಗಿದ್ದಾರೆ.