ಕಾರ್ ಜೊತೆ ಮನೆ ಭತ್ಯೆ, ಇಲ್ಲಿಐಷಾರಾಮಿ ಜೀವನ ನಡೆಸ್ತಾಳೆ ಮನೆ ಕೆಲ್ಸದಾಕೆ

Published : Apr 15, 2026, 02:25 PM IST

Domestic worker : ಭಾರತ ಹಾಗೂ ವಿದೇಶಿ ಮನೆ ಕೆಲಸಗಾರರ ಮಧ್ಯೆ ವ್ಯತ್ಯಾಸವಿದೆ. ಸಂಬಳದಿಂದ ಹಿಡಿದು ಸೌಲಭ್ಯದವರೆಗೆ ಎಲ್ಲದ್ರಲ್ಲೂ ಸಾಕಷ್ಟು ವ್ಯತ್ಯಾಸ ನೋಡ್ಬಹುದು. ವಿದೇಶದಲ್ಲಿ ಮನೆ ಕೆಲಸಗಾರರಿಗೆ ಎಷ್ಟು ಹಣ ಸಿಗುತ್ತೆ? ಏನೆಲ್ಲ ಸೌಲಭ್ಯ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ. 

PREV
16
ಸಂಬಳ ಹೆಚ್ಚಳಕ್ಕೆ ಪ್ರತಿಭಟನೆ

ನೋಯ್ಡಾದಲ್ಲಿ ಮಂಗಳವಾರ ಮನೆ ಕೆಲಸದವರು ಬೀದಿಗಿಳಿದಿದ್ದರು. ಸಂಬಳ ಏರಿಕೆ ಹಾಗೂ ವಾರಕ್ಕೊಂದು ರಜೆ ಬೇಡಿಕೆಯನ್ನಿಟ್ಟು ಮೇಡ್ ಗಳು ಪ್ರತಿಭಟನೆ ನಡೆಸಿದ್ರು. ಮನೆ ಕೆಲಸ ಮಾಡುವ ಸೇವಕಿಯರ ಈ ಪ್ರತಿಭಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಜನರು ವಿದೇಶಗಳಲ್ಲಿ ಸಿಗುವಂತೆ ಮೇಡ್ ಗಳಿಗೆ ಸೂಕ್ತ ಸಂಬಳ ಹಾಗೂ ಭದ್ರತೆ ಸಿಗ್ಬೇಕಾ ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ವಿದೇಶಗಳಲ್ಲಿ ಮೇಡ್ ಗಳ ಸ್ಥಿತಿ ಭಾರತಕ್ಕಿಂತ ಸಂಪೂರ್ಣ ಭಿನ್ನವಾಗಿದೆ.

26
ಅಮೆರಿಕಾ ಮನೆಕೆಲಸದಾಕೆ ಸಂಬಳ

ಅಮೆರಿಕ ಹಾಗೂ ಯುರೋಪ್ ನಲ್ಲಿ ಮನೆ ಕೆಲಸ ಮಾಡುವ ಕಾರ್ಮಿಕರ ಜೀವನ ವೃತ್ತಿಪರವಾಗಿದೆ. ಅಮೆರಿಕಾದಲ್ಲಿ ಮನೆ ಕೆಲಸವನ್ನು ಐಷಾರಾಮಿಯಾಗಿ ನೋಡಲಾಗುತ್ತದೆ. ಇಲ್ಲಿ ಕಾರ್ಮಿಕರ ಸಂಬಳ ಹೆಚ್ಚಿದೆ. ಹಾಗಾಗಿಯೇ ಇಲ್ಲ ಎಲ್ಲರೂ ಮೇಡ್ ಹೊಂದಲು ಸಾಧ್ಯವಿಲ್ಲ. ಒಬ್ಬ ವೃತ್ತಿಪರ ನಾನಿ ಮತ್ತು ಹೌಸ್ ಕೀಪರ್ ಸಾಮಾನ್ಯ ಸಂಬಳ 25 ಡಾಲರ್ ನಿಂದ 50 ಡಾಲರ್ ಒಳಗಿರುತ್ತದೆ. ಇದು ಪ್ರತಿ ಗಂಟೆ ಲೆಕ್ಕ. ಅಂದ್ರೆ ಮನೆ ಕೆಲದವರು ಒಂದು ಗಂಟೆಗೆ ಸಾವಿರದಿಂದ ನಾಲ್ಕು ಸಾವಿರ ಸಂಬಳ ಪಡೆಯುತ್ತಾರೆ. 2026ರ ವರದಿ ಪ್ರಕಾರ, ನ್ಯೂಯಾರ್ಕ್ ನಲ್ಲಿ ಒಬ್ಬ ಅನುಭವಿ ಮೇಡ್ ವರ್ಷಕ್ಕೆ 60 ರಿಂದ 85 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ.

36
ಕಾರ್ ಸೌಲಭ್ಯ

ಅಮೆರಿಕಾದ ಎಲ್ಲ ಪ್ರದೇಶಕ್ಕೆ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ. ಹಾಗಾಗಿ ಅನೇಕ ಕಡೆ ಮೇಡ್ ತಮ್ಮ ಕಾರ್ ನಲ್ಲಿ ಓಡಾಡ್ತಾರೆ. ಹಳೆಯ ಅಥವಾ ಸಾಮಾನ್ಯ ಕಾರುಗಳನ್ನು ಅವರು ಖರೀದಿ ಮಾಡ್ತಾರೆ. ಮನೆ ಮಾಲೀಕರು ಕಾರ್ ಭತ್ಯೆ ಹಾಗೂ ಗ್ಯಾಸ್ ಭತ್ಯೆ ನೀಡುವುದಿದೆ.

46
ಯುರೋಪ್ ಸಂಬಳ

ಯುರೋಪ್ನಲ್ಲಿ ಕಾನೂನುಗಳು ತುಂಬಾ ಕಟ್ಟುನಿಟ್ಟಾಗಿವೆ. ಅಲ್ಲಿನ ಮನೆ ಕೆಲಸ ಮಾಡುವವರನ್ನು ನೌಕರರನ್ನಾಗಿ ಅಲ್ಲ, ಕೆಲಸಗಾರರೆಂದು ಪರಿಗಣಿಸಲಾಗುತ್ತದೆ. ಬ್ರಿಟನ್ ಮತ್ತು ಫ್ರಾನ್ಸ್ನಂತಹ ದೇಶಗಳಲ್ಲಿ, ಕೆಲಸದ ಸಮಯವನ್ನು ನಿಗದಿಪಡಿಸಲಾಗಿದೆ. ಒಬ್ಬ ಸೇವಕಿ ಸಂಜೆ 5 ಗಂಟೆಯ ನಂತರ ಕೆಲಸ ಮಾಡಿದರೆ, ಅವಳಿಗೆ ಹೆಚ್ಚುವರಿ ಸಂಬಳ ನೀಡಬೇಕು.

56
ಸಂಬಳದ ಜೊತೆ ರಜೆ

ಯುರೋಪ್ನಲ್ಲಿ, ಗೃಹ ಕಾರ್ಮಿಕರು ವಾರ್ಷಿಕವಾಗಿ 20 ರಿಂದ 30 ದಿನಗಳ ವೇತನ ರಜೆ ಮತ್ತು ಆರೋಗ್ಯ ವಿಮೆಯನ್ನು ಪಡೆಯುತ್ತಾರೆ. ಕೆಲಸ ಮುಗಿದ ನಂತ್ರ ಮನೆ ಮಾಲೀಕರು ಅವರನ್ನು ಯಾವುದೇ ಕಾರಣಕ್ಕೂ ಸಂಪರ್ಕಿಸುವಂತಿಲ್ಲ.

66
ಭಾರತ ವರ್ಸಸ್ ವಿದೇಶ

ಭಾರತ ಹಾಗೂ ವಿದೇಶದ ಮೇಡ್ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಬರೀ ಸಂಬಳ ನೋಡಿದ್ರೆ ಸಾಲದು. ವಿದೇಶದಲ್ಲಿ ಮಕ್ಕಳು ಹಾಗೂ ವೃದ್ಧರನ್ನು ನೋಡಿಕೊಳ್ಳಲು ಮೇಡ್ ಸರ್ಟಿಫಿಕೆಟ್ ತೋರಿಸ್ಬೇಕು. ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ. ಮಾಲೀಕರ ಜೊತೆ ಕುಳಿತು ಅವರು ಊಟ ಮಾಡ್ಬಹುದು. ಅಮೆರಿಕಾದಲ್ಲಿ ತಿಂಗಳಿಗೆ 5 ಲಕ್ಷ ಸಂಬಳ ಪಡೆದ್ರೂ ಸಾಮಾನ್ಯ ಮನೆ ಬಾಡಿಗೆ 1 ರಿಂದ 2 ಲಕ್ಷ ಇರುತ್ತದೆ. ಹಾಗೆ ವಿಮೆ ಜವಾಬ್ದಾರಿ ಮನೆ ಕೆಲಸದಾಕೆಯದ್ದಾಗಿರುತ್ತದೆ. ಭಾರತದಲ್ಲಿ ಆಹಾರ, ಬಟ್ಟೆ, ಔಷಧಿ ಖರ್ಚಿಗೆ ಮನೆ ಮಾಲೀಕರೇ ಸಹಾಯ ಮಾಡ್ತಾರೆ.

Read more Photos on
click me!

Recommended Stories