ಆಗರ್ಭ ಶ್ರೀಮಂತ ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರ ಸ್ಯಾಲರಿ ಎಷ್ಟಿರಬಹುದು?

First Published | Mar 15, 2024, 3:58 PM IST

ಮಗ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಿಂದಲೇ ಸುದ್ದಿಯಾಗಿರುವ ಮುಖೇಶ್ ಅಂಬಾನಿಯವರು ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಅನ್ನೋದು ಗೊತ್ತಿದೆ. ಆದ್ರೆ ಇವರು ತಮ್ಮ ಮನೆ ಕೆಲಸದವರಿಗೆ ಎಷ್ಟು ಸ್ಯಾಲರಿ ನೀಡುತ್ತಾರೆ ಅನ್ನೋದು ಗೊತ್ತಾ? 
 

ಅಂಬಾನಿ ದುಬಾರಿ ಮನೆ
ವಿಶ್ವದ ಆಗರ್ಭ ಶ್ರೀಮಂತರಲ್ಲಿ (Richest person of the world) ಒಬ್ಬರಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭಾರತದ ಅತ್ಯಂತ ದುಬಾರಿ ಮನೆಯ ಒಡೆಯರು ಅನ್ನೋದು ನಿಜ. ಇವರ ಮನೆ ಯಾವುದೇ ಮಹಲ್ ಗೆ ಕಡಿಮೆ ಏನಿಲ್ಲ. 

ಎಲ್ಲಿದೆ ಅಂಬಾನಿ ಮಹಲ್
ನಮಗೆ ತಿಳಿದಿರುವ ಮಾಹಿತಿಯಂತೆ ಮುಂಬೈನ ಬಿಲೇನಿಯರ್ ರೋ ನಲ್ಲಿರುವ ಅಂಬಾನಿ ಫ್ಯಾಮಿಲಿಗೆ ಸೇರಿದ ಈ ಮನೆ ಬರೋಬ್ಬರಿ 15,000 ಕೋಟಿ ಬೆಲೆ ಬಾಳುತ್ತದೆ. ಈ ಮನೆಗೆ ಅಂಟ್ಲಾಂಟಿಕ್ ಸಾಗರದ ಒಂದು ಐಲ್ಯಾಂಡ್ ಆಗಿರುವ ಆಂಟಿಲಿಯಾದ ಹೆಸರನ್ನು ಇಡಲಾಗಿದೆ. 
 

Tap to resize

ಯಾರ್ಯಾರು ಇದ್ದಾರೆ? 
ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 27 ಅಂತಸ್ತಿನ ಐಷಾರಾಮಿ ಮನೆ ಆಂಟಿಲಿಯಾ (Antilia) ದಲ್ಲಿ, ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾ ಬೆನ್, ಪತ್ನಿ ನೀತಾ, ಇಬ್ಬರು ಪುತ್ರರಾದ ಆಕಾಶ್-ಅನಂತ್, ಸೊಸೆ ಶ್ಲೋಕಾ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ.

ಇಲ್ಲಿ ಎಷ್ಟು ಜನ ಸ್ಟಾಫ್ ಇದ್ದಾರೆ? 
ಆಂಟಿಲಿಯಾದ ಸಂಪೂರ್ಣ ನಿರ್ವಹಿಸಲು ಅಂಬಾನಿ ಸುಮಾರು 600 ಜನ ಸಿಬ್ಬಂದಿ (600 staff) ನೇಮಿಸಿದ್ದಾರೆ. ಇಲ್ಲಿ ಹೆಚ್ಚಿನ ಜನರು 24X7 ಗಂಟೆಗಳ ಕಾಲ ಕೆಲಸ ಮಾಡುತ್ತಲೇ ಇರುತ್ತಾರೆ. ಕೆಲಸದವರನ್ನೂ ಸಹ ಅಂಬಾನಿ ಫ್ಯಾಮಿಲಿ ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತೆ. 

ಸಂಪೂರ್ಣ ನಿರ್ವಹಣೆ
ತೋಟಗಾರರು, ಎಲೆಕ್ಟ್ರಿಷಿಯನ್‌ಗಳು, ಸೆಕ್ಯುರಿಟಿ ಗಾರ್ಡ್‌ಗಳು (security guard), ಪ್ಲಂಬರ್‌ಗಳು, ಚಾಲಕರು, ಸರ್ವೆಂಟ್ಸ್ , ಅಡುಗೆ ಮಾಡುವವರು ಎಲ್ಲರೂ ಸೇರಿ ಸುಮಾರು 600 ಜನರು ಸಂಪೂರ್ಣ ನಿರ್ವಹಣೆ ಮಾಡುತ್ತಾರೆ. ಹಲವರಿಗೆ ಮನೆಯಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. 

ಗ್ಯಾರೇಜ್ ಮತ್ತು ಸರ್ವೀಸ್ ಸ್ಟೇಷನ್
ಆಂಟಿಲಿಯಾದ 6ನೇ ಮಹಡಿಯಲ್ಲಿ ಗ್ಯಾರೇಜ್ ಇದ್ದು, ಇದರಲ್ಲಿ ಸುಮಾರು 168 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಈ ಕಾರುಗಳನ್ನು ಸರ್ವೀಸ್ ಮಾಡಲು 7ನೇ ಮಹಡಿಯಲ್ಲಿ ಸರ್ವೀಸ್ ಸ್ಟೇಷನ್ ಕೂಡ ಸ್ಥಾಪಿಸಲಾಗಿದೆ. ಇಲ್ಲಿ ಹಲವಾರು ಕೆಲಸಗಾರರು ಕಾರ್ಯ ನಿರ್ವಹಿಸುತ್ತಾರೆ.
 

ಬೆಸ್ಟ್ ಉದ್ಯೋಗಿಗಳು
ಅಂಬಾನಿ ಮನೆಯಲ್ಲಿರುವ ಸಿಬ್ಬಂದಿಗಳು ದೇಶದ ಅತ್ಯಂತ ಬೆಸ್ಟ್ ಮತ್ತು ತರಭೇತಿ ಪಡೆದಂತಹ ಉದ್ಯೋಗಿಗಳಾಗಿದ್ದು, ಇವರು ವಿದ್ಯಾವಂತರು ಕೂಡ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಿದೆ. 
 

ಅಂಬಾನಿ ಮನೆ ಸೇವಕಿಯ ಸ್ಯಾಲರಿ ಎಷ್ಟು?
ವರದಿಯ ಪ್ರಕಾರ ಅಂಬಾನಿ ಕುಟುಂಬವು ಮನೆಯ ಪ್ರತಿಯೊಬ್ಬ ಕೆಲಸದವರಿಗೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಬಳ ನೀಡುತ್ತಾರೆ. ಇನ್ನು ಇಲ್ಲಿನ ಹಲವು ಸಿಬ್ಬಂದಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ನೀಡುತ್ತೆ ಎಂದು ತಿಳಿದು ಬಂದಿದೆ. 

Latest Videos

click me!