2022 ರೌಂಡಪ್: ಕನ್ನಡ ಚಿತ್ರರಂಗದ ಸೋಲರಿಯದ 6 ಸರದಾರರು

Published : Dec 30, 2022, 12:59 PM IST

ಕನ್ನಡ ಸಿನಿ ರಸಿಕರನ್ನು ಮನೋರಂಜಿಸಿರುವ ಟಾಪ್‌ ಬೆಸ್ಟ್‌ ನಾಯಕರಿವರು..... 

PREV
16
2022 ರೌಂಡಪ್: ಕನ್ನಡ ಚಿತ್ರರಂಗದ ಸೋಲರಿಯದ 6 ಸರದಾರರು

ಶರಣ್ (ಗುರು ಶಿಷ್ಯರು): ಜಡೇಶ್‌ ಕುಮಾರ್ ಹಂಪಿ ನಿರ್ದೇಶನ ಮಾಡಿರುವ ಗುರು ಶಿಷ್ಯರು ಸಿನಿಮಾದಲ್ಲಿ ಶರಣ್ ಹಳ್ಳಿ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರಣ್ ವೃತ್ತಿ ಜೀವನದಲ್ಲಿ ಆಯ್ಕೆ ಮಾಡಿಕೊಂಡಿರುವ ವಿಭಿನ್ನ ಕಥೆ ಇದಾಗಿರುವ ಕಾರಣ ಸಿನಿ ರಸಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. 

26

 ಗಣೇಶ್‌ (ಗಾಳಿಪಟ 2):  ಗಾಳಿಪಟ 1 ಸೂಪರ್ ಹಿಟ್ ಆದ ಚೆನ್ನಲ್ಲೇ ಯೋಗರಾಜ್‌ ಭಟ್‌ ಮತ್ತೊಮ್ಮೆ ಗಾಳಿಪಟ 2 ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಎಲ್ಲರನ್ನು ನಗಿಸುತ್ತಾರೆ ಅಳಿಸುತ್ತಾರೆ. 

36

 ಧನಂಜಯ್ (ಹೆಡ್‌ಬುಷ್‌, ಮಾನ್ಸೂನ್ ರಾಗ): ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್‌ಗೆ ಈ ವರ್ಷ ಬಂಪರ್ ಆಫರ್‌ಗಳಿದೆ. ಏಕೆಂದರೆ ಮಾನ್ಸೂನ್ ರಾಗ ಮತ್ತು ಹೆಡ್‌ಬುಷ್‌ ಸಿನಿಮಾ ರಿಲೀಸ್ ಆಗಿತ್ತು. ಎರಡೂ ಸಿನಿಮಾವೂ ತುಂಬಾ ಅಂದ್ರೆ ತುಂಬಾನೇ ವಿಭಿನ್ನವಾಗಿದೆ. 

46

ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ): ‘ಗುಲ್ಟು’ ಸಿನಿಮಾ ಬಳಿಕ ಗುಲ್ಟುನವೀನ್‌ ಎಂದೇ ಕರೆಸಿಕೊಳ್ಳುತ್ತಿರುವ ನವೀನ್‌ ಶಂಕರ್‌ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಹಿಟ್ ಕಂಡರ ನಂತರ ಮೂಲತಃ ನಮ್ಮವರೇ’ ಅನ್ನುವ ಸಿನಿಮಾಕ್ಕೆ ಹೀರೋ ಆಗಿದ್ದಾರೆ.

56

ಪ್ರಮೋದ್ (ಬಾಂಡ್ ರವಿ): ಪ್ರೀಮಿಯರ್ ಪದ್ಮಿನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಮೋಸ್ ಬಾಂಡ್ ರವಿ ಚಿತ್ರದ ಮೂಲಕ ಮಾಸ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

66

ರಾಣಾ (ಏಕ್ ಲವ್ ಯಾ): ಜೋಗಿ ಪ್ರೇಮ್ ನಿರ್ದೇಶನ, ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿರುವ ಏಕ್ ಲವ್ ಯಾ ಸಿನಿಮಾ ಮೂಲಕ ರಕ್ಷಿತಾ ಸಹೋದರ ರಾಣಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ಅನಿಸೋದೇ ಇಲ್ಲ ಅನ್ನುವ ಮಟ್ಟಕ್ಕೆ ಅಭಿನಯಿಸಿದ್ದಾರೆ.

Read more Photos on
click me!

Recommended Stories