ಬೆಂಗಳೂರು(ಜು. 03) ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಒಂದಿಲ್ಲೊಂದು ಮಾದರಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಶುಲ್ಕ ಭರಿಸಲು ಸಾಧ್ಯವಾಘದ ವಿದ್ಯಾರ್ಥಿಯ ನೆರವಿಗೆ ನಿಂತಿದ್ದರು. ಸಂಕಷ್ಟದಲ್ಲಿ ಇದ್ದ ಕುಟುಂಬವೊಂದರ ಮದುವೆ ನೆರವೇರಿಸಿದ್ದಾರೆ. ಮದುವೆಗೆ ಹಣ ರಿಯಾಜ್, ದಿಕ್ಕು ತೋಚದಂತಾಗಿ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೊರೆ ಹೋಗಿದ್ದರು. ಮದುವೆಯ ಖರ್ಚು ಭರಿಸಲು ಸುದೀಪ್ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸದ್ಯಸ್ಯರಿಗೆ ಸೂಚಿಸಿದ್ದಾರೆ. ಸುದೀಪ್ ಸೂಚನೆಯ ಮೇರೆಗೆ ಕುಟುಂಬಕ್ಕೆ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸದ್ಯಸರು 20 ಸಾವಿರ ರೂ. ನೀಡಿದ್ದಾರೆ. ಮನವಿ ಮಾಡಿಕೊಂಡ ಒಂದೇ ದಿನದಲ್ಲಿ ಸುದೀಪ್ ಸ್ಪಂದಿಸಿದ್ದಾರೆ. ಮದುವೆಗೆ ನೆರವು ನೀಡಿದಕ್ಕೆ ಕುಟುಂಬ ಧನ್ಯವಾದ ಸಲ್ಲಿಸಿದೆ. ಆಟೋಚಾಲಕ ರಿಯಾಜ್ ತಂಗಿ ನಸ್ರಿನ್ ಭಾವುಕರಾದ ದೃಶ್ಯ ನಿಜಕ್ಕೂ ಧನ್ಯತಾ ಭಾವ ತೆರದಿಡುತ್ತದೆ. ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಟ್ರಸ್ಟ್ ಆಹಾರ ವಿತರಿಸಿತ್ತು. lockdown affect actor kiccha sudeep helps Auto Driver Sister marriage Bengaluru ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಒಂದಿಲ್ಲೊಂದು ಮಾದರಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ.