2024ರ ಅತಿ ಹೆಚ್ಚು ಸ್ಯಾಲರಿ ನೀಡುವ ಇಂಜಿನಿಯರಿಂಗ್ ಹುದ್ದೆಗಳಿವು!

First Published | Mar 28, 2024, 5:13 PM IST

ನೀವು ಮುಂದಕ್ಕೆ ಇಂಜಿನಿಯರ್ ಆಗಬೇಕು ಎಂದು ಬಯಸಿದ್ದೀರಾ? ಯಾವ ಇಂಜಿನಿಯರಿಂಗ್ ಮಾಡಿದ್ರೆ ಉತ್ತಮ ಸ್ಯಾಲರಿ ಸಿಗುತ್ತೆ ಅನ್ನೋದನ್ನು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಆ ಬಗ್ಗೆ ಮಾಹಿತಿ. 
 

ನಮ್ಮ ದೇಶದಲ್ಲಿ ಇಂಜಿನಿಯರಿಂಗ್(engineering) ಮಾಡಿರೋರು ಹೆಚ್ಚಿನ ಜನ ಇದ್ದಾರೆ, ಆದರೆ ಇಂಜಿನಿಯರಿಂಗ್ ಮಾಡಿದೋರಿಗೆ ಕೆಲಸ ಸಿಗೋದು ಕಡಿಮೆ ಎನ್ನುತ್ತಾರೆ. ಆದರೆ ನೀವು ಸರಿಯಾಗಿ ಶ್ರಮಪಟ್ಟರೆ, ಖಂಡಿತಾ ಉದ್ಯೋಗ ನಿಮ್ಮದಾಗುತ್ತೆ. ಇಲ್ಲಿದೆ ಅತಿ ಹೆಚ್ಚು ಸ್ಯಾಲರಿ ನೀಡುವಂತಹ ಇಂಜಿನಿಯರಿಂಗ್ ಹುದ್ದೆಗಳ ಬಗ್ಗೆ ಒಂದಿಷ್ಟು ವರದಿ. 
 

ಪೆಟ್ರೋಲಿಯಂ ಎಂಜಿನಿಯರ್ (petroleum engineer)
ಪೆಟ್ರೋಲಿಯಂ ಎಂಜಿನಿಯರ್ ಗಳು ಭೂಗತ ಜಲಾಶಯಗಳಿಂದ ತೈಲ ಮತ್ತು ಅನಿಲವನ್ನು ಹೊರತೆಗೆಯುವ ವಿಧಾನಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಇಂಜಿನಿಯರ್ ಆಗಿದ್ದಾರೆ.

Tap to resize

ಕಂಪ್ಯೂಟರ್ ಹಾರ್ಡ್ ವೇರ್ ಎಂಜಿನಿಯರ್ (Computer Hardware Engineer)
ಕಂಪ್ಯೂಟರ್ ಹಾರ್ಡ್ ವೇರ್ ಎಂಜಿನಿಯರ್ ಗಳು ಕಂಪ್ಯೂಟರ್ ಸಿಸ್ಟಮ್ ಮತ್ತು ಪ್ರೊಸೆಸರ್ ಗಳು, ಮೆಮೊರಿ ಡಿವೈಸ್ ಮತ್ತು ನೆಟ್ ವರ್ಕಿಂಗ್ ಹಾರ್ಡ್ ವೇರ್ ನಂತಹ ಘಟಕಗಳನ್ನು ವಿನ್ಯಾಸಗೊಳಿಸುತ್ತಾರೆ, ಅಭಿವೃದ್ಧಿಪಡಿಸುತ್ತಾರೆ ಮತ್ತು ಪರೀಕ್ಷಿಸುವ ಇಂಜಿನಿಯರ್. 

ಏರೋಸ್ಪೇಸ್ ಎಂಜಿನಿಯರ್ (Aerospace Engineer)
ಏರೋಸ್ಪೇಸ್ ಎಂಜಿನಿಯರ್ ಗಳು ವಿಮಾನ, ಬಾಹ್ಯಾಕಾಶ ನೌಕೆ, ಉಪಗ್ರಹಗಳು ಮತ್ತು ಕ್ಷಿಪಣಿಗಳನ್ನು ವಿನ್ಯಾಸಗೊಳಿಸುತ್ತಾರೆ. ಏರೋಸ್ಪೇಸ್ ಉದ್ಯಮವು  ಸಂಕೀರ್ಣ ಸ್ವರೂಪದ ಕೆಲಸ ಮತ್ತು ಅಗತ್ಯವಿರುವ ವಿಶೇಷ ಕೌಶಲ್ಯಗಳಿಂದಾಗಿ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ನೀಡಲು ಹೆಸರುವಾಸಿಯಾಗಿದೆ.

ಕೆಮಿಕಲ್ ಇಂಜಿನಿಯರ್ (Chemical engineer)
ಕೆಮಿಕಲ್ ಎಂಜಿನಿಯರ್ ಗಳು ಕಚ್ಚಾ ವಸ್ತುಗಳನ್ನು ಇಂಧನಗಳು, ಔಷಧಿಗಳು ಮತ್ತು ರಾಸಾಯನಿಕಗಳಂತಹ ಮೌಲ್ಯಯುತ ಉತ್ಪನ್ನಗಳಾಗಿ ಪರಿವರ್ತಿಸುವ ಪ್ರಕ್ರಿಯೆಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ.

ಎಲೆಕ್ಟ್ರಿಕಲ್ ಎಂಜಿನಿಯರ್ (Electrical Engineer)
ಎಲೆಕ್ಟ್ರಿಕಲ್ ಎಂಜಿನಿಯರ್ ಗಳು ವಿದ್ಯುತ್ ವ್ಯವಸ್ಥೆಗಳು ಮತ್ತು ಉಪಕರಣಗಳನ್ನು ವಿನ್ಯಾಸಗೊಳಿಸುತ್ತಾರೆ, ಅಭಿವೃದ್ಧಿಪಡಿಸುತ್ತಾರೆ ಮತ್ತು ಪರೀಕ್ಷಿಸುತ್ತಾರೆ. ನವೀಕರಿಸಬಹುದಾದ ಇಂಧನ, ಟೆಲಿಕಮ್ಯೂನಿಕೇಶನ್ ಮತ್ತು ಆಟೋಮೇಷನ್ ನಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

ಸಾಫ್ಟ್ವೇರ್ ಎಂಜಿನಿಯರ್ (Software engineer)
ಸಾಫ್ಟ್ವೇರ್ ಎಂಜಿನಿಯರ್ಸ್ Software Applications ಮತ್ತು ಸಿಸ್ಟಮ್ ಡಿಸೈನ್ ಮಾಡುತ್ತಾರೆ, ಅಭಿವೃದ್ಧಿಪಡಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. ತಂತ್ರಜ್ಞಾನ (Technology), ಹಣಕಾಸು (Finance), ಆರೋಗ್ಯ ರಕ್ಷಣೆ (Health Care) ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಬೇಡಿಕೆ ಪ್ರಬಲವಾಗಿದೆ. 

ನ್ಯೂಕ್ಲಿಯರ್ ಇಂಜಿನಿಯರ್ (Nuclear Engineer)
ಪರಮಾಣು ಎಂಜಿನಿಯರ್ಸ್ ಪರಮಾಣು ಶಕ್ತಿ (Automic Energy) ಮತ್ತು ವಿಕಿರಣದಿಂದ ಪ್ರಯೋಜನಗಳನ್ನು ಪಡೆಯಲು ಬಳಸುವ ಪ್ರಕ್ರಿಯೆಗಳು, ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಸಂಶೋಧಿಸುತ್ತಾರೆ ಮತ್ತು ಅಭಿವೃದ್ಧಿಪಡಿಸುತ್ತಾರೆ.

Latest Videos

click me!