ಕರ್ನಾಟಕ ವಿಧಾನಸಭೆ ಚುನಾವಣೆ ಇಂದು (ಮೆ 10) ನಡೆಯುತ್ತಿದೆ. ರಾಜ್ಯದ ಜನತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತ ಚಲಾಯಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಕೂಡ ಮತದಾನ ಮಾಡಿದ್ದಾರೆ. ಬೆಳಗ್ಗೆಯೇ ಮತಗಟ್ಟೆಗೆ ಬಂದ ಡಾಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಧನಂಜಯ್ ತಮ್ಮ ಹುಟ್ಟೂರಾದ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ. ಬಿಳಿ ಪಂಚೆ ಮತ್ತು ಬಿಳಿ ಶರ್ಟ್‌ನಲ್ಲಿ ಮತಗಟ್ಟೆಗೆ ಬಂದ ಧನಂಜಯ್ ತಮ್ಮ ಹಕ್ಕು ಚಲಾಯಿಸಿದ್ದಾರೆ.
ವಿಶೇಷ ಎಂದರೆ ಧನಂಜಯ್ ಇಡೀ ಕುಟುಂಬದ ಜೊತೆ ಬಂದು ಮತದಾನ ಮಾಡಿದ್ದಾರೆ. ತಂದೆ, ತಾಯಿ ಅಜ್ಜಿ, ಸಹೋದರ ಸೇರಿದಂತೆ ಇಡೀ ಕುಟುಂಬದ ಜೊತೆ ಬಂದು ಮತದಾನ ಮಾಡಿದ್ದಾರೆ.
ಧನಂಜಯ್ ಸಹೋದರಿ ರಾಣಿ ಕೂಡ ಮತದಾನ ಮಾಡಿದ್ದಾರೆ. ವೋಟ್ ಮಾಡಿದ ಬಳಿಕ ಧನಂಜಯ್ ಸಹೋದರಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ತಮ್ಮ ಊರಿನ ಬೋರ್ಡ್ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.