UKಯಲ್ಲಿ ಜಾಬ್
ನರ್ಸ್‌ಗಳಿಗೆ ಸೂಪರ್ ಜಾಬ್ ಆಫರ್. ನರ್ಸಿಂಗ್ ಪೂರೈಸಿದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿ ಬಂದಿದೆ. ಕೈತುಂಬ ಸಂಬಳ, ಇತರ ಸೌಲಭ್ಯಗಳ ನರ್ಸಿಂಗ್ ಜಾಬ್ ಅರಸಿ ಬಂದಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನರ್ಸಿಂಗ್ ಕೆಲಸಕ್ಕೆ ನೇಮಕಾತಿ ನಡೆಯೆುತ್ತಿದೆ. 40 ಲಕ್ಷ ರೂಪಾಯಿವರೆಗೆ ಸಂಬಳ. ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಳ IELTS/OET, CBT, NMC ಅರ್ಜಿ ಫೀಸ್, ವೀಸಾ, ಫ್ಲೈಟ್ ಟಿಕೆಟ್‌ಗಳಿಗೆ ರಿಫಂಡ್ ಕೂಡ ಇದೆ. ವೇಲ್ಸ್‌ನಲ್ಲಿ ನರ್ಸ್ ಜಾಬ್‌ಗೆ ನೋರ್ಕಾ ರೂಟ್ಸ್ ನೇಮಕಾತಿ ಮಾಡುತ್ತಿದೆ.
ನರ್ಸ್ ಕ್ವಾಲಿಫಿಕೇಶನ್
ಕ್ವಾಲಿಫಿಕೇಶನ್ ಏನು?
ನರ್ಸಿಂಗ್‌ನಲ್ಲಿ ಡಿಗ್ರಿ ಅಥವಾ ಡಿಪ್ಲೊಮಾ ಮಾಡಿರೋರು ಅರ್ಜಿ ಹಾಕಬಹುದು. ಕನಿಷ್ಠ ಆರು ತಿಂಗಳು ಕೆಲಸದ ಅನುಭವ ಇರಬೇಕು. IELTS 7 (ರೈಟಿಂಗ್‌ನಲ್ಲಿ 6.5) ಅಥವಾ OET B (ರೈಟಿಂಗ್‌ನಲ್ಲಿ C+) ಬೇಕು. NMC ರಿಜಿಸ್ಟ್ರೇಷನ್‌ಗೆ ಅರ್ಹತೆ ಹೊಂದಿರಬೇಕು. IELTS/OET ಸರ್ಟಿಫಿಕೇಟ್ 2025 ನವೆಂಬರ್ 15ರವರೆಗೆ ವ್ಯಾಲಿಡ್ ಇರಬೇಕು.
ಅರ್ಜಿ ಹಾಕೋದು ಹೇಗೆ?
ಅರ್ಜಿ ಹಾಕೋದು ಹೇಗೆ?
www.norkaroots.org ಅಥವಾ www.nifl.norkaroots.org ವೆಬ್‌ಸೈಟ್ ನೋಡಿ. CV ಮತ್ತು IELTS/OET ಮಾರ್ಕ್ಸ್ ಕಾರ್ಡ್ ಜೊತೆ ಅಕ್ಟೋಬರ್ 25ರೊಳಗೆ ಅರ್ಜಿ ಹಾಕಿ. ಆಯ್ಕೆಯಾದವರನ್ನ 2025 ಮಾರ್ಚ್ ನಂತರ ನೇಮಕ ಮಾಡಲಾಗುತ್ತದೆ. ಅರ್ಜಿ ಹಾಕುವಾಗ ಸೂಕ್ತ ದಾಖಲೆಗಳನ್ನು ಲಗತ್ತಿಸಬೇಕು. ವಿವರಗಳನ್ನು ಭರ್ತಿ ಮಾಡಬೇಕು.
IELTS/OET, CBT, NMC ಅರ್ಜಿ ಫೀಸ್, ವೀಸಾ, ಫ್ಲೈಟ್ ಟಿಕೆಟ್‌ಗಳಿಗೆ ರಿಫಂಡ್ ಸೌಲಭ್ಯ ಇದೆ. ಏರ್‌ಪೋರ್ಟ್‌ನಿಂದ ಫ್ರೀ ಟ್ರಾವೆಲ್. ಒಂದು ತಿಂಗಳು ಫ್ರೀ ವಸತಿ. OSCE ಪರೀಕ್ಷೆ ಖರ್ಚು ಕೂಡ ಯುಕೆ ನೀಡಲಿದೆ. ಉತ್ತಮ ಪಾವತಿ, ಇತರ ಸೌಲಭ್ಯ, ಕನಿಷ್ಠ ಗಂಟೆ ಕೆಲಸ ಸೇರಿದಂತೆ ಉತ್ತಮ ಕೆಲಸದ ವಾತಾವರಣ ಕೂಡ ಇರಲಿದೆ.
ರೂಪಾಯಿಗಳಲ್ಲಿ ಸಂಬಳ
NMC ರಿಜಿಸ್ಟ್ರೇಷನ್ ಮೊದಲು £26,928 (₹30 ಲಕ್ಷ) ಸಂಬಳ. NMC ರಿಜಿಸ್ಟ್ರೇಷನ್ ಆದ್ಮೇಲೆ £30,420 ರಿಂದ £37,030 ವರೆಗೆ (₹40 ಲಕ್ಷ) ಸಂಬಳ. 5 ವರ್ಷಗಳಿಗೆ ₹5.74 ಲಕ್ಷ ಫೈನಾನ್ಶಿಯಲ್ ಅಸಿಸ್ಟೆನ್ಸ್ ಕೂಡ ಇದೆ. ಹೆಚ್ಚಿನ ಮಾಹಿತಿಗೆ ನೋರ್ಕಾ ಗ್ಲೋಬಲ್ ಕಾಲ್ ಸೆಂಟರ್‌ಗೆ 1800 425 3939 ಅಥವಾ +91-8802 012 345 ನಂಬರ್‌ಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು. ಇದೇ ವೇಳೆ ನಕಲಿ ಎಜನ್ಸಿಗಳ ಕರೆ, ವೆಬ್‌ಸೈಟ್ ಮೂಲಕ ಅರ್ಜಿ ಹಾಕಿ ಮೋಸ ಹೋಗಬೇಡಿ. ಅರ್ಹತೆ ಆಧಾರದಲ್ಲಿ ನಡೆಯುವ ನೇಮಕಾತಿ ಇದು. ಹೀಗಾಗಿ ಹಣ ಕಟ್ಟಿ ಮೋಸ ಹೋಗಬೇಡಿ.